ಭಾರತೀಯ ಹಿಂದುಗಳನ್ನು ಓಲೈಸಲು ಮೊದಲ ಬಾರಿ ಬ್ರಿಟನ್ ಪ್ರಧಾನಿ ಕೀರ್ ಸ್ಟರ್ಮರ್ ದೀಪಾವಳಿ ಹಬ್ಬವನ್ನು ಆಚರಿಸಿದ್ದರು. ಇದೀಗ ಸಾಕಷ್ಟು ದೇಶಗಳಲ್ಲಿ ಭಾರತೀಯರ ಹಬ್ಬವನ್ನು ಆಚರಣೆ ಮಾಡಲಾಗುತ್ತಿದೆ. ಅಂತೆಯೇ ಬ್ರಿಟನ್ ನಲ್ಲೂ ಮೊದಲ ಭಾರಿಗೆ ದೀಪಾವಳಿ ಹಬ್ಬವನ್ನು ಆಚರಣೆ ಮಾಡಲಾಯಿತು. ಆದರೆ ಇದು ಹಿಂದೂಗಳಿಗೆ ಇಷ್ಟವಾಗಿಲ್ಲ. ಇದರಿಂದ ಅಸಮಾಧಾನಗೊಂಡ ಭಾರತೀಯರು ಬ್ರಿಟನ್ ಪ್ರಧಾನಿ ವಿರುದ್ಧ ಗರಂ ಆಗಿದ್ದಾರೆ.
ಅ.29ರಂದು ಪ್ರಧಾನಿಗಳ ಅಧಿಕೃತ ನಿವಾಸದಲ್ಲಿ ಭಾರತೀಯ ಹಿಂದೂಗಳಿಗೆ ಅಧಿಕೃತ ದೀಪಾವಳಿ ಪಾರ್ಟಿ ಆಯೋಜಿಸಲಾಗಿತ್ತು. ಈ ಪಾರ್ಟಿಯಲ್ಲಿ ಪ್ರಾರ್ಥನೆ, ಹಣತೆಗಳ ಬೆಳಗುವಿಕೆ, ಪ್ರಧಾನಿಗಳ ಭಾಷಣ ಮತ್ತು ಸಾಂಪ್ರದಾಯಿಕ ಭಾರತೀಯ ನೃತ್ಯವನ್ನು ಏರ್ಪಡಿಸಲಾಗಿತ್ತು. ಜತೆಗೆ ಅತಿಥಿಗಳಿಗೆ ಕುರಿ ಕಬಾಬ್, ಮೀನು, ಬಿಯರ್, ವೈನ್ ಬಡಿಸಲಾಗಿದೆ. ಈ ವೇಳೆ ಕೆಲ ಅತಿಥಿಗಳು ತಮ್ಮ ಅಕ್ರೋಶವನ್ನು ಅಲ್ಲಿಯೇ ಇದ್ದ ಕೆಟರಿಂಗ್ ಸಿಬ್ಬಂದಿ ವಿರುದ್ಧ ತೋರಿಸಿದ್ದಾರೆ. ಆದರೆ ಅವರು ಆರ್ಡರ್ ಮಾಡಿರುವುದನ್ನು ಬಡಿಸಿರುವುದಾಗಿ ಹೇಳಿದ್ದಾರೆ.
ದೀಪಾವಳಿ ಧಾರ್ಮಿಕ ಮಹತ್ವವನ್ನೂ ಹೊಂದಿದೆ. ಹೀಗಾಗಿ ಸಾತ್ವಿಕ ಆಹಾರ ಬಡಿಸಬೇಕಿತ್ತು. ಮಾಂಸಾಹಾರ, ಮಧ್ಯ ಬಡಿಸುವುದಾದರೆ ನಮಗೆ ದೀಪಾವಳಿ ಪಾರ್ಟಿಯೇ ಬೇಡ ಎಂದು ಸಾಕಷ್ಟು ಮಂದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಬ್ರಿಟನ್ ಪ್ರಧಾನಿ ಕಾರ್ಯಾಲಯದಿಂದ ಇದುವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.