ಬಾಲಿವುಡ್ ನಟ ವರುಣ್ ಧವನ್ ಸಹ ನಟಿಯರೊಂದಿಗೆ ಮಾತನಾಡುವಾಗ ಕೆಲವೊಮ್ಮೆ ಮಿತಿಗಳನ್ನು ಉಲ್ಲಂಘಿಸುತ್ತಾರೆ ಎಂದು ಆರೋಪ ಕೇಳಿ ಬಂದಿತ್ತು. ಜೊತೆಗೆ ಈ ಹಿಂದೆ ವರುಣ್ ಧವನ್ ಅವರ ಕೆಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದರಲ್ಲಿ ವರುಣ್ ನಟಿ ಕಿಯಾರಾ ಅಡ್ವಾಣಿ ಅವರ ಅನುಮತಿಯಿಲ್ಲದೆ ಆಕೆಯ ಕೆನ್ನೆಗೆ ಚುಂಬಿಸುತ್ತಿದ್ದರು. ಲೈವ್ ಈವೆಂಟ್ನಲ್ಲಿ ನಟಿ ಆಲಿಯಾ ಭಟ್ ಅವರ ಸೊಂಟವನ್ನು ಮುಟ್ಟಿದ್ದರು. ಆ ಬಳಿಕ ನಟಿಯರ ಜೊತೆ ವರುಣ್ ನಡುವಳಿಕೆ ಸರಿಯಿಲ್ಲ ಎಂದು ಹಲವರು ದೂರಿದ್ದರು. ಇದೀಗ ವರುಣ್ ಅವರೇ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಇತ್ತೀಚಿನ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದ ವೇಳೆ ವರುಣ್ ಧವನ್ ಅವರಿಗೆ ಈ ಬಗ್ಗೆ ಪ್ರಶ್ನೆ ಕೇಳಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ನಟ, ‘ನನ್ನ ಸಹ ಕಲಾವಿದರ ನಾನು ತುಂಬಾ ಮೋಜು ಮಾಡುತ್ತೇನೆ. ಆದರೆ ಯಾರೂ ಅದರ ಬಗ್ಗೆ ತಪ್ಪಾಗಿ ಏನನ್ನೂ ಹೇಳುವುದಿಲ್ಲ’ ಎಂದು ವರುಣ್ ಧವನ್ ಹೇಳಿದರು. ಈ ವೇಳೆ ಅವರಿಗೆ ಕಿಯಾರಾ ಜೊತೆಗಿನ ಚುಂಬನದ ದೃಶ್ಯದ ಕೇಳಲಾಯಿತು. ಇದಕ್ಕೆ ಅವರು ನೇರ ಉತ್ತರ ನೀಡಿದ್ದಾರೆ.
‘ಆ ಮುತ್ತು ಕೊಡವ ಬಗ್ಗೆ ಮೊದಲೇ ಪ್ಲಾನ್ ಮಾಡಿದ್ದೆವು. ಕಿಯಾರಾ ಮತ್ತು ನಾನು ಇಬ್ಬರೂ ಆ ಕ್ಲಿಪ್ ಅನ್ನು ಪೋಸ್ಟ್ ಮಾಡಿದ್ದೇವೆ. ನಾವು ಆ ವೀಡಿಯೊವನ್ನು ಚಿತ್ರೀಕರಿಸಿದ್ದೇವು. ಅವರು ಇದೇ ರೀತಿಯದ್ದನ್ನು ಬಯಸಿದ್ದರು. ಹಾಗಾಗಿ ನಾವಿಬ್ಬರೂ ಆಗಲೇ ನಿರ್ಧರಿಸಿದ್ದೆವು. ಕಿಯಾರಾ ತುಂಬಾ ಒಳ್ಳೆಯ ನಟಿ. ಅದಕ್ಕೇ ಆ ವಿಡಿಯೋದಲ್ಲಿ ಈ ರೀತಿ ಪ್ರತಿಕ್ರಿಯೆ ನೀಡಿದ್ದಾಳೆ. ಆದರೆ ಆ ಚುಂಬನದ ದೃಶ್ಯವನ್ನು ಮೊದಲೇ ಯೋಜಿಸಲಾಗಿತ್ತು’ ಎಂದು ವರುಣ್ ಧವನ್ ಹೇಳಿದ್ದಾರೆ.
‘ಜಗ್ ಜಗ್ ಜಿಯೋ’ ಚಿತ್ರದ ಪ್ರಚಾರಕ್ಕಾಗಿ ಆಯೋಜಿಸಲಾದ ಸಮಾರಂಭದಲ್ಲಿ, ವರುಣ್ ಅವರು ಕಿಯಾರಾ ಅವರ ಸೊಂಟವನ್ನು ಹಿಡಿದು ಈಜುಕೊಳಕ್ಕೆ ತಳ್ಳಲು ಪ್ರಯತ್ನಿಸಿದರು. ಆದರೆ ಅವರು ಕಿಯಾರಾನ ಕೊಳಕ್ಕೆ ತಳ್ಳುವುದಿಲ್ಲ. ಕಿಯಾರಾನ ಹೆದರಿಸಲು ಅವರು ಪ್ರಯತ್ನಿಸಿದ್ದರು. ನಂತರ ಕಿಯಾರಾ ಸಿಟ್ಟಿನಿಂದ ‘ನಿಲ್ಲಿಸಿ’ ಎಂದಿದ್ದರು. ಘಟನೆಯ ಬಗ್ಗೆ ವರುಣ್ ಹೇಳಿದ್ದು, ‘ಇದನ್ನು ಮೊದಲೇ ಪ್ಲಾನ್ ಮಾಡಿರಲಿಲ್ಲ. ನಾನು ಉದ್ದೇಶಪೂರ್ವಕವಾಗಿ ಮಾಡಿದ್ದೇನೆ. ಆದರೆ ಅದೆಲ್ಲ ತಮಾಷೆಯಾಗಿತ್ತು. ನಾನು ಅಂತಹ ಮೋಜಿನ ಸ್ವಭಾವದವನು’ ಎಂದಿದ್ದಾರೆ ಅವರು.
ಲೈವ್ ಈವೆಂಟ್ನಲ್ಲಿ ವರುಣ್ ಆಲಿಯಾ ಸೊಂಟವನ್ನು ಮುಟ್ಟಿದ್ದರ ಬಗ್ಗೆಯೂ ಅವರು ಮಾತನಾಡಿದ್ದಾರೆ. ‘ನಾನು ಅದನ್ನು ತಮಾಷೆಗಾಗಿ ಮಾಡಿದ್ದೇನೆ. ಇದನ್ನು ಫ್ಲರ್ಟಿಂಗ್ ಎಂದು ಕರೆಯಲಾಗುವುದಿಲ್ಲ. ನಾವಿಬ್ಬರು ಒಳ್ಳೆ ಫ್ರೆಂಡ್ಸ್’ ಎಂದು ವರುಣ್ ಧವನ್ ಸ್ಪಷ್ಟನೆ ನೀಡಿದ್ದಾರೆ.