ಬೆಂಗಳೂರು:- ಇಂದಿನಿಂದ ಲೋಹದ ಹಕ್ಕಿಗಳ ಕಲರವ ಹಿನ್ನಲೆ ಯಲಹಂಕ ಸುತ್ತ ಮುತ್ತ ಟ್ರಾಫಿಕ್ ಜಾಮ್ ಉಂಟಾಗಿದೆ..
ಬೆಳ್ಳಂಬೆಳಗ್ಗೆ ಫ್ಲೈ ಓವರ್ ನಲ್ಲಿ ಫುಲ್ ಟ್ರಾಫಿಕ್ ಜಾಮ್ ಆಗಿದ್ದು ಕಿಲೋ ಮೀಟರ್ ಗಟ್ಟಲೆ ವಾಹನಗಳು ಸರತಿ ಸಾಲಾಗಿ ನಿಂತಿದೆ… ಈಗಲೇ ಇಷ್ಟು ಟ್ರಾಫಿಕ್ ಆದ್ರೆ ಏರ್ ಶೋ ಮುಗಿಯೋ ಅಷ್ಟರಲ್ಲಿ ನಮ್ಮ ಕತೆ ಏನು ಅಂತ ಜನ ಸಾಮಾನ್ಯರು ಟೆನ್ಶನ್ ಆಗಿದ್ದಾರೆ.
ಇನ್ನೂ ಏಷ್ಯಾದ ಅತಿದೊಡ್ಡ ವೈಮಾನಿಕ ಮತ್ತು ರಕ್ಷಣಾ ಪ್ರದರ್ಶನ ಏರೋ ಇಂಡಿಯಾ ಶೋ ಆರಂಭಗೊಂಡಿದೆ. ಉತ್ತರದಲ್ಲಿ ಮಹಾಕುಂಭ.. ದಕ್ಷಿಣದಲ್ಲಿ ತಂತ್ರಜ್ಞಾನ ಕುಂಭ ಅಂತಾ ಗೃಹಸಚಿವ ರಾಜನಾಥ್ ಸಿಂಗ್ ಏರ್ ಶೋವನ್ನು ಬಣ್ಣಿಸಿದ್ದಾರೆ. ಐದು ದಿನಗಳ ಕಾಲ ನಡೆಯಲಿರುವ ಏರ್ ಶೋ ದೇ ರನ್ ವೇ ಟು ಎ ಬಿಲಿಯನ್ ಆಪರ್ಚುನಿಟೀಸ್ ಎಂಬ ಧ್ಯೇಯದೊಂದಿಗೆ ಅದ್ದೂರಿ ಚಾಲನೆ ಪಡೆದಿದೆ.
ಪ್ರತಿಬಾರಿಯಂತೆ ಹೈಟೆಕ್ ಸಿಟಿ, ಐಟಿಬಿಟಿ ಸಿಟಿ ಅಂತಾನೇ ಕರೆಸಿಕೊಳ್ಳೋ ಬೆಂಗಳೂರು ಸಾಕ್ಷಿಯಾಗುತ್ತಿದೆ. ಈವರೆಗೂ ನಡೆದ ಏರ್ ಶೋಗಳಲ್ಲಿ ಇದೇ ಅತಿದೊಡ್ಡ ಏರೋ ಇಂಡಿಯಾ ಪ್ರದರ್ಶನವಾಗಲಿದೆ. 90 ಕ್ಕೂ ಅಧಿಕ ದೇಶಗಳ ಪಾಲ್ಗೊಳ್ಳುವಿಕೆಯು ಭಾರತದ ವೈಮಾನಿಕ ಮತ್ತು ರಕ್ಷಣಾ ಸಾಮರ್ಥ್ಯಗಳಲ್ಲಿ ಬೆಳೆಯುತ್ತಿರುವ ಜಾಗತಿಕ ವಿಶ್ವಾಸಕ್ಕೆ ಸಾಕ್ಷಿಯಾಗಿದೆ ಅಂಲೂ ಗೃಹ ಸಚಿವರು ಬಣ್ಣಿಸಿದ್ದಾರೆ.