ಕಲಘಟಗಿ: ಕನ್ನಡ ಹಬ್ಬವನ್ನು ನಾವೆಲ್ಲರೂ ಸಂಭ್ರಮ ಸಡಗರದಿಂದ ಆಚರಿಸುತ್ತಿದ್ದು, ಇದು ನಮ್ಮೆಲ್ಲರ ಅಸ್ಥಿತೆಯ ಹಬ್ಬವಾಗಿದೆ ಎಂದು ತಾಲೂಕು ತಹಶೀಲ್ದಾರ್ ವೀರೇಶ ಮುಳಗುಂದಮಠ ಹೇಳಿದರು. ಅವರು ಪಟ್ಟಣದ ಶಾಸಕರ ಮಾದರಿ ಶಾಲೆಯಲ್ಲಿ ತಾಲೂಕು ಆಡಳಿತ ಕನ್ನಡ ಸಾಹಿತ್ಯ ಪರಿಷತ್ ಮತ್ತು ವಿವಿಧ ಕನ್ನಡ ಪರ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ನಡೆದ 69ನೇ ಕನ್ನಡ ರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಭೂಮಂಡಲದ ಏಕೈಕ ಭಾಷೆ ಎಂದರೆ ಅದು ನಮ್ಮ ತಾಯಿ ಭಾಷೆ ನಾಡ ಭಾಷೆ ನಮ್ಮೆಲ್ಲರ ಭಾಷೆ ಅದೇ ಕನ್ನಡ ಭಾಷೆ ಇಂತಹ ಸುಂದರ ಸಮೃದ್ಧ ಭಾಷೆ ನಾಡಿನಲ್ಲಿ ಜನಿಸುವುದು ನಮ್ಮೆಲ್ಲರ ಸೌಭಾಗ್ಯ ಎಂದರು.
ರಾಜ್ಯೋತ್ಸವ ಕಾರ್ಯಕ್ರಮದ ಉಪನ್ಯಾಸಕರಾಗಿ ಮಾತನಾಡಿದ ಶಿಕ್ಷಕ ಹಾಗೂ ಸಾಹಿತಿ ವೈಜಿ ಭಗವತಿ ಕನ್ನಡ ನಾಡು ” ಉದಯವಾಗಿ ಅರವತ್ತೆಂಟು ವರ್ಷವಾಯಿತು. ಒಂದೆಡೆ ಅಭಿವೃದ್ಧಿಯಾದರೇ ಇನ್ನೊಂದೆಡೆ ಕನ್ನಡ ಭಾಷೆ, ಆಹಾರ, ಉಡುಗೆ ತೊಡುಗೆ, ಸಂಸ್ಕೃತಿಗಳ ಮೇಲೆ ಅನ್ಯ ಸಂಸ್ಕೃತಿಯ
Weight Loss: ಬೇಗನೇ ತೂಕ ಕಳೆದುಕೊಳ್ಳಬೇಕೇ? ದಿನದ ಈ ಸಮಯದಲ್ಲಿ ಚಿಯಾ ಸೀಡ್ಸ್ ಸೇವಿಸಿ
ಕಲಘಟಗಿ ಪಟ್ಟಣದ ಶಾಸಕರ ಮಾದರಿ ಶಾಲೆಯ ಸಭಾಂಗಣದಲ್ಲಿ ತಾಲೂಕು ತಹಸಿಲ್ದಾರ್ ವೀರೇಶ ಮುಳಗುಂದಮಠ ಅವರು ಭುವನೇಶ್ವರಿ ದೇವಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಪ್ರಭಾವದಿಂದ ಕನ್ನಡತನ ಮರೆಯಾಗುತ್ತಿದೆ ಎಂದರು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ತಾಲೂಕಿನ 10 ಜನ ಸಾಧಕರಿಗೆ ಸನ್ಮಾನಿಸಲಾಯಿತು. ಶಾಲಾ ಮಕ್ಕಳಿಂದ ಸಂಸ್ಕೃತಿ ಕಾರ್ಯಕ್ರಮ ಜರುಗಿರುವುದು.
ಈ ಸಂದರ್ಭದಲ್ಲಿ, ತಾಪಮಾನ ಇಒ ಪಿವೈ ಸಾವಂತ್, ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ ಬಸಾಪುರ, ಕೆಸಿಸಿ ಬ್ಯಾಂಕ್ ನಿರ್ದೇಶಕ ಮಂಜುನಾಥಗೌಡ ಮುರಳಿ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ರಮೇಶ ಸೋಲಾರಗೊಪ್ಪ, ಗಿರೀಶ್ ಮುಕ್ಕಲ್, ಪ್ರಭು ರಂಗಾಪುರ, ಶಶಿಕುಮಾರ ಕಟ್ಟಿಮನಿ, ಪುಂಡಲೀಕ ಯಲ್ಲಾರಿ, ವಿ.ಎಸ್. ನಾಗಲೋತಿಮಠ, ಸಂಪತ್ ಕಿಚಡಿ, ಉದಯ್ ಗೌಡರ, ಗಂಗಾಧರ ಗೌಳಿ, ಎಸ್.ಎ. ಚಿಕ್ಕನರ್ತಿ,
ಬಸವರಾಜ ಹೊಂಕಣದವರ, ಜಗದೀಶ ವಿರಕ್ತಮಠ, ಎಂ.ಆರ್. ತೋಟಗಂಟಿ, ಹೆಚ್.ವೈ. ಅಸಂಗಿ, ಕಲ್ಮಶ ಅಂಗಡಿ, ಎಚ್.ಎನ್. ಸುನಗದ, ಅಶೋಕ ಅರ್ಕಸಾಲಿ, ಶ್ರೀಧರ ಪಾಟೀಲ್ ಕುಲಕರ್ಣಿ, ರಮೇಶ್ ಹೊಳ್ತಿಕೋಟಿ, ಈಶ್ವರ್ ಜವಳಿ, ಬಸವರಾಜ ಉಳ್ಳಾಗಡ್ಡಿ, ವಿದ್ಯಾ ಬಡಿಗೇರ, ಗೀತಾ ಬೀಳಗಿ, ಲತಾ ಟಿ.ಎಸ್, ಶಂಕರಗೌಡ ಬಾವಿಕಟ್ಟಿ, ಮಂಜುನಾಥ ಸೇರಿದಂತೆ ವಿವಿಧ ಕನ್ನಡ ಪರ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.
ವರದಿ : ಮಾರುತಿ ಲಮಾಣಿ,