ಹವಾಮಾನ ಬದಲಾಗೋ ಈ ದಿನಗಳಲ್ಲಿ ನಾವು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಕೂಡಾ ಅಷ್ಟೇ ಮುಖ್ಯ. ಈ ಸಂದರ್ಭದಲ್ಲಿ ಬೆಚ್ಚನೆಯ ಬಾದಾಮಿ ಸೂಪ್ ಸೇವನೆ ಉತ್ತಮವಾಗಿರುತ್ತದೆ. ಇದನ್ನು ಉಪವಾಸದ ಸಂದರ್ಭದಲ್ಲಿಯೂ ಸೇವಿಸಲು ಅರ್ಹವಾಗಿದೆ. ಬಾದಾಮಿ ಸೂಪ್ ಮಾಡುವ ವಿಧಾನವನ್ನು ನಾವಿಂದು ಹೇಳಿಕೊಡಲಿದ್ದೇವೆ. ನೀವು ಕೂಡಾ ಇದನ್ನು ಸವಿದು ಆರೋಗ್ಯವನ್ನು ಕಾಪಾಡಿಕೊಳ್ಳಿ.
ಬೇಕಾಗುವ ಪದಾರ್ಥಗಳು:
ಬಾದಾಮಿ – 20
ಹಾಲು – 2 ಕಪ್
ನೀರು – 1 ಕಪ್
ಕಲ್ಲುಪ್ಪು – ರುಚಿಗೆ ತಕ್ಕಷ್ಟು
ಕರಿ ಮೆಣಸಿನಪುಡಿ – ಸ್ವಾದಕ್ಕನುಸಾರ
ಬೇಯಿಸಿದ ಆಲೂಗಡ್ಡೆ – 1
ಫ್ರೆಶ್ ಕ್ರೀಮ್ – ಅರ್ಧ ಕಪ್
ಮಾಡುವ ವಿಧಾನ:
* ಮೊದಲಿಗೆ ಬಾದಾಮಿಯನ್ನು ಬೆಚ್ಚಗಿನ ನೀರಿನಲ್ಲಿ ಸುಮಾರು 20 ನಿಮಿಷ ನೆನೆಸಿ.
* ನಂತರ ಅದರ ಸಿಪ್ಪೆ ತೆಗೆದು, ಮಿಕ್ಸರ್ ಜಾರ್ನಲ್ಲಿ ಪೇಸ್ಟ್ ಮಾಡಿಕೊಳ್ಳಿ.
* ಈಗ ಒಂದು ಪ್ಯಾನ್ಗೆ ಈ ಬಾದಾಮಿ ಪ್ಯೂರಿಯನ್ನು ಹಾಕಿ ಬೇಯಿಸಿಕೊಳ್ಳಿ.
* ನಂತರ ಅದಕ್ಕೆ ಹಾಲು, ನೀರು ಸೇರಿಸಿ ಕುದಿಸಿಕೊಳ್ಳಿ.
* ಕಲ್ಲುಪ್ಪು, ಕರಿಮೆಣಸಿನಪುಡಿ ಸೇರಿಸಿಕೊಳ್ಳಿ.
* ಬೇಯಿಸಿದ ಆಲೂಗಡ್ಡೆಯ ಸಿಪ್ಪೆ ತೆಗೆದು, ಮ್ಯಾಶ್ ಮಾಡಿ, ಸೂಪ್ಗೆ ಸೇರಿಸಿ.
* ಈಗ ಫ್ರೆಶ್ ಕ್ರೀಮ್ ಸೇರಿಸಿ, ಮಿಶ್ರಣ ಮಾಡಿ.
* ಇದೀಗ ಆರೋಗ್ಯಕ್ಕೆ ಹಿತವಾದ ಬಾದಾಮಿ ಸೂಪ್ ತಯಾರಾಗಿದ್ದು, ಬೆಚ್ಚಗೆ ಸವಿಯಿರಿ.