ಬೆಂಗಳೂರು: ಕೋಟಿ ಕೋಟಿ ಹಣ,ಚಿನ್ನಾಭರಣ ಪಡೆದು ಐಸ್ ಪೈಸ್ ಆಟ ಆಡ್ತಿದ್ದ ಐಶ್ವರ್ಯಳ ಮತ್ತೊಂದು ಮುಖ ಅನಾವರಣವಾಗಿದೆ..ಬೇರೆಯವರಿಂದ ಹಣ ಪಡೆದಿದ್ದಲ್ಲೆದ್ದೆ ಕೊಟ್ಟ ಹಣ ವಾಪಸ್ಸು ಕೇಳಿದ್ದಕ್ಕೆ ಜೀವಬೆದರಿಕೆ ಕೂಡ ಹಾಕಿದ್ದಾಳೆ..ಅಷ್ಟೇ ಅಲ್ಲಾ ಅವಾಚ್ಯ ಪದಗಳಿಂದ ನಿಂದಿಸಿ ಆಡಿಯೋ ಮೆಸೆಜ್ ಕಳಿಸಿದ್ದಾಳೆ..
ಐಶ್ವರ್ಯ ಗೌಡ..ಕೋಟಿ ಕೋಟಿ ಮೌಲ್ಯದ ಚಿನ್ನ ಪಡೆದು ವಂಚನೆ ಮಾಡಿರೊ ಚಿನ್ನದ ಕೋಳಿ..ಡಿ.ಕೆ.ಸುರೇಶ್ ಹೆಸರನ್ನೇ ಬಂಡವಾಳ ಮಾಡಿಕೊಂಡು ಉಂಡೇನಾಮ ಹಾಕಿರೊ ಐನಾತಿ..ಈಕೆಯ ವಂಚನೆ ಪುರಾಣ ದಿನಕ್ಕೊಂದು ತಿರುವು ಪಡೆದುಕೊಳ್ತಿದೆ..ಸದ್ಯ ಆಕೆ ಧಮ್ಕಿ ಹಾಕಿರೊ ಮೂರು ಆಡಿಯೋ ಲಭ್ಯವಾಗಿದ್ದು..ಆಕೆಯ ಮತ್ತೊಂದು ಮುಖ ಅನಾವರಣವಾಗಿದೆ
ಹೌದು..ಆರ್..ಆರ್..ನಗರದ ಉದ್ಯಮಿ ಶಿಲ್ಪ ಗೌಡಳಿಗೆ ನಾನು ಡಿ.ಕೆ.ಶಿವಕುಮಾರ್ ಸಹೋದರಿ..ಚಿನ್ನದ ವ್ಯಾಪಾರಿ..ವಿಲ್ಲ ಮಾಡೊ ರಿಯಲ್ ಎಸ್ಟೇಟ್ ಉದ್ಯಮಿ ಎಂದು ಪರಿಚಯಿಸಿಕೊಂಡು..3.25 ಕೋಟಿ ಹಣ 430 ಗ್ರಾಂ ಚಿನ್ನಾಭರಣ ಪಡೆದು ಹಣ ಚಿನ್ನಾಭರಣ ಕೊಡದೆ ವಂಚಿಸಿದ್ದಾಳೆ..ವಾಪಸ್ಸು ಕೇಳಿದ ಶಿಲ್ಪ ಗೌಡಳಿಗೆ ಅವಾಚ್ಯ ಪದಗಳಿಂದ ನಿಂದಿಸಿ ಆಡಿಯೋ ಕಳುಹುಸಿದ್ದಾಳೆ..
ನಾನ್ ಯಾಕ್ ಕಿ**
ನೀನ್ ಬಂದು ಅದೇನ್ ಕಿ**** ಕಿ*
ಅದೆಷ್ಟು ಕಿ*** ಏನ್ ಕಿ** ನಾನ್ ನೋಡಲೇಬೇಕು ಕಣೆ ನಿನಗೆ.
