ಬೆಂಗಳೂರು:- ಯತ್ನಾಳ್ ಓರ್ವ ಕಾಂಗ್ರೆಸ್ ಏಜೆಂಟ್ ಎಂದು ರೇಣುಕಾಚಾರ್ಯ ವಾಗ್ದಾಳಿ ಮಾಡಿದ್ದಾರೆ
ಈ ಸಂಬಂಧ ಮಾತನಾಡಿದ ಅವರು, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಒಬ್ಬ ಗೋಮುಖ ವ್ಯಾಘ್ರ. ಕಾಂಗ್ರೆಸ್ ಏಜೆಂಟರಂತೆ ವರ್ತಿಸುತ್ತಿದ್ದಾರೆ.
ವಿಜಯಪುರದಲ್ಲೊಂದು ಮಾದರಿ ಮದುವೆ: ಗಮನ ಸೆಳೆದ ಸಿರಿಧಾನ್ಯ ಕಲ್ಯಾಣೋತ್ಸವ!
ಈ ಹಿಂದೆ ಯತ್ನಾಳ್ರನ್ನ ಬಿಜೆಪಿಯಿಂದ ಉಚ್ಚಾಟನೆ ಮಾಡಲಾಗಿತ್ತು. ಬಳಿಕ ಜೆಡಿಎಸ್ಗೆ ಹೋಗಿದ್ದರು. ಯಡಿಯೂರಪ್ಪನವರ ಕಾಲು ಹಿಡಿದು ಮತ್ತೆ ಬಿಜೆಪಿಗೆ ಸೇರಿಕೊಂಡಿದ್ದರು. ಈಗ ಅವರ ಬಗ್ಗೆ ಮಾತಾಡಲು ಯಾವ ನೈತಿಕತೆಯಿದೆ ಎಂದು ಕಿಡಿಕಾರಿದ್ದಾರೆ.
ರಾಷ್ಟ್ರೀಯ ನಾಯಕರ ಆಶೀರ್ವಾದ, ರಾಜ್ಯ ನಾಯಕರ ಸಹಕಾರದಿಂದ ಸೈಕಲ್, ಬಸ್ನಲ್ಲಿ ಓಡಾಡಿ ಬಿಎಸ್ಯಡಿಯೂರಪ್ಪ ಪಕ್ಷ ಸಂಘಟನೆ ಮಾಡಿದ್ದಾರೆ. ಯಡಿಯೂರಪ್ಪ ರಾಜಕಾರಣಕ್ಕೆ ಬಂದಾಗ ನೀನು ಕಣ್ಣು ಬಿಟ್ಟಿದ್ದೇನಪ್ಪ? ಬಿಎಸ್ವೈರಂತೆ ವಿಜಯೇಂದ್ರ ರಾಜ್ಯದಲ್ಲಿ ಪಕ್ಷ ಸಂಘಟನೆ ಮಾಡಿಲ್ವಾ? ಉಪ ಚುನಾವಣೆಯಲ್ಲಿ ವಿಜ ಯೇಂದ್ರ ಸಾಮರ್ಥ್ಯ ತೋರಿಸಿಲ್ವಾ ಎಂದು ಪ್ರಶ್ನಿಸಿದ್ದಾರೆ.