ಸಿದ್ದಾರ್ಥ್ ಆನಂದ್ ನಿರ್ದೇಶನದ ದೀಪಿಕಾ ಪಡುಕೋಣೆ ಹಾಗೂ ಹೃತಿಕ್ ರೋಷನ್ ಕಾಂಬಿನೇಷನ್ ನ ಫೈಟರ್ ಸಿನಿಮಾ ಸದ್ಯದಲ್ಲೇ ತೆರೆಗೆ ಬರಲಿದೆ. ಈ ಮಧ್ಯೆ ಚಿತ್ರದಲ್ಲಿರುವ ಚುಂಬನ ದೃಶ್ಯ ಕುರಿತಂತೆ ವಾಯುಸೇನಾ ಅಧಿಕಾರಿಯೊಬ್ಬರು ಗರಂ ಆಗಿದ್ದಾರೆ. ವಾಯುಸೇನೆ ಸಮವಸ್ತ್ರ ಧರಿಸಿಕೊಂಡು ಹೃತಿಕ್ ಮತ್ತು ದೀಪಿಕಾ ಚುಂಬಿಸುವ ದೃಶ್ಯವು ವಸ್ತ್ರ ಸಂಹಿತೆ ನೀತಿಯನ್ನು ಉಲ್ಲಂಘಿಸಿದ್ದು ಇದರಿಂದಾಗಿ ವಾಯುಸೇನೆಗೆ ಮುಜುಗರ ತರಿಸಿದೆ ಎಂದು ಅಧಿಕಾರಿ ಅಸ್ಸಾಮಿನ ಸೌಮ್ಯ ದೀಪ್ ದಾಸ್ ಎನ್ನುವವರು ದೂರು ನೀಡಿದ್ದಾರೆ.
ಫೈಟರ್ ಸಿನಿಮಾ ಒಂದಿಲ್ಲೊಂದು ಕಾರಣಕ್ಕೆ ವಿವಾದ ಎದುರಿಸುತ್ತಲೆ ಇದೆ. ಈ ಹಿಂದೆ ಸೆನ್ಸಾರ್ ಮಂಡಳಿಯು ಚಿತ್ರದ ಎರಡು ದೃಶ್ಯಗಳನ್ನು ಕತ್ತರಿಸುವಂತೆ ಸೂಚಿಸಲಾಗಿತ್ತು. ಅದರಲ್ಲೂ ದೀಪಿಕಾ ಪಡುಕೋಣೆ ಬಿಕಿನಿ ಧರಿಸಿದ್ದ ದೃಶ್ಯಕ್ಕೆ ಕತ್ತರಿ ಹಾಕಲಾಗಿತ್ತು. ಇದೀಗ ಚಿತ್ರಕ್ಕೆ ಮತ್ತೊಮ್ಮೆ ಸಂಕಷ್ಟ ಎದುರಾಗಿದೆ.
ಈ ಹಿಂದೆಯೂ ಕೂಡ ಶಾರುಖ್ ಖಾನ್ ಜೊತೆ ಕಾಣಿಸಿಕೊಂಡಿದ್ದ ಪಠಾಣ್ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಧರಿಸಿದ್ದ ಕೇಸರಿ ಬಿಕಿನಿ ಸಾಕಷ್ಟು ವಿವಾದ ಸೃಷ್ಟಿಸಿತ್ತು. ಇದೀಗ ಮತ್ತೊಮ್ಮೆ ಬಿಕಿನಿ ಕಾರಣಕ್ಕೆ ದೀಪಿಕಾ ವಿವಾದ ಹುಟ್ಟುಹಾಕಿದ್ದಾರೆ.