ಅದೇನ್ ಮಾಡ್ತಿಯಾ ಮಾಡ್ಬಿಡೇ ನೋಡೆ ಬಿಡೋಣ.
ಯಾರದ್ದು ಕೊಟ್ಟು ತೀರಿಸ್ತಿನೋ ಬಿಡ್ತಿನೋ.ನಿಂದು ಮಾತ್ರ ತೀರಿಸಿಬಿಟ್ರೆ ಕೇಳ್ಕೊ.
ನೀನ್ ಇದೆ ಥರ ಅಲಿಬೇಕು. ಇಲ್ಲ ಇದ್ಯಾವ್ದಾದ್ರು ದೊಡ್ಡ ಲೆವೆಲ್ ಗೆ ಹೋಗಿ, ನಿನ್ನ ಮರ್ಯಾದೆ ಹೋಗಬೇಕು. ಇಲ್ಲ ನನ್ನ ಮರ್ಯಾದೆ ಹೋಗಬೇಕು ಅಷ್ಟೇ. ನಿಂದು ಹೋಗಬೇಕು. ನಂದು ಹೋಗಬೇಕು. ನಿನ್ನ ಮರ್ಯಾದೆ ಕಳಿಬೇಕು. ಅಲ್ಲಿವರೆಗೂ ನನಗೆ ಸಮಾಧಾನ ಇಲ್ಲ. ನಾನ್ ಕೊಡೋದು ಇಲ್ಲ.ಇನ್ನೊಂದ್ ಸರಿ ಕಂಡೋರ್ ಮಾತ್ ಕೇಳ್ಕೊಂಡ್ ಆಡಬಾರದು ಅನ್ನೊ ಬುದ್ಧಿ ನಿನ್ ಲೈಫಲ್ ಬರಬೇಕು. ಇಲ್ಲ ನೀನ್ ಮಣ್ಣು ಮುಕ್ಕಬೇಕು. ಇಲ್ಲ ನಾನ್ ಮಣ್ಣು ಮುಕ್ಕಬೇಕ ನಿನ್ನಿಂದ. ಇದೆರಡೇ ಮಾಡಬೇಕು. ನೋಡೆಬಿಡೋಣ ಅದೇನಾದ್ರು ಆಗೋಗ್ಲಿ. ಅದೇನು ಕಿ*** ಕಿ* ನೀನೆ
ಈ ಥರ ಆಟಗಳು ಅವತಾರಗಳು ಎಲ್ಲ ನಿನ್ನತ್ರ ಇಟ್ಕೊ.
ಯಾರೋ ರೌಡಿಗಳನ್ನ ಕಳಿಸೋದು.ಅವರತ್ರ ಹೇಳಿಸೋದು ಅವರಿಗೆ ಡೀಲ್ ಕೊಡೋದು. ಇವೆಲ್ಲ ನಿನ್ನತ್ರನೇ ಇಟ್ಕೊ. ನನ್ನತ್ರ ಇದನ್ನೆಲ್ಲ ತಗೊಂಡ್ ಬಂದ್ರೆ ನಿನ್ನು ಸೇರಿ ಕಂಪ್ಲೆಂಟ್ ಕೊಡ್ತೀನಿ. ನೀನ್ ಬೇರೆ ಥರ ನನಗ್ ಮಾಡಬಹುದು.ನಾನ್ ಇನ್ನೊಂಥರ ಮಾಡಿ ಕುತ್ಕೊಳ್ತಿನಿ. ನೀನ್ ಇನ್ನು ನೋಡಿಲ್ಲ ಮಗಳೆ ನನ್ನ ಒಳ್ಳೆದಾಗ್ ಒಲಿದು ಬಂದ್ರೆ ಅಷ್ಟೇ. ಕೆಟ್ಟೊಗಿರೋ ನಾಲಿಗೆನ ಅವನ್ಯಾವನೋ ಇದಾನಲ್ಲ ಅವನತ್ರ ನಿನ್ನ ಗಂಡನ ಹತ್ರ ಮಾತಾಡು.ನಾಲಿಗೆ ಹರಿದುಕೊಂಡು ಇದೇ ಥರ ಮಾತಾಡಿದ್ರೆ ನಿನ್ನ ನಾಲಿಗೆ ಕಟ್ ಮಾಡ್ತೀನಿ.ಆರ್.ಆರ್.ನಗರದಲ್ಲಿ ಜನ ನನ್ನ ಸಾಲ ಮಾಡ್ಕೊಂಡವ್ಳೆ ಅನ್ನುತಿರಬಹುದು. ಆದ್ರೆ ನನ್ನ ಯಾರು ಕೆಟ್ಟೋಳು ಅಂತಿಲ್ಲ.
