ಕಲಬುರಗಿ:- ಕಲ್ಲರಳಿ ಹಣ್ಣಾಗಿ.. ರೈತನೊಬ್ಬ ಮನಸ್ಸು ಮಾಡಿದ್ರೆ ಎಂಥಹ ಕಲ್ಲು ಬಂಡೆಗಳಿರುವ ನೆಲವನ್ನ ಹಸಿರಾಗಿ ಮಾಡಬಹುದು ಅನ್ನೋದರ ಕುರಿತ ಪುಸ್ತಕವೊಂದು ಇವತ್ತು ಕಲಬುರಗಿಯಲ್ಲಿ ಬಿಡುಗಡೆಯಾಯಿತು.
ಕಡಗಂಚಿ ಗ್ರಾಮದ ರೈತ ಹಣಮಂತ ಭೂಸನೂರ್ ಶ್ರಮವೇ ಈ ಪುಸ್ತಕದ ಮೂಲಕ ಹೊರಬಂದಿದೆ.. ಮಾಜಿ ಡಿಸಿಎಂ ಅಶ್ವಥ್ ನಾರಾಯಣ್ ಹಾಗು ಕಲ್ಯಾಣ ಕರ್ನಾಟಕ ಮಂಡಳಿಯ ಅಧ್ಯಕ್ಷ ಜೇವರ್ಗಿ ಶಾಸಕ ಡಾ.ಅಜಯ್ ಸಿಂಗ್ ಪುಸ್ತಕ ಬಿಡುಗಡೆ ಮಾಡಿದ್ರು..
ಬರೋಬ್ಬರಿ 50 ಎಕರೆ ಕಲ್ಲು ಬಂಡೆಗಳಿಂದ ತುಂಬಿದ್ದ ನೆಲ ಇವತ್ತು ಹಸಿರಾಗಿ ಮಿಂಚುವಂತೆ ಮಾಡಿ ಸಾಧನೆ ಮಾಡಿದೆ ರೈತ ಭೂಸನೂರು ಹಣಮಂತ ಕುಟುಂಬ ಅನ್ನೋದು ವಿಶೇಷ…