ತುಮಕೂರು: ತುಮಕೂರು ತಾಲೂಕಿನ ಹೊನಸಿಗೆರೆ ಗ್ರಾಮದ ಕೆರೆಯಲ್ಲಿ ಅಕ್ರಮ ಮಣ್ಣು ದಂಧೆ ಎಗ್ಗಿಲ್ಲದೇ ಸಾಗಿದೆ. ಈ ಕೆರೆ ಪ್ರಾತ್ರದಲ್ಲಿ ಯಾವುದೇ ಮಣ್ಣು ಟೆಂಡರ್ ಇಲ್ಲ. ಇಲ್ಲಿ ನಡೀಯುತ್ತಿರೋಮಣ್ಣು ಗಣಿಗಾರಿಕೆ ಸಂಪೂರ್ಣ ಅಕ್ರಮವಾಗಿದೆ. ಹಗಲು ರಾತ್ರಿ ಎನ್ನದೇ ದಂಧೆಕೋರರು ಕೆರೆ ಒಡಲು ಬಗೆದು ಮರಳು ಹೆಕ್ಕುತ್ತಿದ್ದಾರೆ.
ಕೆಲ ಸ್ಥಳೀಯರು ಜೆಸಿಬಿಗಳು ಹಾಗೂ ಟ್ರಾಕ್ಟರ್ ಗಳನ್ನ ಇಟ್ಟು ಕೆರೆಯಲ್ಲಿ ಮಣ್ಣು ಸಾಗಾಟ ಮಾಡುತ್ತಿದ್ದಾರೆ. ಎಲ್ಲ ಕಾನೂನುಗಳು ಗಾಳಿಗೆ ತೂರಿ ಎಗ್ಗಿಲ್ಲದೇ ಅಕ್ರಮ ಮಣ್ಣು ಗಣಿಗಾರಿಕೆ ನಡೆದ್ರೂ ಗಣಿ ಹಾಗೂ ಕಂದಾಯ ಇಲಾಖೆ ಡೋಂಟ್ ಕೇರ್ ಅಂತಿವೆ. ಇದು ರೈತರು, ನದಿ ಪಾತ್ರದ ಗ್ರಾಮಗಳ ಜನ್ರ ಆಕ್ರೋಶಕ್ಕೆ ಕಾರಣವಾಗಿದೆ.