ಯಾವೋನ್ ಹತ್ರನೋ ಹೋಗಿ ಮ** ಎದ್ದು ಬರ್ತಾವ್ಳೆ ಅಂತಿಲ್ಲ. ಜನ ನಿನ್ನ ಯಾವ ಥರ ಉಗಿತಾವ್ರೆ ಅನ್ನೊದು ಈಚೆ ಬಂದು ಕೇಳಿಸ್ಕೋ. ಇವೆಲ್ಲ ಅವತಾರಗಳು ನಿನ್ನತ್ರ ಇಟ್ಕೊ.ನನ್ನತ್ರ ಆಡಬೇಡ. ನಿನ್ನು ಸಾಲ ಮಾಡವ್ಳೆ ಅಂತಾನೇ ಅಂತಿರೋದು. ಅದರ ಜೊತೆಗೆ ಇನ್ನು ಒಂದ್ ಪಟ್ಟ ಇದೆ ನಿನಗೆ. ಅದೆಷ್ಟ್ ಜನರ ತಲೆ ಹೊಡೆದು ತಂದು ಕೊಟ್ಟಿದ್ದೋ ನನಗೆ. ನಾವ್ ಬೀದಿಗೆ ಬರೋ ಹಂಗ್ ಆಗಕ್ಕೆ.ಇವೆಲ್ಲ ಮಾತ್ ನೀಡ್ ಆಡುದ್ರೆ ನನಗೂ ಮಾತಾಡಕ್ ಬರತ್ತೆ.ತಡ್ಕಂಡ್ ತಡ್ಕಂಡ್ ಕೂತಿರೋದು ನಾಲಕ್ ದಿನ ಅಕ್ಕ ಅಂತ ಕರೆದಿದ್ದೀನಿ ಅಂತ. ನೀನ್ ನನ್ನ ಪ್ರೀತಿಗೆ ಮೋಸ ಮಾಡಿರೋದು ಕಂಡು ಕಂಡ ಸೂ**** ಇವತ್ತು ನಿನಗೆ ಒಳ್ಳೆಯವ್ರು ಆಗಿಬಿಟ್ಟವ್ರೆ. ಅವರ ಬಾಲ ಇಟ್ಕೊಂಡ್ ನಿಗರಾಡ್ತಿದಿದ್ಯಾ.
