ಬಾಲಿವುಡ್ ನಟಿ, ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ ಮಧ್ಯೆ ಮನಸ್ತಾಪ ಮೂಡಿದೆ. ಇದೇ ಕಾರಣಕ್ಕೆ ಇಬ್ಬರು ದೂರ ದೂರ ವಾಸವಾಗಿದ್ದು ಸದ್ಯದಲ್ಲೇ ಡಿವೋರ್ಸ್ ಪಡೆದುಕೊಳ್ಳುತ್ತಿದ್ದಾರೆ ಎಂಬ ಸುದ್ದಿ ಕಳೆದ 3-4 ತಿಂಗಳಿನಿಂದಲೂ ಸದ್ದು ಮಾಡುತ್ತಿದೆ.
ಇತ್ತೀಚೆಗೆ ಯಾವುದೇ ಕಾರ್ಯಕ್ರಮ ಇರಲಿ ಐಶ್ವರ್ಯಾ ರೈ ಮಗಳ ಜೊತೆ ಮಾತ್ರವೇ ಆಗಮಿಸುತ್ತಿದ್ದರು. ಅಲ್ಲದೆ ಎಲ್ಲಿಯೂ ಅಭಿಷೇಕ್ ಹಾಗೂ ಐಶ್ವರ್ಯ ಒಟ್ಟಿಗೆ ಕಾಣಿಸಿಕೊಂಡಿಲ್ಲ. ಕಾರ್ಯಕ್ರಮಕ್ಕೆ ಬೇರೆ ಬೇರೆಯಾಗಿಯೇ ಹೋಗುತ್ತಿದ್ದರು.
ಜೊತೆಗೆ ಅಭಿಷೇಕ್ ಬಚ್ಚನ್ ಗ್ರೇ ಡಿವೋರ್ಸ್ಗೆ ಲೈಕ್ ಮಾಡಿ ವದಂತಿಗೆ ಪುಷ್ಠಿ ನೀಡಿದ್ರು. ಮೊಮ್ಮಗಳು ಆರಾಧ್ಯ ಬಚ್ಚನ್ ಅವರ ಹುಟ್ಟುಹಬ್ಬದ ಪಾರ್ಟಿಯಲ್ಲಿ ಬಚ್ಚನ್ ಕುಟುಂಬ ಕಾಣಿಸದಿದ್ದಾಗ, ಐಶ್ವರ್ಯಾ-ಅಭಿಷೇಕ್ ವಿಚ್ಛೇದನ ಆಗ್ತಿರೋದು ಪಕ್ಕ ಎನ್ನಲಾಗುತ್ತಿದೆ.
ಐಶ್ವರ್ಯಾ ರೈ-ಅಭಿಷೇಕ್ ಬಚ್ಚನ್ ವಿಚ್ಛೇದನದ ರೂಮರ್ಸ್ ಪಕ್ಕ ಎಂದು ಜನ ನಂಬಿದ್ದರು. ಅಲ್ಲದೆ ಇದು ಎಷ್ಟೇ ಸುದ್ದಿಯಾದರೂ ಅಭಿಷೇಕ್ ಅಥವಾ ಐಶ್ವರ್ಯಾ ಈ ಬಗ್ಗೆ ಪ್ರತಿಕ್ರಿಯೆ ನೀಡಿರಲಿಲ್ಲ.
ರೂಮರ್ಸ್ ಹರಡೋಕೆ ಶುರುವಾಗಿ ನಾಲ್ಕೈದು ತಿಂಗಳ ಕಳೆದ ಬಳಿಕ ಕೊನೆಗೂ ಬಿಗ್ ಬಿ ಅಮಿತಾಬ್ ಬಚ್ಚನ್ ಪ್ರತಿಕ್ರಿಯೆ ನೀಡಿದ್ದಾರೆ.
ಅನ್ನು ಜನರು ನಂಬಿದ್ರು. ರೂಮರ್ಸ್ ಗಳು ನಾನಾ ರೂಪ ಪಡೆದು ವೈರಲ್ ಆಗ್ತಿದೆ. ಹೀಗಾಗಿ ಅಮಿತಾಬ್ ಬಚ್ಚನ್ ವದಂತಿಗಳಿಗೆ ಪ್ರತಿಕ್ರಿಯಿಸುವುದು ಅಗತ್ಯವೆಂದು ಭಾವಿಸಿ ಮೌನ ಮುರಿದಿದ್ದಾರೆ.
