ಬೆಂಗಳೂರು : ಹಿರಿಯ ಕೆಎಎಸ್ ಅಧಿಕಾರಿ ವಿರುದ್ದ ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿದೆ. ಬಿಬಿಎಂಪಿ ಕೇಂದ್ರ ಕಚೇರಿಯ ಆಸ್ತಿ ವಿಭಾಗದ ಸಹಾಯಕ ಆಯುಕ್ತರ ಶ್ರೀನಿವಾಸಮೂರ್ತಿ ವಿರುದ್ಧ ಕಚೇರಿಯ ಮಹಿಳಾ ಸಿಬ್ಬಂದಿಯೇ ಗಂಭೀರ ಆರೋಪ ಮಾಡಿದ್ದಾರೆ.
ಶ್ರೀನಿವಾಸಮೂರ್ತಿ ಅವರು ಪದೇ ಪದೇ ಮಹಿಳಾ ಸಿಬ್ಬಂದಿಗೆ ಕಿರುಕುಳ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಹಲವು ಬಾರಿ ಮಹಿಳಾ ಸಿಬ್ಬಂದಿಯಿಂದ ವಿಶೇಷ ಆಯುಕ್ತರಿಗೆ ಪತ್ರ ಬರೆದು, ಎರಡು ಮೂರು ಬಾರಿ ದೂರು ಕೊಟ್ಟರೂ ಸಹ ಹಿರಿಯ ಅಧಿಕಾರಿಗಳು ಕ್ಯಾರೆ ಎನ್ನಲಿಲ್ಲ. ಈ ಹಿಂದೆ ಪಾಲಿಕೆ ನೌಕರರ ಸಂಘದ ಮೂಲಕ ರಾಜಿ ಸಂಧಾನ ಕೂಡ ಆಗಿತ್ತು . ರಾಜಿ ಸಂಧಾನದ ವೇಳೆ ಶ್ರೀನಿವಾಸ ಮೂರ್ತಿಗೆ ಎಚ್ಚರಕೆ ನೀಡಲಾಗಿತ್ತು. ಆದರೂ ಸಹಾಯಕ ಆಯುಕ್ತ ಮತ್ತೆ ಅದೇ ಚಾಳಿ ಮುಂದುವರಿಸಿದ್ದಾರೆ ಎಂದು ನೌಕರರ ಸಂಘ ಆರೋಪ ಮಾಡಿದೆ.
ಈ ಬಗ್ಗೆ ಮುಖ್ಯ ಆಯುಕ್ತರಿಗೆ ಪತ್ರ ಬರೆದಿರುವ ಬಿಬಿಎಂಪಿ ನೌಕರರ ಸಂಘದ ಅಧ್ಯಕ್ಷ ಅಮೃತ್ ರಾಜ್ ಮುಖ್ಯ ಆಯುಕ್ತರಿಗೆ ಪತ್ರ ಬರೆದಿದ್ದು, ಶ್ರೀನಿವಾಸಮೂರ್ತಿ ಪ್ರತಿನಿತ್ಯ ಮಹಿಳಾ ಸಿಬ್ಬಂದಿಯನ್ನು ಕೊಠಡಿಗೆ ಕರೆಸಿ ಲೈಂಗಿಕವಾಗಿ ನಿಂದನೆ, ಅನಾವಶ್ಯಕವಾಗಿ ಅಸಂಬದ್ಧ ವಿಷಯಗಳ ಮಾತನಾಡಿ ಕಿರುಕುಳ, ಕರ್ತವ್ಯಕ್ಕೆ ಅಡ್ಡಿಪಡಿಸೋದು, ಏರು ಧ್ವನಿಯಲ್ಲಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದರೂ ಎಂದು ಮಹಿಳಾ ಸಿಬ್ಬಂದಿ ಆರೋಪಿಸಿದ್ದಾರೆ. ಈ ಬಗ್ಗೆ ಆಯುಕ್ತರ ಗಮನಕ್ಕೆ ತಂದರೆ, ನಿಮ್ಮ ಸೇವ ಪುಸ್ತಕದಲ್ಲಿ ರೀ ಮಾರ್ಕ್ ಬರಿತೇನೆ ಅಂತ ಬೆದರಿಕೆ ಹಾಕಿದ್ದಾರೆ. ಶ್ರೀನಿವಾಸ್ ಮೂರ್ತಿ ಅವರ ಈ ವರ್ತನೆಯಿಂಧಾಗಿ ಕಛೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರೋ ಸಿಬ್ಬಂದಿಗಳು ಮಾನಸಿಕವಾಗಿ ಹಾಗೂ ದೈಹಿಕವಾಗಿ ಖಿನ್ನತೆ ಉಂಟಾಗಿದ್ದು, ಸಹಾಯಕ ಆಯುಕ್ತ ಶ್ರೀನಿವಾಸ ಮೂರ್ತಿಯನ್ನು ಬೇರೆ ಕಡೆ ವರ್ಗಾವಣೆಗೆ ಆಗ್ರಹಿಸಿದ್ದಾರೆ. ಇಲ್ಲವಾದರೆ ಈ ಕಛೇರಿಯಲ್ಲಿ ಕೆಲಸ ಮಾಡುತ್ತಿರೋ ಎಲ್ಲಾ ಸಿಬ್ಬಂದಿಗಳನ್ನು ಬೇರೆ ಕಡೆ ವರ್ಗಾವಣೆ ಮಾಡಿ ಎಂದು ಒತ್ತಾಯಿಸಿದ್ದಾರೆ.