ಅದೇನೋ ದೊಡ್ಡದಾಗಿ ನಿಗುರ್ಕೊಂಡ್ ಹೋದೆ ಒಡವೆನ ಅದು ಮಾಡಿಸ್ತೀನಿ ಇದು ಮಾಡುಸ್ತೀನಿ ಅಂತ ಎಲಾ ಮತ್ತೆ ಏನು ರೆಸ್ಪಾನ್ಸೆ ಇಲ್ಲ ಸತ್ಯ ಗೊತ್ತಾದಮೇಲೆ ಮನೇಲ್ ಮುಚ್ಕೊಂಡ್ ಕುತ್ಕೊಂಡ್ ಬಿಟ್ಟಿದ್ಯಾ.ಯಾಕೆ ಅವನಿಗೂ ನಿನಗೂ ಏನಾದ್ರು ಕಮಿಟ್ಮೆಂಟ್ ಮಾಡ್ಕೊಂಡಿದ್ಯಾ. ನೀನೆ ಏನಾದ್ರು ದುಡ್ಡು ಕೊಟ್ಟು ಬಿಡುಸ್ಕೊಂಡಿದ್ಯಾ.ನನಗ್ಯಾಕೋ ಡೌಟ್ ಹೊಡಿತಿದೆ. ಇದೆ ಹಿಂದೆ ನೀನೆ ದುಡ್ಡುಕೊಟ್ಟು ಬಿಡುಸ್ಕೊಂಡಿದ್ಯಾ ಅಂತ.ಅದೊಂದನ್ನ ಹುಡುಕ್ತಿದಿನಿ ಅವನು ತಗೊಂಡು ಯಾವ್ ಯಾವ ಏರಿಯಾ ತಿರುಗಿದ ಅಂತ.ಮಗಳೆ ಸಿಕ್ಕಿಹಾಕ್ಕೋಬಿಡು ನಿನ್ನ ಹುಟ್ಟಲಿಲ್ಲ ಅನಿಸಿಬಿಡ್ತೀನಿ
ನೋಡು ಗಜಾ ಯಾರ್ ಕಾಂಟಾಕ್ಟ್ ಗೂ ಸಿಕ್ತಿಲ್ಲ. ನನ್ನತ್ರ ತರಿಸ್ಕೊಂಡಿದ್ದು ನೀನು ಅಮೌಂಟ್ ತಗೊಂಡಿದ್ದು ನೀನು. ಸೋ ನೀನೆ ನನಗೆ ರಿಟರ್ನ್ ಮಾಡು ಎಲ್ಲ ಅಂತ ಕಳಿಸಿದ್ದೀಯಾ. ನಾನು ನಿನಗೆ ಅದನ್ನೆ ಮಧ್ಯಾಹ್ನ ಮಾತಾಡೋವಾಗ ಹೇಳ್ದೆ. ನೀನು ಆರು ಕೊಟ್ರೆ ಅತ್ತೆ ಕಡೆ ಮೂರ್ ಕೊಟ್ರೆ ಸೊಸೆ ಕಡೆ ಅನ್ನೊ ಹಾಗೆ ನುಲಿಬೇಡ. ಹೇಳೊದನ್ನ ಕೇಳಿಸ್ಕೊಂಡೆ ತಾನೆ ಎಲ್ಲನೂ. ಅವ್ನು ನನ್ ಪೋನು ಎತ್ತುತ್ತಿಲ್ಲ ಅಂತ ನಿನಗೆ ಹೇಳ್ತಿರೋದು. ಅವ್ನು ಒಬ್ಬನಿಗೆ ಹು** ಎತ್ತಿ ಮಾತಾಡೋನು. ಅವ್ನು ಎಷ್ಟು ಜನಕ್ಕೆ ಹು*** ಅನ್ನೊದು ನನಗೆ ಗೊತ್ತಿಲ್ಲ. ಹಾಗಾಗಿ ಅವ್ನು ಎತ್ತಿ ಮಾತಾಡ್ತಿಲ್ಲ ನನ್ನತ್ರ. ಮತ್ತೆ ನಿನ್ನ ಒಡವೆಯನ್ನ ಹೀಗೆ ಮಾಡಿದ್ದಾನೆ ಒಡವೆ ಬಿಡಿಸಲು ಅವನು ಬರಬೇಕು.
