ಬೆಳಗಾವಿ : ಯತ್ಬಾಳ್ ಬಳಿಕ ರಮೇಶ್ ಜಾರಕಿಹೊಳಿ ಭಿನ್ನಮತದ ಬೇಗುದಿಯಲ್ಲಿದ್ದಾರಾ..? ಹೀಗೊಂದು ಅನುಮಾನಕ್ಕೆ ಕಾರಣವಾಗಿದೆ ರಾಜ ಋಷಿ ಭಗೀರಥ ಮಹರ್ಷಿ ಮೂರ್ತಿ ಅನಾವರಣ ಕಾರ್ಯಕ್ರಮದಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಆಡಿದ ಮಾತು. ಬೆಳಗಾವಿ ಜಿಲ್ಲೆಯ ಗೋಕಾಕನ ಮಾಲದಿನ್ನಿ ಕ್ರಾಸ್ ಬಳಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತೀಯ ಜನತಾ ಪಾರ್ಟಿಗೆ ನಾನು ಅನಿವಾರ್ಯವಾಗಿ ಹೋಗಿದ್ದೆನೆ. ನಾನು ಕಾಂಗ್ರೇಸ್ ನಿಂದ ಐದು ಬಾರಿ ಶಾಸಕನಾಗಿದ್ದೆ. ಈಗ ಎರಡು ಬಾರಿ ಬಿಜೆಪಿಯಿಂದ ಶಾಸಕನಾಗಿದ್ದೇನೆ. ನನಗೆ ಕಾಂಗ್ರೇಸ್ ಪಕ್ಷ ಕೆಟ್ಟದ್ದು ಮಾಡಿರಲಿಲ್ಲ. ನಾನು ಕಾಂಗ್ರೆಸ್ ಬಿಡಲು ಓನ್ಲಿ ಒಬ್ಬ ಮನುಷ್ಯ ಕಾರಣ ಎಂದು ಪರೋಕ್ಷವಾಗಿ ಡಿಸಿಎಂ ಡಿಕೆಶಿಗೆ ಕುಟುಕಿದರು.
ಪಕ್ಷಕ್ಕೆ ಪೂರ್ಣ ಪ್ರಮಾದ ರಾಜ್ಯಾಧ್ಯಕ್ಷರು ಬೇಕೇ ಬೇಕು – ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಸತೀಶ್ ಜಾರಕಿಹೊಳಿ ಪಟ್ಟು..?
ಕೆಲವೊಂದು ಜನ ಸೇರಿ ನನ್ನ ವಿರುದ್ಧ ಷಡ್ಯಂತ್ರ ಮಾಡಿದ್ರು. ಬಿಜೆಪಿಗೆ ಬಂದ ನಂತರ ಇಲ್ಲೂ ಒಂದು ಷಢ್ಯಂತ್ರ ಮಾಡಿದ್ರು, ಅದಕ್ಕೂ ನಾನು ಹೆದರಲಿಲ್ಲ. ಏಳೆಂಟು ಜನ ಸ್ವಾಮೀಜಿಗಳು ನನಗೆ ಸಮಾಧಾನ ಮಾಡಿದ್ರು. ಇಂತಹ ನೂರು ಸಿಡಿ ಬಂದರೂ ಅಂಜೋದಿಲ್ಲ ಅಂತ ಹೇಳಿದ್ದೆ. ವೈಯಕ್ತಿಕ ಷಢ್ಯಂತ್ರ ಮಾಡಿದ್ರೆ ಅದಕ್ಕೆ ನಾನು ಹೆದರೋದಿಲ್ಲ. ದೇವರಿದ್ದಾನೆ ತಂದೆ ತಾಯಿ ಆಶೀರ್ವಾದ ಇದೆ ಜನರ ಆಶೀರ್ವಾದ ಇದೆ. ಸದ್ಯ ಯತ್ನಾಳ, ನಾನು ಟೂರ್ ಮಾಡ್ತಿದ್ದೇವೆ. ಟೂರ್ ಮುಗಿದ ನಂತರ ದಾವಣಗೆರೆಯಲ್ಲಿ ಸಮಾವೇಶ ಮಾಡ್ತೀವಿ. ಐದರಿಂದ ಹತ್ತು ಲಕ್ಷ ಜನರನ್ನು ಸೇರಿಸಿ ಸಮಾವೇಶ ಮಾಡ್ತೀವಿ. ಜನರನ್ನು ಸೇರಿಸಿ ಪೂರ್ತಿ ಕಹಳೆಯನ್ನು ಊದಿಯೇ ಬಿಡುತ್ತೇವೆ. ಯತ್ನಾಳ ಸಿಎಂ ಆಗ್ತಾರೋ ಬಿಡ್ತಾರೋ ಯಾರ ಸಿಎಂ ಆಗ್ತಾರೋ ಗೊತ್ತಿಲ್ಲ. ಆದರೆ 74 ಪರ್ಸಂಟ್ ಜನಕ್ಕೆ ನ್ಯಾಯ ಸಿಗಬೇಕು . ಎಲ್ಲಾ ಸಮಾಜಗಳಿಗೆ ಪಕ್ಷಾತೀತವಾಗಿ ನ್ಯಾಯ ಸಿಗಬೇಕು. ಒಳ್ಳೇ ರೀತಿಯಲ್ಲಿ ಹೋರಾಟ ಮಾಡುತೇವೆ. ನಾವು ಹೋರಾಟ ಮಾಡಿದ್ರೆ ಸ್ವಾರ್ಥ ಇರಲ್ಲ ನ್ಯಾಯವಾಗಿರುತ್ತೆ. ಇಲ್ಲಿಯವರೆಗೆ ನಾವು ಯಾವುದೇ ಫೇಲ್ ಆಗಿಲ್ಲ. ನಮ್ಮಜನಕ್ಕೆ ನ್ಯಾಯ ಕೊಡಬೇಕು ಎಂದು ನಾವು ಪ್ರತಿಜ್ಞೆ ಮಾಡಿದ್ದೆವೆ ಎಂದಿದ್ದಾರೆ.