ಐಶ್ವರ್ಯಾ ರೈ-ಅಭಿಷೇಕ್ ಬಚ್ಚನ್ ವಿಚ್ಛೇದನದ ರೂಮರ್ಸ್ ಬಗ್ಗೆ ಬಚ್ಚನ್ ಫ್ಯಾಮಿಲಿ ಮೌನವಹಿಸಿದ್ದು ಯಾಕೆ ಎಂದು ಜನರು ಕೇಳ್ತಿದ್ರು. ಇದೀಗ ಅಮಿತಾಬ್ ಬಚ್ಚನ್ ತಮ್ಮ ಬ್ಲಾಗ್ ನಲ್ಲಿ ಈ ಬಗ್ಗೆ ಬರೆದಿದ್ದಾರೆ. ನಾನು ನಮ್ಮ ಕುಟುಂಬದ ಬಗ್ಗೆ ಏಕೆ ಹೆಚ್ಚು ಮಾತನಾಡುವುದಿಲ್ಲ ಹೇಳಿದ್ರು. ವಿಭಿನ್ನವಾಗಿರಲು ಮತ್ತು ಜೀವನದಲ್ಲಿ ಅದನ್ನು ಅವಲಂಬಿಸಲು ಬಲವಾದ ನಂಬಿಕೆ, ಸಾಕಷ್ಟು ಧೈರ್ಯ ಮತ್ತು ಪ್ರಾಮಾಣಿಕತೆ ಬೇಕು’ ಎಂದು ಬಿಗ್ ಬಿ ಬರೆದಿದ್ದಾರೆ.
‘ನಾನು ಕುಟುಂಬದ ಬಗ್ಗೆ ತುಂಬಾ ಕಡಿಮೆ ಮಾತನಾಡುತ್ತೇನೆ. ಏಕೆಂದರೆ ಅದು ನನ್ನ ಡೊಮೇನ್ ಮತ್ತು ನಾನು ನನ್ನ ಗೌಪ್ಯತೆಯನ್ನು ಕಾಪಾಡಿಕೊಳ್ಳುತ್ತೇನೆ. ವದಂತಿಗಳು ಕೇವಲ ವದಂತಿಗಳು. ಇವು ಸುಳ್ಳು ವದಂತಿಗಳಾಗಿದ್ದು, ದೃಢೀಕರಿಸಬೇಕಿಲ್ಲ. ಏನನ್ನು ಬರೆಯಲಾಗುತ್ತಿದೆ ಅಥವಾ ಹೇಗೆ ವರದಿ ಮಾಡಲಾಗುತ್ತಿದೆ ಎಂಬುದನ್ನು ಮೊದಲು ಪರಿಶೀಲಿಸಬೇಕು ಎಂದು ಬಚ್ಚನ್ ಒತ್ತಿ ಒತ್ತಿ ಹೇಳಿದ್ರು. ಸಮಾಜಕ್ಕೆ ಅವರು ನೀಡಿದ ಕೊಡುಗೆಯನ್ನು ನಾನು ಪ್ರಶಂಸಿಸುತ್ತೇನೆ, ಆದರೆ ಸುಳ್ಳು ಅಥವಾ ಆಯ್ದ ಪ್ರಶ್ನೆ ಅನುಮಾನದ ಬೀಜವನ್ನು ಬಿತ್ತಲಾಗಿದೆ ಎಂದು ಅಮಿತಾಬ್ ಬಚ್ಚನ್ ಬರೆದಿದ್ದಾರೆ.
‘ನೀವು ಇಷ್ಟಪಡುವದನ್ನು ನೀವು ಬರೆಯುತ್ತೀರಿ, ಆದರೆ ನೀವು ಅದರಲ್ಲಿ ಪ್ರಶ್ನಾರ್ಥಕ ಚಿಹ್ನೆಯನ್ನು (?) ಬಳಸಿದಾಗ, ವರದಿಯು ಪ್ರಶ್ನಾರ್ಹವಾಗಿದೆ, ಆದರೆ ಓದುಗರು ಅದನ್ನು ನಂಬಬೇಕೆಂದು ಬಯಸುತ್ತಾರೆ, ಆದ್ದರಿಂದ ನೀವು ಅದ್ರಿಂದ ಪ್ರಯೋಜನ ಪಡೆಯುವುದನ್ನು ಮುಂದುವರಿಸುತ್ತೀರಿ ಎಂದಿದ್ದಾರೆ.
‘ನೀವು ಜಗತ್ತಿಗೆ ಸುಳ್ಳು ಹೇಳುವ ಮೂಲಕ ಅಥವಾ ಸುಳ್ಳನ್ನು ಪ್ರಶ್ನಿಸುವ ಮೂಲಕ ನಿಮ್ಮ ಪಾತ್ರವನ್ನು ನಿರ್ವಹಿಸುತ್ತೀರಿ, ಆದರೆ ಅದು ಒಬ್ಬ ವ್ಯಕ್ತಿ ಅಥವಾ ಪರಿಸ್ಥಿತಿಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ…’ ಎಂದು ಬರೆದು ‘ನಗುವ ಎಮೋಜಿ’ಯನ್ನು ಹಂಚಿಕೊಂಡಿದ್ದಾರೆ.