ಹೈದರಾಬಾದ್: ನಾವು ನಮ್ಮ ಮಸೀದಿಯನ್ನು (ಬಾಬ್ರಿ ಮಸೀದಿ) ಕಳೆದುಕೊಂಡಿದ್ದೇವೆ. ಅಲ್ಲಿ ಏನಾಗುತ್ತಿದೆ ಎಂಬುದನ್ನು ನೋಡುತ್ತಿದ್ದೀರಿ. ನಿಮ್ಮ ಹೃದಯದಲ್ಲಿ ನೋವು ಇಲ್ಲವೇ ಎಂದು ಮುಸ್ಲಿಂ ಸಮುದಾಯದ ಯುವಕರನ್ನು ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಪ್ರಶ್ನಿಸಿದ್ದಾರೆ.
ಅಯೋಧ್ಯೆ ರಾಮಮಂದಿರದ ಉದ್ಘಾಟನೆ ಸಮೀಪಿಸುತ್ತಿರುವಂತೆಯೇ ಬಿಜೆಪಿ ನೇತೃತ್ವದ ಕೇಂದ್ರದ ಚಟುವಟಿಕೆಗಳ ಬಗ್ಗೆ ಎಚ್ಚರದಿಂದಿರಬೇಕು ಎಂದು ಅಸಾದುದ್ದೀನ್ ಓವೈಸಿ, ಮುಸ್ಲಿಂ ಸಮುದಾಯದ ಯುವಕರಿಗೆ ಮನವಿ ಮಾಡಿದ್ದಾರೆ. ದೇಶದಲ್ಲಿ ಜನವಸತಿ ಉಳಿಯಬೇಕು ಎಂದು ತಿಳಿಸಿದ್ದಾರೆ.
ಬಾಬರಿ ಮಸೀದಿಯನ್ನು ಉಲ್ಲೇಖಿಸಿ ಮಾತನಾಡಿದ ಓವೈಸಿ, ಕಳೆದ 500 ವರ್ಷಗಳಿಂದ ಪವಿತ್ರ ಕುರಾನ್ ಪಠಣ ಮಾಡಿದ ಸ್ಥಳ ಈಗ ನಮ್ಮ ಕೈಯಲ್ಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಯುವಕರೇ, ನಾನು ನಿಮಗೆ ಹೇಳುತ್ತಿದ್ದೇನೆ. ನಾವು ನಮ್ಮ ಮಸೀದಿಯನ್ನು ಕಳೆದುಕೊಂಡಿದ್ದೇವೆ. ಈಗ ಅಲ್ಲಿ ಏನು ಮಾಡಲಾಗುತ್ತಿದೆ ಎಂಬುದನ್ನು ನೀವು ನೋಡುತ್ತಿದ್ದೀರಿ. ನಿಮ್ಮ ಹೃದಯದಲ್ಲಿ ನೋವು ಇಲ್ಲವೇ ಎಂದು ಪ್ರಶ್ನಿಸಿದ್ದಾರೆ.
Cashews Benefits: ಪ್ರತಿದಿನ ಗೋಡಂಬಿ ತಿನ್ನುವುದರಿಂದ ಎಷ್ಟೊಂದು ಪ್ರಯೋಜನವಿದೆ ಗೊತ್ತಾ..?
500 ವರ್ಷಗಳ ಕಾಲ ನಾವು ಕುಳಿತು ಕುರಾನ್ ಪಠಿಸಿದ ಸ್ಥಳ ಇಂದು ನಮ್ಮ ಕೈಯಲ್ಲಿಲ್ಲ. ಯುವಕರೇ, ಇನ್ನು ಮೂರ್ನಾಲ್ಕು ಮಸೀದಿಗಳ ಬಗ್ಗೆ ಷಡ್ಯಂತ್ರ ನಡೆಯುತ್ತಿದೆ. ಅದರಲ್ಲಿ ದೆಹಲಿಯ ಸುನ್ಹೇರಿ ಮಸೀದಿ (ಗೋಲ್ಡನ್ ಮಸೀದಿ) ಸಹ ಸೇರಿದೆ ಎಂದು ನೀವು ನೋಡುತ್ತಿಲ್ಲವೇ? ವರ್ಷಗಳ ಕಠಿಣ ಪರಿಶ್ರಮದ ನಂತರ ನಾವು ಇಂದು ನಮ್ಮ ಸ್ಥಾನವನ್ನು ಸಾಧಿಸಿದ್ದೇವೆ. ನೀವು ಈ ವಿಷಯಗಳತ್ತ ಗಮನ ಹರಿಸಬೇಕು ಎಂದು ಎಚ್ಚರಿಸಿದ್ದಾರೆ.