ಮಂಡ್ಯ: ಅಲ್ಲಾ ಹು ಅಕ್ಬರ್ ಎನ್ನಬೇಕಾಗಿರುವುದು ನಿಮ್ಮ ಮನೆ ಮತ್ತು ಮಸೀದಿಯಲ್ಲಿಯೇ ಹೊರತು ಸಮಾಜದಲ್ಲಿ ಅಲ್ಲ ಎಂದು ಆರ್ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ (Kalladka Prabhakar Bhat) ಹೇಳಿದ್ದಾರೆ. ಶ್ರೀರಂಗಪಟ್ಟಣದಲ್ಲಿ (Srirangapatna) ಹನುಮಂತನ ಶೋಭಾಯಾತ್ರೆಯಲ್ಲಿ (Hanuman Shobha Yatra) ಮಾತನಾಡಿದ ಅವರು, ಮುಸ್ಕಾನ್ ಎಂಬ ವಿದ್ಯಾರ್ಥಿನಿ ಅಲ್ಲಾ ಹು ಅಕ್ಬರ್ ಎಂದು ಇಲ್ಲೇ ಕೂಗಿದ್ದು.
ಇಂತಹ ಹೆಣ್ಣುಮಕ್ಕಳಿಗೆ ಹಣ ಕೊಟ್ಟು, ಶಹಬ್ಬಾಸ್ಗಿರಿ ಕೊಟ್ಟು ಅಲ್ಕೈದಾ ಭಯೋತ್ಪಾದಕ ಸಂಸ್ಥೆ ಬೆಳೆಸುತ್ತಿದೆ. ಈಕೆ ಅವರ ಸಂಪರ್ಕದಲ್ಲಿದ್ದು, ಮಂಡ್ಯದ ಜನ ಎಚ್ಚರಿಕೆ ವಹಿಸಬೇಕು ಎಂದು ಹೇಳಿದ್ದಾರೆ. ನಮ್ಮ ಸಿಎಂ ಹತ್ತು ಸಾವಿರ ಕೋಟಿ ರೂ.ಗಳನ್ನು ಮುಸಲ್ಮಾನರಿಗೆ ಕೊಡುತ್ತೇವೆ ಎಂದಿದ್ದರು.
ಹೆಚ್ಚುತ್ತಲೇ ಇದೆ PM ಮೋದಿ ಕ್ರೇಜ್ – 2 ಕೋಟಿ ಚಂದಾದಾರರ ಸಂಖ್ಯೆ ದಾಟಿತು ಯೂಟ್ಯೂಬ್ ಚಾನೆಲ್
ಇದು ಯಾರಪ್ಪನ ದುಡ್ಡು ಎಂದು ಕೊಡ್ತೀರಿ? ಕಂದಾಯ ಕಟ್ತಿರೋದು ಹಿಂದೂಗಳು. ಅಲ್ಲದೇ ಹಿಜಬ್ನ್ನು ಮತ್ತೆ ಜಾರಿ ಮಾಡ್ತಿವಿ ಎಂದು ಹೊಸ ವಿವಾದ ಹುಟ್ಟು ಹಾಕಿದ್ದಾರೆ. ಈ ಮೂಲಕ ಶಾಲಾ ಮಕ್ಕಳಲ್ಲಿ ಪ್ರತ್ಯೇಕತೆ ತರುತ್ತಿದ್ದಾರೆ. ಸಮವಸ್ತ್ರದ ಉದ್ದೇಶವನ್ನು ಕೊಂದು ಹಾಕುತ್ತಿದ್ದಾರೆ. ಹಿಜಬ್ ತರೋಕೆ ಸಿದ್ದರಾಮಯ್ಯಗೆ (Siddaramaiah) ತಾಕತ್ ಇದೆಯಾ ಎಂದು ಸವಾಲು ಹಾಕಿದ್ದಾರೆ.