ಕಲಬುರ್ಗಿ:– ಕಾಮಗಾರಿಗಳ ಬಗ್ಗೆ ಪ್ರಶ್ನೆ ಕೇಳಿದ್ರೆ ಸದನದಲ್ಲಿ ಸಚಿವ ಕೃಷ್ಣ ಭೈರೇಗೌಡ ನನ್ನ ಮೇಲೆಯೇ ಆರೋಪ ಮಾಡಿದ್ರು ಹೀಗಾಗಿ ನನ್ನ ಸ್ವಾಭಿಮಾನಕ್ಕೆ ಧಕ್ಕೆ ಬಂದ ಹಿನ್ನಲೆ ಸಿಎಂಗೆ ಖಾರವಾಗಿ ಪತ್ರ ಬರೆದಿದ್ದೇನೆ ಅಂತ ಅಳಂದ ಶಾಸಕ ಬಿಆರ್ ಪಾಟೀಲ್ ಹೇಳಿದ್ದಾರೆ.
ಕಲಬುರಗಿಯಲ್ಲಿಂದು ಮಾತನಾಡಿದ ಪಾಟೀಲ್ ಪಂಚರಾಜ್ಯ,ಚುನಾವಣೆ ಇದ್ದ ಕಾರಣ ಇಷ್ಟು ದಿನ ಸುಮ್ಮನಿದ್ದೆ ಅದಕ್ಕಾಗಿ ಈಗ ಪತ್ರ ಬರೆದಿದ್ದು ಸಚಿವ ಕೃಷ್ಣ ಬೈರೇಗೌಡರನ್ನ ಕರೆಸಿ ತನಿಖೆ ಮಾಡಬೇಕು ಅಲ್ಲಿಯವರೆಗೂ ಬೆಳಗಾವಿ ಅಧಿವೇಶನಕ್ಕೂ ಹೋಗಲ್ಲ ಅಂದ್ರು..
ಇದೇವೇಳೆ ಸ್ವಪಕ್ಷೀಯ ಶಾಸಕರ ವಿರುದ್ಧವೇ ಬೇಸರ ಹೊರಹಾಕಿರುವ ಪಾಟೀಲ್ ಕಾಮಗಾರಿ ವಿಚಾರದಲ್ಲಿ ನಾನು ಹಣಪಡೆದ ರೀತಿಯಲ್ಲಿ ಸಚಿವರು ಆರೋಪ ಮಾಡಿದಾಗ ನಮ್ಮ ಜಿಲ್ಲೆಯ ಶಾಸಕರೂ ಸೇರಿದಂತೆ ಯಾರೊಬ್ಬರೂ ನನ್ನ ಬೆಂಬಲಕ್ಕೆ ನಿಲ್ಲಲಿಲ್ಲ ಅದಕ್ಕೆ ಸಿಎಂಗೆ ಪತ್ರ ಬರೆದಿದ್ದು ಅಂತ ಹೇಳಿದ್ರು..