ಭಾರತ ತಂಡದ ಸ್ಟಾರ್ ಆಲ್ರೌಂಡರ್ ಮತ್ತು ಟಿ20 ವಿಶ್ವಕಪ್ ವಿಜೇತ ಅಕ್ಷರ್ ಪಟೇಲ್ ತಮ್ಮ ಮಾಜಿ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರನ್ನು ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ.ಅಕ್ಷರ್ ಪಟೇಲ್ ಅವರನ್ನು ಮೇಲಿನ ಕ್ರಮಾಂಕದಲ್ಲಿ ಆಡಿಸುವ ಮೂಲಕ ರಾಹುಲ್ ದ್ರಾವಿಡ್ ಉತ್ತಮ ಫಲಿತಾಂಶವನ್ನು ಪಡೆದಿದ್ದರು. ರಾಹುಲ್ ದ್ರಾವಿಡ್ ಒಬ್ಬ ಅತ್ಯುತ್ತಮ ಕೋಚ್ ಎಂದು ಶ್ಲಾಘಿಸಿದ್ದಾರೆ. ಈ ಪೀಳಿಗೆಗೆ ತಕ್ಕಂತೆ ಅವರು ತಮ್ಮನ್ನ ತಾವು ಅಪ್ಡೇಟ್ ಆಗಿದ್ದಾರೆ ಎಂದರು.
ಈ ಟಿ20 ವಿಶ್ವಕಪ್ ಗೆಲುವಿನೊಂದಿಗೆ ರಾಹುಲ್ ದ್ರಾವಿಡ್ ಅವರ ಮುಖ್ಯ ಕೋಚ್ ಅವಧಿ ಕೊನೆಗೊಂಡಿತು. 11 ವರ್ಷಗಳಬಳಿಕ ಐಸಿಸಿ ಪ್ರಶಸ್ತಿಯೊಂದಿಗೆ ಭಾರತ ತಂಡ, ಅವರಿಗೆ (ದ್ರಾವಿಡ್) ಅದ್ದೂರಿ ವಿದಾಯ ಹೇಳಿತು. ಇತ್ತೀಚೆಗೆ ರಾಷ್ಟ್ರೀಯ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅಕ್ಷರ್ ಪಟೇಲ್, ರಾಹುಲ್ ದ್ರಾವಿಡ್ ನೀಡಿದ ಸಲಹೆಯ ಬಗ್ಗೆ ಮಾತನಾಡಿದ್ದಾರೆ.
ಗಂಭೀರ್ ಅಡಿಯಲ್ಲಿ ವಿರಾಟ್ ಕೊಹ್ಲಿ ಹೆಚ್ಚಿನ ಅವಧಿ ಆಡಲ್ಲ: ಮಾಜಿ ವೇಗಿ ಡೇಲ್ ಸ್ಟೇನ್
“ರಾಹುಲ್ ದ್ರಾವಿಡ್ ಅವರು ಭಾರತ-ಎ ತಂಡದಲ್ಲಿ ಆಡುತ್ತಿದ್ದಾಗಿನಿಂದ ನನಗೆ ಗೊತ್ತು. ಮೂರು ವರ್ಷಗಳ ಕಾಲ ಟೀಮ್ ಇಂಡಿಯಾದಿಂದ ದೂರವಿದ್ದ ನಾನು, ಭಾರತ ‘ಎ’ ಯನ್ನು ಪ್ರತಿನಿಧಿಸಿದ್ದೆ. ಆ ವೇಳೆ ಭಾರತ ‘ಎ’ ತಂಡದ ಕೋಚ್ ರಾಹುಲ್ ದ್ರಾವಿಡ್ ಇದ್ದರು. ಆ ಸಮಯದಲ್ಲಿ ಅವರು ನನ್ನ ಬೆಂಬಲಕ್ಕೆ ನಿಂತಿದ್ದರು. ರಾಹುಲ್ ದ್ರಾವಿಡ್ ಯಾವಾಗಲೂ ಒಂದು ವಿಷಯವನ್ನು ನನಗೆ ಸದಾ ಹೇಳುತ್ತಿದ್ದರು. ಭಾರತ ಪರ ಎಷ್ಟೇ ರನ್ ಗಳಿಸಿದರೂ, ಎಷ್ಟೇ ಪಂದ್ಯಗಳನ್ನು ಆಡಿದರೂ ಕೆಲ ವರ್ಷಗಳ ನಂತರ ಹೆಚ್ಚು ನೆನಪಾಗುವುದಿಲ್ಲ. ಆದರೆ ವಿಶ್ವಕಪ್ ಗೆದ್ದಿದ್ದು ಜೀವನ ಪರ್ಯಂತ ಮರೆಯಲಾಗದ ಅನುಭವ ಎಂದು ಹೇಳುತ್ತಿದ್ದರು. ರಾಹುಲ್ ದ್ರಾವಿಡ್ ಕ್ರಿಕೆಟ್ ಜಂಟಲ್ ಮ್ಯಾನ್. ರೋಹಿತ್ ಶರ್ಮಾ ಕೂಡ ಇದೇ ಮಾತನ್ನು ಹೇಳುತ್ತಿದ್ದರು,” ಎಂದು ಹೇಳಿದ್ದಾರೆ.