ಪ್ರತಿಯೊಬ್ಬರ ಜೀವನದಲ್ಲೂ ಕಚಗುಳಿ ಇಟ್ಟಂಥ ಮನಸ್ಸಿನಲ್ಲಿ ಏನೋ ಒಂಥರಾ ಅನುಭವ ನೀಡುವ ಆಕರ್ಷಣೆ ಎಂದೂ ಮರೆಯಲಾಗದು ಮೊದಲ ಪ್ರೀತಿ ಈ ಪದ ಕೇಳುವಾಗಲೇ ಒಂದು ರೀತಿಯ ಕಚಗುಳಿ ಇಟ್ಟಂತೆ ಅನುಭವ
ಪ್ರತಿಯೊಬ್ಬರ ಜೀವನದಲ್ಲಿ ಪ್ರೀತಿ ಹುಟ್ಟಿರುತ್ತದೆ ಹಾಗೆ ಪ್ರೀತಿಗೆ ವಯಸ್ಸು ಇಲ್ಲ ಕೆಲವೊಬ್ಬರ ಜೀವನದಲ್ಲಿ ಶಾಲಾ ದಿನಗಳಲ್ಲಿ ಪ್ರೀತಿ ಹುಟ್ಟಿರುತ್ತದೆ ಇನ್ನು ಕೆಲವರ ಜೀವನದಲ್ಲಿ ಕಾಲೇಜು ಮೂರು ದಿನಗಳಲ್ಲಿ ಮೊದಲ ಪ್ರೀತಿ
ಹುಡುಗ ಹುಡುಗಿಯರ ಅದೇ ಅರಿಯದ ವಯಸ್ಸಿನಲ್ಲಿ ಆಗುವ ಈ ಮೊದಲ ಪ್ರೀತಿ ಮರುಭೂಮಿಯಲ್ಲಿ ಮಳೆ ಬಂದಂತೆ
ಆಕಾಶದಲ್ಲಿ ಮಿನುಗುತ್ತಿರುವ ನಕ್ಷತ್ರಗಳು ಕೈಗೆ ಸಿಗುವಂತೆ ಮತ್ತು ಅಮಾಸೆ ಕತ್ತಲಂತಾದ ಮನಸ್ಸಿಗೆ ಬೆಳದಿಂಗಳನ್ನು ನೀಡುವ ಚಂದಿರನಂತೆ ಈ ಮೊದಲ ಪ್ರೀತಿ ಅನುಭವ ನೀಡುತ್ತದೆ .
ನನಗೆ ಪ್ರೀತಿ ಎಂದರೆ ಏನ್ನು ತಿಳಿದೇ ಇರಲಿಲ್ಲ ಪ್ರೀತಿ ಯಾವ ರೀತಿ ಆಗುತ್ತದೆ ಎಂದು ತಿಳಿದೇ ಇರಲಿಲ್ಲ
ತಿಳಿಯದ ವಯಸ್ಸಿನಲ್ಲಿ ಬಂದು ಹೋದ ಗೆಳತಿ ! ಈ ಗೆಳತಿ ಬಗ್ಗೆ ತಿಳಿಯಲು ನಿಮ್ಮ ಕುತೂಹಲ ಇದೇ ? ಶಾಲೆಗೆ ಹೋಗುವ ಸಮಯಕ್ಕೆ ಆಗೋ ಪ್ರೀತಿ ಇದು ಮನಸ್ಸು ಚಂಚಲ ಆಗುತ್ತಿರುತ್ತದೆ ಶಾಲೆ ಹೋಗುವ ವಯಸ್ಸಿನಲ್ಲಿ ಜಗತ್ತು ರಂಗುರಂಗಾಗಿ ಕಾಣುತ್ತದೆ. ಆ ಸಮಯದಲ್ಲಿ ಮನಸ್ಸಿನಲ್ಲಿ ಹೊಸದೇನೂ ಆಕರ್ಷಣೆ ಆಗುತ್ತದೆ .
ತರಗತಿಯಲ್ಲಿ ಆ ಬ್ರಿಲಿಯಂಟ್ ಹುಡುಗನೋ ಅಥವಾ ಸೈಲೆಂಟ್ ಹುಡುಗಿಯನೋ ಮನಸಿನಲ್ಲಿ ತುಂಬಾ ಹತ್ತಿರವಾಗಿ ಬಿಡುತ್ತಾರೆ ಹಾಗಂತ ಇದು ಪ್ರೀತಿನಾ ?ನೋ ವೇ ಚಾನ್ಸೇ ಇಲ್ಲ ಇದು ಆಕರ್ಷಣೆಯಷ್ಟೆ
ಈ ಮೊದಲ ಪ್ರೀತಿ ಹೇಗಾಗುತ್ತದೆ ಎನ್ನುವುದು ಗೊತ್ತಾಗೋಲ್ಲ, ನೋಡ ನೋಡುತ್ತಾ ಲೇ ಆ ವ್ಯಕ್ತಿ ಇಷ್ಟವಾಗಿಬಿಡುತ್ತಾರೆ ಅವರ ಒಂದು ಸಾಲಿಗೆ ಕಣ್ಣೋಟಕ್ಕೆ ಮನಸ್ಸು ಹಾತೊರೆಯುತ್ತದೆ , ಆದರೆ ಅವರ ಜೊತೆ ಮಾತನಾಡಬೇಕು ಜೊತೆಯಾಗಿರಬೇಕು ಅನಿಸುತ್ತದೆ .
ನನಗೆ ಶಾಲೆ ದಿನಗಳ ನನ್ನ ಮೊದಲ ಪ್ರೀತಿ ಆಗಿತ್ತು .ನಾನು ಮೊದ ಮೊದಲು ಹುಡುಗಿಯರನ್ನು ಮಾತನಾಡಿಸಲು ಹೆದರುತ್ತಿದ್ದೆ ಆದರೆ ನಮ್ಮ ಕ್ಲಾಸ್ ನ ಒಂದು ಹುಡುಗಿ ನನ್ನ ಹತ್ತಿರ ಪುಸ್ತಕವನ್ನು ಕೇಳುವ ವಿಚಾರದಲ್ಲಿ ನನ್ನನ್ನು ಮಾತನಾಡಿಸಿದ್ದಳು, ಅವಳ ಆ ಮಾತುಗಳು ರಾತ. ಕಾಲೇಜು ವಿದ್ಯಾಭ್ಯಾಸ ಮುಗಿದ ನಂತರ ನನಗೆ ಸಿಗದೆ ಬೇರೊಬ್ಬರನ್ನು ಮದುವೆಯಾಗಿ ಹೋದವಳು ಕೊನೆಗೆ ನನ್ನಲ್ಲಿ ಉಳಿದದ್ದು ಮಾತ್ರ ಅವಳ ನೆನಪುಗಳು…!!!
ಸಿಡಿ ಚನ್ನಕೇಶವ 15ನೇ ವಾರ್ಡ್ ರಾಮಲಿಂಗಮ್ಮ ಗುಡಿ ಹತ್ತಿರ ಕಂಪ್ಲಿ ಹೊಸಪೇಟೆ