ಇಂಗ್ಲೆಂಡ್ ವಿರುದ್ಧ ಪ್ರಸ್ತುತ ನಡೆಯುತ್ತಿರುವ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ತೋರುತ್ತಿರುವ ಭಾರತ ತಂಡದ ಯುವ ಆರಂಭಿಕ ಯಶಸ್ವಿ ಜೈಸ್ವಾಲ್ ಅವರನ್ನು ಆಂಗ್ಲರ ಮಾಜಿ ನಾಯಕ ಅಲ್ಸ್ಟೈರ್ ಕುಕ್ ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ.
ತಮ್ಮ ಟೆಸ್ಟ್ ವೃತ್ತಿ ಜೀವನದಲ್ಲಿ ಬಾರಿಸಿದ್ದ ಸಿಕ್ಸರ್ಗಳನ್ನು ಯಶಸ್ವಿ ಜೈಸ್ವಾಲ್ ಅವರು ಒಂದೇ ಇನಿಂಗ್ಸ್ನಲ್ಲಿ ಬಾರಿಸಿದ್ದಾರೆಂದು ಹೇಳಿದ್ದಾರೆ. ರಾಜ್ಕೋಟ್ನಲ್ಲಿ ಭಾನುವಾರ ಅಂತ್ಯವಾಗಿದ್ದ ಮೂರನೇ ಟೆಸ್ಟ್ ಪಂದ್ಯದ ದ್ವಿತೀಯ ಇನಿಂಗ್ಸ್ನಲ್ಲಿ ಜೈಸ್ವಾಲ್ ಬರೋಬ್ಬರಿ 12 ಸಿಕ್ಸರ್ಗಳನ್ನು ಸಿಡಿಸಿದ್ದರು. ಆ ಮೂಲಕ ಸತತ ಎರಡನೇ ದ್ವಿಶತಕವನ್ನು ಬಾರಿಸಿದ್ದರು.
ರಾಜ್ಕೋಟ್ ಟೆಸ್ಟ್ ಪಂದ್ಯದ ನಾಲ್ಕನೇ ದಿನ ಯಶಸ್ವಿ ಜೈಸ್ವಾಲ್ ಅವರು ಸಿಕ್ಸರ್ಗಳ ಮೇಲೆ ಸಿಕ್ಸರ್ಗಳನ್ನು ಸಿಡಿಸಿದ್ದರು. ಅತ್ಯುತ್ತಮ ಬ್ಯಾಟ್ ಮಾಡಿದ್ದ ಇವರು 14 ಬೌಂಡರಿಗಳು ಹಾಗೂ 12 ಸಿಕ್ಸರ್ಗಳ ಮೂಲಕ 214 ರನ್ಗಳನ್ನು ಕಲೆ ಹಾಕಿದ್ದರು. ಆ ಮೂಲಕ ಸತತ ಎರಡನೇ ದ್ವಿಶತಕವನ್ನು ಬಾರಿಸಿದ್ದರು. ಮಾಜಿ ಬ್ಯಾಟ್ಸ್ಮನ್ ವಿನೋದ್ ಕಾಂಬ್ಳಿ ಹಾಗೂ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರ ಬಳಿಕ ಈ ಸಾಧನೆ ಮಾಡಿದ ಭಾರತದ ಮೂರನೇ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ.