ನಟಿ ನಟಿಯರು ಸಿನಿಮಾದ ಜೊತೆ ಜೊತೆಗೆ ಜಾಹೀರಾತುಗಳಲ್ಲೂ ಕಾಣಿಸಿಕೊಳ್ಳುತ್ತಾರೆ. ಈ ಮೂಲಕ ಭರ್ಜರಿ ಹಣವನ್ನು ಗಳಿಸುತ್ತಾರೆ. ಆದರೆ ಕೆಲವೊಮ್ಮೆ ಈ ಜಾಹೀರಾತುಗಳಿಂದ ಟ್ರೋಲ್ಗೆ ಒಳಗಾಗಬೇಕಾಗುತ್ತದೆ. ಪಾನ್ ಮಸಾಲ ಜಾಹೀರಾತಿನಿಂದ ಸಾಕಷ್ಟು ಟ್ರೋಲ್ ಅನುಭವಿಸಿದ ನಟರಿದ್ದಾರೆ. ನಟ ಅಜಯ್ ದೇವಗನ್ ಅವರ ವಿಮಲ್ ಎಲೈಚಿ ಪಾನ್ ಮಸಾಲಾ ಪ್ರಚಾರಕ್ಕಾಗಿ ಯಾವಾಗಲೂ ಟ್ರೋಲ್ ಆಗುತ್ತಾರೆ. ಜಾಹೀರಾತಿನಲ್ಲಿ ಅವರೊಂದಿಗೆ ನಟರಾದ ಶಾರುಖ್ ಖಾನ್ ಮತ್ತು ಅಕ್ಷಯ್ ಕುಮಾರ್ ಕೂಡ ಕಾಣಿಸಿಕೊಂಡಿದ್ದರು. ಈ ಜಾಹೀರಾತಿನಿಂದಾಗಿ ಈ ನಟರು ಯಾವಾಗಲೂ ಟ್ರೋಲ್ ಆಗುತ್ತಾರೆ. ಕೊನೆಗೂ ಈ ವಿಚಾರದಲ್ಲಿ ಅಜಯ್ ದೇವಗನ್ ಪ್ರತಿಕ್ರಿಯಿಸಿದ್ದಾರೆ.
ಅಜಯ್ ದೇವಗನ್ ಇತ್ತೀಚೆಗೆ ಬಿಡುಗಡೆಯಾದ ‘ಸಿಂಗಮ್ ಎಗೇನ್’ಗಾಗಿ ಹಲವಾರು ಸಂದರ್ಶನಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅಜಯ್ ದೇವಗನ್ ಈ ವಿಷಯದ ಬಗ್ಗೆ ತಮ್ಮ ಮೌನವನ್ನು ಮುರಿದಿದ್ದಾರೆ. ರಣವೀರ್ ಅಲಹಬಾದಿಯಾ ಅವರ ಪಾಡ್ಕಾಸ್ಟ್ನಲ್ಲಿ ರೋಹಿತ್ ಶೆಟ್ಟಿ ಮತ್ತು ಅಜಯ್ ದೇವಗನ್ ಕಾಣಿಸಿಕೊಂಡರು. ಈ ಬಗ್ಗೆ ಅವರಿಗೆ ಕೇಳಲಾಗಿದೆ.
ರಣವೀರ್ ಅವರು ಟ್ರೋಲಿಂಗ್ ಬಗ್ಗೆ ಅಜಯ್ ದೇವಗನ್ ಅವರನ್ನು ಕೇಳಿದಾಗ, ಅಜಯ್ ದೇವಗನ್ ನೇರವಾಗಿ ಈ ಬಗ್ಗೆ ಹೇಳಿದ್ದರು. ‘ನನಗೆ ಅದು ಪರವಾಗಿಲ್ಲ, ಆ ಬಗ್ಗೆ ಚಿಂತಿಸಲ್ಲ’ ಎಂದರು ಅಜಯ್ ದೇವಗನ್. ಈ ಕಾರಣಕ್ಕೆ ಟ್ರೋಲ್ ಮಾಡಿದರೂ ಅವರು ಆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ‘ಈಗ ಎಲ್ಲರೂ ಮೀಮ್ಗಳನ್ನು ಆನಂದಿಸುತ್ತಾರೆ’ ಎಂದರು ರೋಹಿತ್.
ಅಜಯ್ ದೇವಗನ್ ಜೊತೆಗೆ ಶಾರುಖ್ ಖಾನ್, ಅಕ್ಷಯ್ ಕುಮಾರ್ ಕೂಡ ಪಾನ್ ಮಸಾಲಾ ಪ್ರಚಾರ ಮಾಡಿದ್ದರು. ಆದರೆ ನಂತರ ಅಕ್ಷಯ್ ಕುಮಾರ್ ಕ್ಷಮೆಯಾಚಿಸಿ ಈ ಜಾಹೀರಾತಿನಿಂದ ಹಿಂದೆ ಸರಿದಿದ್ದರು.
ಅಜಯ್ ದೇವಗನ್ ನಟನೆಯ ‘ಸಿಂಗಮ್ ಅಗೇನ್’ ಮೊದಲ ಎರಡು ದಿನಗಳಲ್ಲಿ 100 ಕೋಟಿ ಗಳಿಸಿತು. ಬಾಕ್ಸ್ ಆಫೀಸ್ನಲ್ಲಿ ಚಿತ್ರ ಇನ್ನೂ ಉತ್ತಮ ಪ್ರದರ್ಶನ ಕಾಣುತ್ತಿದೆ. ಈಗಾಗಲೇ ಸಿನಿಮಾ 200 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.