ನಾನ್ ಮಾಡಿದ್ರೆ ಅವ್ನು ತೆಗಿತಿಲ್ಲ. ನೀನ್ ಪೋನ್ ಮಾಡಿ ಕೇಳು ಯಾಕಂದ್ರೆ ನನಗಿಂತ ಸ್ಟ್ರಾಂಗ್ ಆಗಿ ಉಗಿತಿಯಲ್ಲ ನೀನು. ನಾರ್ಮಲ್ ಆಗಿ ಕೇಳಿ ಇದನ್ನ ಬಗೆಹರಿಸ್ಕೊಳ್ತಿಯಾ ಅಥವಾ ಉಗಿದುಬರಿಸ್ತಿಯೋ ಅನ್ನೊದು ಒಂದು ಇದು. ನೀನು ನನಗಿಂಗ ಚೆನ್ನಾಗಿ ಡೀಲ್ ಮಾಡ್ತಿಯಾ ಅಂತ ಹೇಳ್ದೆ ಅಷ್ಟೆ. ತಗೊಂಡಿರೋದು ನಾನೇ ಕೊಡೋಳು ನಾನೇ. ಅಂದ್ರೆ ನಾನ್ ನಿನಗೆ ಅದನ್ನೆ ಕೊಡುಸ್ತೀನಿ ಅಂತ ಹೇಳೋಕ್ ಆಗಲ್ಲ.ಅದರ ವೈಯ್ಟ್ ಹೊಸ ಚಿನ್ನ ಬೇಕಾದ್ರೆ ನಾನ್ ಕೊಡುಸ್ತೀನಿ. ಅಷ್ಟೋತ್ ವರೆಗೂ ಇದ್ದು ಬಿಡ್ಸೊಕ್ ಸಾಧ್ಯ ಆದ್ರೆ ಬಿಡಿಸ್ಬಿಟ್ಟೆ ಕೊಡ್ತಿನಿ. ಬಿಡ್ಸೊಕ್ ಆಗಲಿಲ್ಲ ಅಂದ್ರೆ. ಈ ಚಿನ್ನಕ್ಕೊಸ್ಕರ ನಾನ್ ಹೋಗಿ ನನ್ನ ಮನೆಯಲ್ಲಿ ಅನ್ನ ತಿಂದ್ಕೊಂಡು ನನ್ನ ಮನೆಯಲ್ಲಿ ಬಾಲ ಅಲ್ಲಾಡಿಸ್ಕೊಂಡು ಇದ್ದ ನಾಯಿ ನನ್ನ ಮಕ್ಕಳು.
ನನ್ನ ಚಪ್ಪಲಿ ಹೊಲೆಸ್ತಿದ್ದಂತ ನಾಯಿ ನನ್ನ ಮಕ್ಕಳ ಹತ್ರ ಹೋಗಿ ನಾನ್ ಬೆಂಡ್ ಆಗಿ ಕೈ ಕಟ್ಕೊಂಡು ನಾನ್ ಬಂದು ಒಡವೆ ಬಿಡಿಸ್ಕೊಡು ಅಂತ ನಾನ್ ಕೇಳೋಕ್ ಆಗಲ್ಲ. ಯಾವ್ ನನ್ ಮಕ್ಳತ್ರನೂ ನಾನ್ ತಲೆಕೆಡಿಸ್ಕೊಂಡು ಬಗ್ಗೊಕ್ ಆಗಲ್ಲ. ಚಿನ್ನಕ್ಕೊಸ್ಕರ ಹೋಗಿ ಅವರ ಮುಂದೆ ನಾನ್ ತಲೆತಗ್ಸೋಕ್ ಆಗಲ್ಲ. ಈಗ ಆಲ್ರೆಡಿ ನನಗೆ ಆಗಿರೋ ನೋವುಗಳನ್ನ ತಡೆದುಕೊಳ್ಳಲಿಕ್ಕೆ ಆಗ್ತಿಲ್ಲ. ಈಗ ಅವ್ರತ್ರ ಕೈ ಕಾಲ್ ಹಿಡ್ಕೊಂಡು ನನಗೆ ಚಿನ್ನ ಕೊಡ್ಸಪ್ಪ ಅಂತ ಕೇಳೊ ಹಣೆಬರಹ ನನಗಿಲ್ಲ. ನಿನಗೇನು ಚಿನ್ನ ಕೊಡ್ಬೇಕು ಅದನ್ನೆ ಏನ್ ತಕ್ಕೊಡ್ಬೇಕೋ ನಾನ್ ಕೊಡ್ತೀನಿ ಅದರ ಮೇಲೂ ಇನ್ನು ಎಕ್ಸ್ ಟ್ರಾ ಒಂದಷ್ಟ್ ಚಿನ್ನ ಕೊಡ್ತಿನಿ ತಗೊ ಮಾಡಿಸ್ಕೋ ಅದೇ ಥರ ಬೇಕಾದ್ರೆ ಮಾಡಿಸ್ಕೋ ಇಲ್ಲ ಹೊಸ ಚಿನ್ನ ಬೇಕಾದ್ರೆ ತರಿಸ್ಕೋ. ಅಥವಾ ಅವನೇನಾದ್ರು ಒಪ್ಕೊಂಡು ಹೂ ಅಂದ್ರೆ ನಾನ್ ದುಡ್ಡು ಅಡ್ಜೆಸ್ಟ್ ಮಾಡಿ ಕೊಡ್ತೀನಿ ನೀನು ಬಿಡುಸ್ಕೊ. ಅದನ್ನ ಬಿಟ್ಟು ಅವನು ಮಹೇಶ ಹೇಳ್ತಾನೆ.
ಯಾವ್ ಮಹೇಶನೂ ಅವನು ಇಬ್ರು ಬೆಳಗ್ಗೆ ಆದ್ರೆ ಜೊತೇಲೆ ತಿರುಗಾಡ್ತಾ ಇರ್ತಾರೆ.ಸುಮ್ನೆ ಅವ್ನು ನಿನಗೆ ಸುಳ್ಳು ಹೇಳಿ ಇದು ಮಾಡ್ತಾವ್ನೆ. ನಿನಗೆ ಗೊತ್ತಿಲ್ಲ ನೀನು ನೀನೆನೋ ಭಾರಿ ದಬ್ಬಾಕಿ ಮಾಡ್ತಿಯಾ ಅಂತ ಹೇಳ್ದೆ. ಮಾಡೋಕ್ ಆಗಲ್ಲ ಅಂದ್ರೆ ಬಿಟ್ಟಾಕು ಯಾಕ್ ತಲೆಕೆಡಿಸ್ಕೊತಿಯಾ. ನನಗೆ ಚಿನ್ನಕ್ಕೋಸ್ಕರ ಹೋಗಿ ಕೈ ಕಾಲ್ ಹಿಡ್ಕೊಳೋಕ್ ಆಗಲ್ಲ ಹೊಸ ಚಿನ್ನ ಮಾಡಿಸಿಕೊಡ್ತೀನಿ ಬಿಡು
ಹೀಗೆ ಐಶ್ವರ್ಯಳ ಆಡಿಯೋ ಬಿಡುಗಡೆಯಾಗಿದ್ದು..ಮತ್ತೊಂದು ಮುಖ ಅನಾವರಣ ಗೊಂಡಿದೆ..ಈ ಎಲ್ಲಾ ಆಡಿಯೋ ಪೊಲೀಸರಿಗೆ ಶಿಲ್ಪಗೌಡ ನೀಡಿದ್ದು ಖಾಕಿ ತನಿಖೆ ಮುಂದುವರೆಸಿದೆ..ಮುಂದೆ ಐಶ್ವರ್ಯ ಗೌಡಳ ಮತ್ಯಾವ ಪುರಾಣ ಹೊರ ಬರುತ್ತೋ ಕಾದುನೋಡಬೇಕಿದೆ