ನವದೆಹಲಿ:-ಯಮುನಾ ನದಿಗೆ ವಿಷ ಬೆರೆಸಿದ ಆರೋಪಕ್ಕೆ ಸಂಬಂಧಿಸಿದಂತೆ ನೀರು ಕುಡಿದು ಕೇಜ್ರಿವಾಲ್ಗೆ ಹರಿಯಾಣ ಸಿಎಂ ಟಕ್ಕರ್ ಕೊಟ್ಟಿದ್ದಾರೆ
ಮೈಕ್ರೋ ಫೈನಾನ್ಸ್ ಸಾಲ ವಸೂಲಾತಿಗೆ ಕಿರುಕುಳ ನೀಡಿದರೆ ದೂರು ಸಲ್ಲಿಸಿ: ಡಾ: ಕುಮಾರ!
ನಯಾಬ್ ಸೈನಿ ಅವರು ದೆಹಲಿಯ ಪಲ್ಲಾ ಗ್ರಾಮ ದಾಟಿ ಹರಿಯುತ್ತಿದ್ದ ನದಿಯಿಂದ ನೀರನ್ನು ತೆಗೆದುಕೊಂಡು ಸೇವಿಸಿದ್ದಾರೆ. ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಹಾಕಿರುವ ಅವರು, ನಾನು ಹರಿಯಾಣ ಗಡಿಯಲ್ಲಿ ಪವಿತ್ರ ಯಮುನೆಯ ನೀರನ್ನು ಕುಡಿದೆ. ದೆಹಲಿ ಸಿಎಂ ಅತಿಶಿ ಅವರು ಬಂದಿಲ್ಲ. ಅವರು ಸುಳ್ಳು ಹೇಳುತ್ತಿರಬೇಕು. ಎಎಪಿಯ ಸುಳ್ಳು ಕೆಲಸ ಮಾಡಲ್ಲ ಎಂದು ಟಾಂಗ್ ಕೊಟ್ಟಿದ್ದಾರೆ.
ದೆಹಲಿಯ ದೇವರಂತಹ ಜನರು ಈ ವಂಚಕರನ್ನು ಗುರುತಿಸಿದ್ದಾರೆ. ಫೆ.5 ರಂದು ಎಎಪಿಯ ವಂಚನೆಯ ಯುಗ ಅಂತ್ಯಗೊಳ್ಳುವುದು ನಿಶ್ಚಿತ ಎಂದು ವಾಗ್ದಾಳಿ ನಡೆಸಿದ್ದಾರೆ.