ಅಯೋಧ್ಯೆ:- ರಾಮ ಮಂದಿರ ಪ್ರಾಣಪ್ರತಿಷ್ಠೆಯಿಂದ ಆಯೋಧ್ಯೆಯಲ್ಲಿ ಮದ್ಯ, ಮಾಂಸ ಮಾರಾಟ ನಿಷೇಧಿಸಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಅಬಕಾರಿ ಸಚಿವ ನಿತಿನ್ ಅಗರ್ವಾಲ್, ಇದು ಮುಖ್ಯಮಂತ್ರಿ ಆದೇಶವಾಗಿದ್ದು, ಕಟ್ಟು ನಿಟ್ಟಾಗಿ ಪಾಲಿಸಲಾಗುತ್ತಿದೆ ಎಂದಿದ್ದಾರೆ.
500 ವರ್ಷಗಳ ಸತತ ಹೋರಾಟದ ಬಳಿಕ ಭವ್ಯ ಶ್ರೀರಾಮ ಮಂದಿರ ಉದ್ಘಾಟನೆಗೆ ಸಜ್ಜಾಗಿದೆ. ಆಯೋಧ್ಯೆ ರಾಮನಗರಿ ಎಂದೇ ಜನಪ್ರಿಯವಾಗಿದೆ. ರಾಮ ಮಂದಿರ ಪ್ರಾಣಪ್ರತಿಷ್ಠೆ ಹಿನ್ನಲೆಯಲ್ಲಿ ಆಯೋಧ್ಯೆಯಲ್ಲಿ ಮದ್ಯ ಮಾಂಸ ಮಾರಾಟ ನಿಷೇಧಿಸಲಾಗಿದೆ. ಆಯೋಧ್ಯೆ ಮಾತ್ರವಲ್ಲ, ರಾಮ ಮಂದಿರಕ್ಕೆ ತೆರಳು ಮಾರ್ಗ 84 ಕೋಸಿ ಪರಿಕ್ರಮ ಮಾರ್ಗ್ದಲ್ಲಿರುವ ಮದ್ಯದ ಅಂಗಡಿ ಹಾಗೂ ಮಾಂಸ ಮಾರಾಟ ಅಂಗಡಿಗಳನ್ನೂ ಬೇರೆಡೆಗೆ ಸ್ಥಳಾಂತರಿಸಲಾಗಿದೆ.
150 ರಿಂದ 175 ಕಿಲೋಮೀಟರ್ ದೂರದ ಈ ಕೋಸಿ ಪರಿಕ್ರಮ ಮಾರ್ಗ್ನಲ್ಲಿರುವ ಎಲ್ಲಾ ಮದ್ಯದ ಅಂಗಡಿ ಹಾಗೂ ಮಾಂಸ ಮಾರಾಟ ಅಂಗಡಿಗಳನ್ನು ಸ್ಥಳಾಂತರಿಸಲಾಗುತ್ತಿದೆ. ರಾಮ ಮಂದಿರ ಪ್ರಾಣಪ್ರತಿಷ್ಠೆ ಕಾರಣದಿಂದ ಯಾವುದೇ ರೀತಿಯಲ್ಲಿ ಚ್ಯುತಿ ಬರದಂತೆ ನೋಡಿಕೊಳ್ಳಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆದೇಶ ನೀಡಿದ್ದಾರೆ. ರಾಮಾಯಾಣ ಭವ್ಯ ಪರಂಪರೆ, ಗತವೈಭವ ಮರುಕಳಿಸುತ್ತಿದೆ. ಶ್ರೀರಾಮ ಮತ್ತೆ ತನ್ನ ಅರಮನೆಯಲ್ಲಿ ವಿರಾಜಮಾನವಾಗುತ್ತಿದ್ದಾನೆ. ಹೀಗಾಗಿ ಅತೀವ ಮುತುವರ್ಜಿ ವಹಿಸುವಂತೆ ಯೋಗಿ ಆದೇಶ ನೀಡಿದ್ದಾರೆ.