ವಿದ್ಯಭ್ಯಾಸ ಮುಗಿಸಿ ಕೆಲಸಕ್ಕಾಗಿ ಅಲೆದಾಡುತ್ತಿರುವವರಿಗೆ ಇಲ್ಲೊಂದು ಸುವರ್ಣವಕಾಶವಿದೆ. ಏರ್ ಇಂಡಿಯಾ ಏರ್ ಪೋರ್ಟ್ ಸರ್ವಿಸಸ್ ಲಿಮಿಟೆಡ್ ನಲ್ಲಿ ಖಾಲಿಯಿರುವ ಆಫೀಸರ್ ಮತ್ತು ಜೂನಿಯರ್ ಆಫೀಸರ್ ಹುದ್ದೆಗಳ ಭರ್ತಿಗಾಗಿ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಈ ಇಲಾಖೆಯಲ್ಲಿ 145 ಆಫೀಸರ್ ಮತ್ತು ಜೂನಿಯರ್ ಆಫೀಸರ್ ಸೇರಿದಂತೆ ವಿವಿಧ ಹುದ್ದೆಗಳು ಖಾಲಿಯಿದ್ದು ಆಸಕ್ತರು ಆಫ್ ಲೈನ್ ನಲ್ಲಿ ಜನವರಿ 6, 2025 ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.
- ಇಲಾಖೆ ಹೆಸರು : ಏರ್ ಇಂಡಿಯಾ ಏರ್ಪೋರ್ಟ್ ಸರ್ವಿಸಸ್ ಲಿಮಿಟೆಡ್
- ಹುದ್ದೆಗಳ ಹೆಸರು : ಆಫೀಸರ್ ಮತ್ತು ಜೂನಿಯರ್ ಆಫೀಸರ್
- ಒಟ್ಟು ಹುದ್ದೆಗಳು : 145
- ಉದ್ಯೋಗ ಸ್ಥಳ : ಮುಂಬೈ – ಮಹಾರಾಷ್ಟ್ರ
- ಶೈಕ್ಷಣಿಕ ಅರ್ಹತೆಗಳು
- ಏರ್ ಇಂಡಿಯಾ ಏರ್ಪೋರ್ಟ್ ಸರ್ವಿಸಸ್ ಲಿಮಿಟೆಡ್ ನಲ್ಲಿ ಖಾಲಿಯಿರುವ ಆಫೀಸರ್ ಮತ್ತು ಜೂನಿಯರ್ ಆಫೀಸರ್ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿಶ್ವವಿದ್ಯಾಲಯಗಳಿಂದ ಪದವಿ ಮತ್ತು ಸ್ನಾತಕೋತ್ತರ ಪದವಿಯನ್ನು ಪಡೆದಿರಬೇಕು.
- ವಯೋಮಿತಿ
- ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ವರ್ಷ ಹಾಗೂ ಗರಿಷ್ಠ ವಯಸ್ಸು 50 ವರ್ಷ ದಾಟಿರಬಾರದು. ಮೀಸಲಾತಿ ಅನುಸಾರವಾಗಿ ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಹಾಗೂ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.
- ಅರ್ಜಿ ಶುಲ್ಕ
- ಆಫೀಸರ್ ಹಾಗೂ ಜೂನಿಯರ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸ ಬಯಸುವ ಇತರೆ ಅಭ್ಯರ್ಥಿಗಳಿಗೆ 500/- ರೂ ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿದೆ. ಮಾಜಿ ಸೈನಿಕರು, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ.
- ಆಯ್ಕೆ ವಿಧಾನ
- ದೈಹಿಕ ಸಹಿಷ್ಣುತೆ ಪರೀಕ್ಷೆ
- ಸಂದರ್ಶನ
- ಸಂದರ್ಶನ ನಡೆಯುವ ಸ್ಥಳ
- ಮುಂಬೈ: ಎಐ ಏರ್ಪೋರ್ಟ್ ಸರ್ವೀಸಸ್ ಲಿಮಿಟೆಡ್,
- ಜಿಎಸ್ ಡಿ ಕಾಂಪ್ಲೆಕ್ಸ್, ಸಿಎಸ್ಎಂಐ ವಿಮಾನ ನಿಲ್ದಾಣ,
- ಸಿಐಎಸ್ ಎಫ್ ಗೇಟ್ ನಂ.5 ಹತ್ತಿರ,
- ಸಹರ್, ಅಂಧೇರಿ ಪೂರ್ವ, ಮುಂಬೈ -400099
- ಪ್ರಮುಖ ದಿನಾಂಕಗಳು
- *ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 25 ಡಿಸೆಂಬರ್ 2024
- *ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 6 ಜನವರಿ 2025
- *ಸಂದರ್ಶನ ನಡೆಯುವ ದಿನಾಂಕ : 8 ಜನವರಿ 2025