ಬೀದರ್: ಔರಾದ್ ನ ಸರ್ಕಾರಿ ಪ್ರಥಮ ದರ್ಜೆ ಮಹಾ ವಿದ್ಯಾಲಯದಲ್ಲಿ 2023-24ನೇ ಸಾಲಿನಲ್ಲಿ ಉತ್ತಿರ್ಣರಾದ ವಿದ್ಯಾರ್ಥಿಗಳ ಅಂಕಪಟ್ಟಿ ನೀಡಲು ಆಗ್ರಹಿಸಿ ಎನ್ಸಿಯುಐನ ಔರಾದ್ ತಾಲೂಕ ಘಟಕದ ವತಿಯಿಂದ ಔರಾದ್ ತಹಸೀಲ್ದಾರ್ ಮೂಲಕ ಕಲಬುರಗಿ ವಿಶ್ವವಿದ್ಯಾಲಯದ ಮೌಲ್ಯ ಮಾಪನ ವಿಭಾಗದ ಕುಲಸಚಿವರಿಗೆ ಮನವಿ ಪತ್ರ ಸಲ್ಲಿಕೆ ಮಾಡಲಾಯಿತು.
ಕಲಬುರಗಿ ವಿಶ್ವವಿದ್ಯಾಲಯ ಅಡಿಯಲ್ಲಿ ನಡೆಯುತ್ತಿರುವ 2023-24ನೇ ಸಾಲಿನಲ್ಲಿ ಉತ್ತಿರ್ಣರಾದ ಬಿ.ಎ. ಮತ್ತು ಬಿ.ಎಸ್.ಸಿ. ವಿದ್ಯಾರ್ಥಿಗಳ ಅಂತಿಮ ವರ್ಷದ ಅಂಕಪಟ್ಟಿ ಸುಮಾರು ಎರಡು ವರ್ಷಗಳಾದರು ಇನ್ನುವರೆಗೆ ಸಿಕ್ಕಿಲ್ಲಾ, ವಿದ್ಯಾರ್ಥಿಗಳಿಗೆ ಅಂಕಪಟ್ಟಿ ನೀಡಬೇಕು ಇಲ್ಲದಿದ್ದಲ್ಲಿ ಮುಂಬರುವ ದಿನಗಳಲ್ಲಿ ವಿಶ್ವ ವಿದ್ಯಾಲಯದ ಮುಂದೆ ಅಹೋರಾತ್ರಿ ಧರಣಿ ಸತ್ಯಗೃಹ ಮಾಡಲಾಗುವುದು. ಸರ್ಕಾರಿ ಪ್ರಥಮ ದರ್ಜೆ ಕಾಲೇಜನ ಅವೆವಸ್ಥೆ ಸಹಿಸಲಾಗದು. ಜಿಲ್ಲಾದ್ಯಂತ ಎಲ್ಲಾ ಕಾಲೇಜು ವಿದ್ಯಾರ್ಥಿಗಳಿಗೆ ಅಂಕಪಟ್ಟಿ ಈಗಾಗಲೇ ಸಿಕ್ಕಿದು ಕೇವಲ ಇದೆ ಕಾಲೇಜು ವಿದ್ಯಾರ್ಥಿಗಳಿಗೆ ಸಿಗದೇ ಇರುವುದು ಕಾಲೇಜ್ ಆಡಳಿತ ವ್ಯವಸ್ಥೆ ವಿಫಲವಾಗಿದೆ ಎಂದು ದಿನಗಳಲ್ಲಿ ಕಾಲೇಜಿಗೆ ಬಿಗ್ ಹಾಕಿ ಪ್ರತಿಭಟನೆ ನಡೆಸಲಾಗುವದು ಎಂದು ಎಚ್ಚರಿಕೆ ನೀಡಿದರು