ಕೊಡಗಿನ ಕಲಿ ರೋಹನ್ ಬೋಪಣ್ಣ ಭಾರತದ ಪರ ತಮ್ಮ ಸುದೀರ್ಘಾವಧಿಯ ಟೆನಿಸ್ ವೃತ್ತಿಬದುಕಿಗೆ ವಿದಾಯ ಹೇಳಿದ್ದಾರೆ.2024ರ ಸಾಲಿನ ಒಲಿಂಪಿಕ್ಸ್ ಕ್ರೀಡಾಕೂಟದ ಪುರುಷರ ಡಬಲ್ಸ್ ಸ್ಪರ್ಧೆಯ ಮೊದಲ ಪಂದ್ಯದಲ್ಲೇ ಆಘಾತಕಾರಿ ಸೋಲುಂಡ ಪರಿಣಾಮ ಹಠಾತ್ ನಿವೃತ್ತಿ ಘೋಷಿಸಿದ್ದಾರೆ. ಇದರೊಂದಿಗೆ 2026ರಲ್ಲಿ ಜಪಾನ್ ಆತಿಥ್ಯದಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ರೋಹನ್ ಪಾಲ್ಗೊಳ್ಳದಂತ್ತಾಗಿದೆ.
7 ತಿಂಗಳ ಗರ್ಭಿಣಿಯಾಗಿದ್ದರೂ ಒಲಿಂಪಿಕ್ಸ್ನಲ್ಲಿ ಇತಿಹಾಸ ಸೃಷ್ಟಿಸಿದ ಈಜಿಪ್ಟ್ ಫೆನ್ಸರ್ ನಾಡಾ ಹಫೀಜ್
ವಿಶ್ವದ ಮಾಜಿ ನಂ.1 ಡಬಲ್ಸ್ ಆಟಗಾರ ರೋಹನ್ ಬೋಪಣ್ಣ ಇನ್ಮುಂದೆ ಭಾರತವನ್ನು ಪ್ರತಿನಿಧಿಸಿ ಯಾವುದೇ ಪಂದ್ಯಗಳನ್ನು ಆಡುವುದಿಲ್ಲ. ಆದರೆ, ವೃತ್ತಿಪರವಾಗಿ ಗ್ರ್ಯಾಂಡ್ ಸ್ಲ್ಯಾಮ್ ಪಂದ್ಯಗಳಲ್ಲಿ ಆಡುವ ಸಾಧ್ಯತೆ ಇದೆ.
ಮಂಗಳವಾರ ನಡೆದ ಒಲಿಂಪಿಕ್ಸ್ ಟೆನಿಸ್ ಟೂರ್ನಿಯ ಅಂತಿಮ ಹದಿನಾರರ ಘಟ್ಟದಲ್ಲಿನ ಪಂದ್ಯದಲ್ಲಿ ರೋಹನ್ ಬೋಪಣ್ಣ ಮತ್ತು ಎನ್ ಶ್ರೀರಾಮ್ ಬಾಲಾಜಿ ಜೋಡಿ ನಿರಾಶಾದಾಯಕ ಪ್ರದರ್ಶನ ನೀಡಿ ಜರ್ಮನಿಯ ಯಾಕೊಬ್ ಶಾನಿಟರ್ ಮತ್ತು ಮಾರ್ಕ್ ವಾಲ್ನರ್ ಜೋಡಿ ಎದುರು 1-6, 4-6 ಅಂತರದ ನೇರ ಸೆಟ್ಗಳ ಅಂತರದಲ್ಲಿ ಸೋತು ಸ್ಪರ್ಧೆಯಿಂದ ಹೊರಬಿದ್ದಿತು. ಈ ಪಂದ್ಯ ಮುಗಿದ ಬೆನ್ನಲ್ಲೇ ರೋಹನ್ ಬೋಪಣ್ಣ ನಿವೃತ್ತಿ ತೆಗೆದುಕೊಳ್ಳುತ್ತಿರುವುದಾಗಿ ಘೋಷಿಸಿದರು.