ಅಹಮದಾಬಾದ್: ಭಾರತ ಮತ್ತು ಆಸ್ಟ್ರೇಲಿಯಾ(India vs Australia, Final) ನಡುವಣ ವಿಶ್ವಕಪ್ ಫೈನಲ್ ಪಂದ್ಯ ಕೆಲವೇ ಕ್ಷಣದಲ್ಲಿ ಆರಂಭಗೊಳ್ಳಲಿದೆ. ಪಂದ್ಯ ಆರಂಭಕ್ಕೂ ಮುನ್ನ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಭಾರತ ತಂಡಕ್ಕೆ ಶುಭ ಹಾರೈಸಿದ್ದಾರೆ.
“ಆಲ್ ದಿ ಬೆಸ್ಟ್ ಟೀಂ ಇಂಡಿಯಾ! 140 ಕೋಟಿ ಭಾರತೀಯರು ನಿಮಗಾಗಿ ಹುರಿದುಂಬಿಸುತ್ತಿದ್ದಾರೆ. ನೀಮ್ಮ ಪ್ರದರ್ಶನ ಪ್ರಕಾಶಮಾನವಾಗಿ ಹೊಳೆಯಲಿ, ಚೆನ್ನಾಗಿ ಆಡಿ ಮತ್ತು ಕ್ರೀಡಾ ಮನೋಭಾವವನ್ನು ಎತ್ತಿ ಹಿಡಿಯಿರಿ” ಎಂದು ಟ್ವೀಟ್ ಮಾಡುವ ಮೂಲಕ ಮೋದಿ ಶುಭ ಹಾರೈಸಿದ್ದಾರೆ.