ಗಾಝಾ: ಕಳೆದ 24 ಗಂಟೆಗಳಲ್ಲಿ ಗಾಝಾದಾದ್ಯಂತ ಇಸ್ರೇಲ್ ನ ದಾಳಿಯಲ್ಲಿ ಕನಿಷ್ಠ 81 ಫೆಲೆಸ್ತೀನೀಯರು ಸಾವನ್ನಪ್ಪಿದ್ದು 188 ಮಂದಿ ಗಾಯಗೊಂಡಿರುವುದಾಗಿ ಗಾಝಾ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಗಾಝಾ ಮತ್ತು ಇಸ್ರೇಲ್ ನಲ್ಲಿ ಜನರು ಕದನ ವಿರಾಮ ಒಪ್ಪಂದದ ಸಂಭ್ರಮಾಚರಣೆಯಲ್ಲಿ ಇರುವಾಗಲೇ ಇಸ್ರೇಲ್ ನ ಮಿಲಿಟರಿ ಗಾಝಾದಲ್ಲಿ ಬುಧವಾರ ರಾತ್ರಿಯಿಂದ ವ್ಯಾಪಕ ವೈಮಾನಿಕ ದಾಳಿ ನಡೆಸಿರುವುದಾಗಿ ನಾಗರಿಕ ತುರ್ತು ಸೇವಾ ಇಲಾಖೆ ತಿಳಿಸಿದೆ.
ಇಸ್ರೇಲ್ ಮತ್ತು ಹಮಾಸ್ ಕದನ ವಿರಾಮ ಒಪ್ಪಂದಕ್ಕೆ ಒಪ್ಪಿಕೊಂಡಿವೆ ಎಂದು ಮಧ್ಯವರ್ತಿಗಳು ಘೋಷಿಸಿದ್ದಾರೆ. ಆ ಮೂಲಕ ಗಾಝಾ ಪಟ್ಟಿಯಲ್ಲಿ 15 ತಿಂಗಳಿನಿಂದ ನಡೆಯುತ್ತಿರುವ ವಿನಾಶಕಾರಿ ಯುದ್ಧಕ್ಕೆ ವಿರಾಮ ಸಿಗಲಿದೆ ಎಂದು ಜನರು ಖುಷಿಯಲ್ಲಿದ್ದರು. ಈ ಖುಷಿಯ ಬೆನ್ನಲ್ಲೇ ಇದೀಗ ಮತತೆ ವೈಮಾನಿಕ ದಾಳಿ ನಡೆಸಲಾಗಿದ್ದು ಸ್ಥಳೀಯರನ್ನು ಮತ್ತಷ್ಟು ಚಿಂತೆಗೀಡು ಮಾಡಿದೆ.