ಬಾಲಿವುಡ್ ನಟಿ ಐಶ್ವರ್ಯಾ ರೈ ಕಳೆದ ಕೆಲ ತಿಂಗಳಿನಿಂದ ಡಿವೋರ್ಸ್ ರೂಮರ್ಸ್ ಗಾಗಿಯೇ ಸಖತ್ ಸದ್ದು ಮಾಡುತ್ತಿದ್ದಾರೆ. ಈ ಮಧ್ಯೆ ಮಗಳ ಶಾಲಾ ಕಾರ್ಯಕ್ರಮದಲ್ಲಿ ಅಭಿಷೇಕ್ ಜೊತೆ ಕಾಣಿಸಿಕೊಂಡು ಡಿವರ್ಸ್ ವಂದತಿಗಳಿಗೆ ಬ್ರೇಕ್ ಹಾಕಿದ್ದಾರೆ.
ನಟನೆಯಿಂದ ದೂರ ಉಳಿದಿರುವ ಐಶ್ವರ್ಯಾ ಇತ್ತೀಚಿನ ದಿನಗಳಲ್ಲಿ ಡಿವೋರ್ಸ್ ಕಾರಣಕ್ಕೆ ಹೆಚ್ಚು ಹೆಚ್ಚು ಸುದ್ದಿಯಾಗ್ತಿದ್ದಾರೆ. ಇದೀಗ ಐಶ್ವರ್ಯಾ ಮತ್ತೊಂದು ವಿಚಾರಕ್ಕೆ ಸುದ್ದಿಯಾಗಿದ್ದಾರೆ. ಅಂದ ಹಾಗೆ ಐಶ್ವರ್ಯಾ ರೈ 16 ವರ್ಷದ ಧರಿಸಿದ್ದ ಲೆಹೆಂಗಾ ಆಸ್ಕರ್ ಪ್ರಶಸ್ತಿಗೆ ಎಂಟ್ರಿಕೊಟ್ಟಿದೆ.
ಐಶ್ವರ್ಯಾ ರೈ ಬಚ್ಚನ್ ಗ್ಲೋಬಲ್ ಐಕಾನ್ ಹಾಗೂ ಬಾಲಿವುಡ್ ನ ಜನಪ್ರಿಯ ನಟಿಯರಲ್ಲಿ ಒಬ್ಬರಾಗಿದ್ದಾರೆ. 2008 ರಲ್ಲಿ ಅಶುತೋಷ್ ಗೋವಾರಿಕರ್ ಅವರ ‘ಜೋಧಾ ಅಕ್ಬರ್’ ಚಿತ್ರದಲ್ಲಿ ಐಶ್ವರ್ಯಾ ಕಾಣಿಸಿಕೊಂಡರು. ಈ ಚಿತ್ರದಲ್ಲಿ ಅವರು ‘ಜೋಧಾ’ ಪಾತ್ರವನ್ನು ನಿರ್ವಹಿಸಿದ್ರು.
ಇದೀಗ ಜೋಧಾ ಅಕ್ಬರ್ ಸಿನಿಮಾದಲ್ಲಿ ಐಶ್ವರ್ಯಾ ತೊಟ್ಟಿದ್ದ ಲೆಹೆಂಗಾ 16 ವರ್ಷಗಳ ನಂತರ ಆಸ್ಕರ್ ತಲುಪಿದೆ. ಜೋಧಾ ಅಕ್ಬರ್ ಚಿತ್ರದ ಹಿರಿಮೆ, ಕಥೆ ಮತ್ತು ಸಾಂಪ್ರದಾಯಿಕ ವೇಷಭೂಷಣಗಳು ಪ್ರೇಕ್ಷಕರನ್ನು ಬೆರಗುಗೊಳಿಸಿದವು.
‘ಜೋಧಾ ಅಕ್ಬರ್’ ಸಿನಿಮಾದಲ್ಲಿ ಐಶ್ವರ್ಯಾ ಧರಿಸಿದ್ದ ರೆಡ್ ಕಲರ್ ಮದುವೆಯ ಲೆಹೆಂಗಾ ಪ್ರತಿಷ್ಠಿತ ಆಸ್ಕರ್ ಮ್ಯೂಸಿಯಂ ಪ್ರದರ್ಶನಕ್ಕೆ ಇಡಲಾಗಿದೆ. ವಿಶ್ವದಾದ್ಯಂತ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಈ ಲೆಹೆಂಗಾವನ್ನು ಮ್ಯೂಸಿಯಂನಲ್ಲಿ ಪ್ರದರ್ಶಿಸಲಾಗ್ತಿದೆ ಎಂದು ಆಸ್ಕರ್ ಮ್ಯೂಸಿಯಂ ಪೋಸ್ಟ್ ನಲ್ಲಿ ತಿಳಿಸಿದೆ.
ಈ ಬಗ್ಗೆ ಅಕಾಡೆಮಿ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದೆ. ಪೋಸ್ಟ್ ಅನ್ನು ಹಂಚಿಕೊಂಡ ಅಕಾಡೆಮಿ, ‘ಜೋಧಾ-ಅಕ್ಬರ್’ ಚಿತ್ರದಲ್ಲಿ ಐಶ್ವರ್ಯಾ ಧರಿಸಿರುವ ಲೆಹೆಂಗಾಗೆ ಗೌರವವನ್ನು ನೀಡಲಾಗಿದೆ ಎಂದು ಹೇಳಿದೆ.
‘ಜೋಧಾ ಅಕ್ಬರ್’ (2008) ನಲ್ಲಿ ಐಶ್ವರ್ಯಾ ರೈ ಬಚ್ಚನ್ ಅವರ ರೆಡ್ ಕಲರ್ ಲೆಹೆಂಗಾ ಕಣ್ಣಿಗೆ ಹಬ್ಬ ನೀಡುವಂತೆ. ವೈಬ್ರೆಂಟ್ ಜರ್ದೋಸಿ ಕಸೂತಿ, ಹಳೆಯ ಶೈಲಿ ಮತ್ತು ಮುತ್ತು-ರತ್ನ ಬಳಸಲಾಗಿದೆ. ಭಾರತದ ರಾಷ್ಟ್ರೀಯ ಪಕ್ಷಿಯಾದ ನವಿಲಿನ ಡಿಸೈನ್ ಇದ್ದು, ಸಂಪೂರ್ಣವಾಗಿ ಬೆಜ್ವೆಲೆಡ್ ಆಗಿದೆ. ನೀತಾ ಲುಲ್ಲಾ ಡ್ರೆಸ್ ಡಿಸೈನ್ ಮಾಡಿಲ್ಲ, ಪರಂಪರೆಯನ್ನ ಸೃಷ್ಟಿಸಿದ್ದಾರೆ’ ಎಂದು ಪೋಸ್ಟ್ ನಲ್ಲಿ ಬರೆಯಲಾಗಿದೆ.