ತಮಿಳು ಚಿತ್ರರಂಗದ ಖ್ಯಾತ ನಟ ವಿಶಾಲ್ ಅವರನ್ನು ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ. ತಮ್ಮ ಹೊಸ ‘ಮದಗಜರಾಜ’ ಚಿತ್ರದ ಪ್ರೀ ರಿಲೀಸ್ ಇವೆಂಟ್ನಲ್ಲಿ ಭಾಗಿಯಾಗಿದ್ದ ವಿಶಾಲ್ ಅವರನ್ನು ನೋಡಿ ಪ್ರತಿಯೊಬ್ಬರು ಗೊಂದಲಕ್ಕೀಡಾಗಿದ್ದಾರೆ.
ಪ್ರೀರಿಲೀಸ್ ಈವೇಂಟ್ ನಲ್ಲಿ ವೇದಿಕೆ ಮೇಲೆ ಮೈಕ್ ಹಿಡಿದು ಮಾತನಾಡುವ ವೇಳೆ ವಿಶಾಲ್ ಅವರ ಕೈ ಮೈಕ್ ಹಿಡಿಯಲು ಆಗದಷ್ಟೂ ನಡುಗಿದೆ. ಮಾತುಗಳು ತೊದಲುತ್ತಿದ್ದವು. ಪದಗಳ ಉಚ್ಛಾರಣೆ ಕೂಡ ಅಸ್ಪಷ್ಟವಾಗಿತ್ತು. ತೀವ್ರ ಅಸ್ವಸ್ಥರಾದಂತೆ ಕಂಡು ಬಂದ ವಿಶಾಲ್ ದೇಹ ಶೇಕ್ ನಡುಗುತ್ತಿತ್ತು.
ಕಳೆದ ಕೆಲವು ದಿನಗಳಿಂದ ನಟ ವಿಶಾಲ್ ತೀವ್ರ ಜ್ವರದಿಂದ ಬಳಲುತ್ತಿದ್ದರು, ಈಗ ಚೇತರಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ವಿಶಾಲ್ ನಡುಗುತ್ತಿದ್ದಾರೆ ಎಂಬ ಮಾತು ವೇದಿಕೆ ಮೇಲಿದ್ದ ನಿರೂಪಕರಿಂದ ಕೇಳಿ ಬಂತು. ಅಸ್ವಸ್ಥರಾಗಿದ್ದರೂ ನಟ ವಿಶಾಲ್ ತಮ್ಮ ಹೊಸ ಚಿತ್ರದ ಪ್ರಚಾರಕ್ಕೆ ಆಗಮಿಸಿದ್ದರು. ಆದ್ರೆ ಇನ್ನೂ ಯಂಗ್ ಲುಕ್ನಲ್ಲಿ ಕಾಣುವ 47 ವರ್ಷದ ನಟ ವಿಶಾಲ್ ಆರೋಗ್ಯಕ್ಕೆ ಏನಾಗಿದೆ ಎನ್ನುವ ಪ್ರಶ್ನೆಗಳು ಮೂಡಿವೆ. ಆದ್ರೆ ಅವರ ಆರೋಗ್ಯದ ಕುರಿತ ಯಾವುದೇ ಅಧಿಕೃತ ಮಾಹಿತಿಗಳು ಇದುವರೆಗೆ ಲಭ್ಯವಾಗಿಲ್ಲ. ಆದರೆ ವಿಶಾಲ್ ಅವರನ್ನು ನೋಡಿ ಪ್ರತಿಯೊಬ್ಬರು ಕಂಗಾಲಾಗಿದ್ದಾರೆ.
ವಿಶಾಲ್ ನಟನೆಯ ಮದಗಜರಾಜ ಸಿನಿಮಾ 12 ವರ್ಷಗಳ ಹಿಂದೆಯೇ ಅರ್ಧ ಶೂಟಿಂಗ್ ಮಾಡಲಾಗಿತ್ತು. ಕೆಲ ಕಾರಣಗಳಿಂದ ಸಿನಿಮಾ ಪೂರ್ತಿ ಮಾಡಲು ಆಗಿರಲಿಲ್ಲ. ಆದ್ರೀಗ ಸಿನಿಮಾ ಶೂಟಿಂಗ್ ಪೂರ್ಣಗೊಂಡಿದ್ದು ಈಗಾಗಲೇ ಟ್ರೈಲರ್ನಲ್ಲೇ ಸಿನಿಮಾ ಸದ್ದು ಮಾಡುತ್ತಿದೆ. ‘ಮದಗಜರಾಜ’ ಸಿನಿಮಾ ಸಂಕ್ರಾಂತಿ ಸಂದರ್ಭದಲ್ಲಿ ರಿಲೀಸ್ ಆಗಲಿದೆ.