ನಟನಾಗಿ ಚಿತ್ರರಂಗಕ್ಕೆ ಬಂದ ತರುಣ್ ಸುಧೀರ್ ನಂತರ ನಿರ್ದೇಶಕನಾಗಿದ್ದು ಯಾಕೆ!? ಎಂಬುವ ಪ್ರಶ್ನೆಗೆ ಉತ್ತರ ಕೊಟ್ಟಿದ್ದಾರೆ.
ತರುಣ್ ಸುಧೀರ್ ನಿರ್ದೇಶಿರುವ ಕಾಟೇರ ಸಿನಿಮಾ ವೀಕ್ಷಕರಿಂದ ಭರ್ಜರಿ ರೆಸ್ಪಾನ್ಸ್ ಪಡೆದಿದ್ದು, ಕೋಟಿ ಕೋಟಿ ಬಾಚುತ್ತಿದೆ.
ಇನ್ನೂ ಈ ಸಿನಿಮಾ ನಿರ್ದೇಶಿಸಿರುವ ತರುಣ್ ಸುಧೀರ್ ಅವರು ಮೊದಲು ಚಿತ್ರರಂಗಕ್ಕೆ ಕಾಲಿಟ್ಟಿದ್ದು ನಟನಾಗಬೇಕು ಎಂಬ ಆಸೆಯಿಂದ. ಆದರೆ ನಿರ್ದೇಶಕನಾಗಿದ್ಯಾಕೆ ಎಂಬ ಬಗ್ಗೆ ಮಾಹಿತಿ ನೀಡಿದ್ದಾರೆ.
ನನ್ನ ಜೀವನದಲ್ಲಿ ನಾನು ಪ್ಲ್ಯಾನ್ ಮಾಡಿಲ್ಲ. ಚಿತ್ರರಂಗದಲ್ಲಿ ಕೆಲಸ ಮಾಡಬೇಕು ಎಂಬುದಷ್ಟೇ ನನಗೆ ಗೊತ್ತಿರುವುದು. ನಮ್ಮ ತಂದೆ ಇಲ್ಲಿ ಸೇವೆ ಮಾಡಿದ್ದಾರೆ. ಅವರ ಹೆಸರಿಗೆ ಧಕ್ಕೆ ಬಾರದಂತೆ ನಡೆದುಕೊಳ್ಳಬೇಕು. ನಟನಾಗಿ ಒಂದಷ್ಟು ವರ್ಷ ಶ್ರಮಪಟ್ಟೆ. ಆದರೆ ಅದು ನನಗೆ ವಕೌರ್ಟ್ ಆಗಲಿಲ್ಲ. ನಿರ್ದೇಶನ ಟ್ರೈ ಮಾಡು ಅಂತ ಸ್ನೇಹಿತರು ಹೇಳಿದರು. ಆಗ ಸಹ-ನಿರ್ದೇಶಕನಾಗಿ ಕೆಲಸ ಮಾಡಿ ಅನುಭವ ಪಡೆದೆ. ಆಮೇಲೆ ‘ಚೌಕ’ ಚಿತ್ರ ನಿರ್ದೇಶನ ಮಾಡಿದೆ. ಹಾಗೆ ನನ್ನ ಪಯಣ ಮುಂದುವರಿದಿದೆ ಎಂದು ಹೇಳಿದ್ದಾರೆ.