ಹೇಮಾ ಕಮಿಡಿ ವರದಿ ಬಿಡುಗಡೆಯಾದ ಬಳಿಕ ಮಲಯಾಳಂ ಚಿತ್ರರಂಗ ಸಖತ್ ಸದ್ದು ಮಾಡುತ್ತಿವೆ. ಹೇಮಾ ವರದಿಯಲ್ಲಿ ಮಲಯಾಳಂ ಚಿತ್ರರಂಗದ ಕರಾಳ ಸತ್ಯ ಬೆಳಕಿಗೆ ಬಂದಿದೆ. ವ್ಯಕ್ತಿಯೋರ್ವವ ನನಗೆ ಮಲಯಾಳಂ ಖ್ಯಾತ ನಿರ್ದೇಶಕ ರಂಜಿತ್ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ದೂರು ನೀಡಿದ್ದಾರೆ. ನೊಂದ ವ್ಯಕ್ತಿ ಬೆಂಗಳೂರಿನ ಹೋಟೆಲ್ನಲ್ಲಿ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ರು. ಈ ಪ್ರಕರಣದ ತನಿಖೆಯನ್ನು ಬೆಂಗಳೂರು ಪೊಲೀಸರು ನಡೆಸುತ್ತಿದ್ದಾರೆ.
ಬೆಂಗಳೂರಿನ ಏರ್ಪೋರ್ಟ್ ಠಾಣೆಯಿಂದ ಅಶೋಕನಗರ ಠಾಣೆಗೆ ಪ್ರಕರಣವನ್ನು ವರ್ಗಾವಣೆ ಮಾಡಲಾಗಿದೆ. ಅಶೋಕನಗರ ಠಾಣಾ ವ್ಯಾಪ್ತಿಯ ಖಾಸಗಿ ಹೋಟೆಲ್ ನಲ್ಲಿ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಕೇಳಿ ಬಂದಿದೆ. 2012ರಲ್ಲಿ ಯುವಕನಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎನ್ನುವ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲಾಗ್ತಿದೆ. ಐಪಿಸಿ ಸೆಕ್ಷನ್ 377 ಮತ್ತು ಐಟಿ ಕಾಯ್ದೆ 66 ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ದೂರದಾರ ವ್ಯಕ್ತಿಗೆ ‘ಬಾವುಟ್ಟಿಯುದೆ ನಮತ್ತಿಲ್’ ಸಿನಿಮಾದ ಶೂಟಿಂಗ್ ನಲ್ಲಿ ರಂಜಿತ್ ಗೆ ಪರಿಚಯವಾಗಿದ್ದ ಎನ್ನಲಾಗ್ತಿದೆ. ನಂತ್ರ ಬೆಂಗಳೂರು ಖಾಸಗಿ ಹೋಟೆಲ್ಗೆ ಫೋನ್ ಮಾಡಿ ಬರಲು ಹೇಳಿದ್ದ. ರಾತ್ರಿ ಪೂರ್ತಿ ಹೋಟೆಲ್ ನ ರೂಮ್ ನಲ್ಲಿ ಕಿರುಕುಳ ನೀಡಿದೆ ಎಂದು ಆರೋಪಿಸಿದ್ದಾರೆ. ಸದ್ಯ ಅರೋಪಿ ರಂಜಿತ್ ನನ್ನ ವಶಕ್ಕೆ ಪಡೆದು ವಿಚಾರಣೆ ಮಾಡಲು ಪೊಲೀಸರು ಮುಂದಾಗಿದ್ದಾರೆ.
ಈ ಬಗ್ಗೆ ಹೇಮಾ ಕಮಿಟಿ ಮುಂದೆ ಕೂಡ ದೂರುದಾರ ಹೇಳಿಕೊಂಡಿದ್ದನಂತೆ. ಬಳಿಕ ಕೇರಳದ ಕಸಬಾ ಪೊಲೀಸ್ ಠಾಣೆ ಯಲ್ಲಿ ಕೇಸ್ ದಾಖಲಾಗಿತ್ತು. ಪ್ರಕರಣ ಕರ್ನಾಟಕದ ಬೆಂಗಳೂರಿನ ಇಂಟರ್ನ್ಯಾಷನಲ್ ಏರ್ಪೋರ್ಟ್ ಪೊಲೀಸ್ ಠಾಣೆ ಗೆ ವರ್ಗಾವಣೆ ಆಗಿತ್ತು. ಪ್ರಕರಣ ದಾಖಲಿಸಿ ತನಿಖೆ ನಡೆಸಿದ ಪೊಲೀಸ್ರು, ಹೋಟೆಲ್ ಅಶೋಕನಗರ ಠಾಣಾ ವ್ಯಾಪ್ತಿಗೆ ಬಂದ ಹಿನ್ನೆಲೆ ಕೇಸ್ ವರ್ಗಾವಣೆ ಮಾಡಲಾಗಿದೆ.