ತಮಿಳು ಚಿತ್ರರಂಗದ ಸ್ಟಾರ್ ನಟ ಧನುಷ್ ವಿರುದ್ಧ ನಟಿ ನಯನತಾರಾ ಪಬ್ಲಿಕ್ ನಲ್ಲೇ ಹರಿಹಾಯ್ದಿದ್ದಾರೆ. ನೆಟ್ಫ್ಲಿಕ್ಸ್ ಸಾಕ್ಷ್ಯಚಿತ್ರ ‘ನಯನತಾರಾ: ಬಿಯಾಂಡ್ ದಿ ಫೇರಿಟೇಲ್’ ವಿವಾದದ ಕುರಿತು ನಯನತಾರಾ ಸೋಷಿಯಲ್ ಮೀಡಿಯಾದಲ್ಲಿ ಸುಧೀರ್ಘ ಪತ್ರ ಬರೆದು ಕಿಡಿಕಾರಿದ್ರ. 3 ಸೆಕೆಂಡ್ ವಿಡಿಯೋಗಾಗಿ ಧನುಷ್ 10 ಕೋಟಿ ಕೇಳಿದ್ರು ಎಂದು ನಟಿ ಆರೋಪಿಸಿದ್ದಾರೆ. ಈ ವಿವಾದ ಭಾರೀ ಸದ್ದು ಮಾಡಿತ್ತು. ಸಾಕ್ಷ್ಯ ಚಿತ್ರದ ವಿವಾದದ ಬಳಿಕ ಒಂದೇ ಕಾರ್ಯಕ್ರಮದಲ್ಲಿ ನಯನತಾರಾ ಹಾಗೂ ನಟ ಧನುಷ್ ಮುಖಾಮುಖಿ ಆಗಿದ್ದಾರೆ.
ನಟಿ ನಯನತಾರಾ, ನಟ ಧನುಷ್ ಮೇಲೆ ಸಾಕಷ್ಟು ಆರೋಪಗಳನ್ನ ಮಾಡಿದ್ರು. ಪುಟ್ಟಗಟ್ಟಲೆ ಬರೆದು ಧನುಷ್ ಮೇಲಿನ ಕೋಪವನ್ನು ಹೊರ ಹಾಕಿದ್ದರು. ಆದ್ರೆ ನಯನತಾರಾ ಆರೋಪಕ್ಕೆ ನಟ ಧನುಷ್ ಯಾವುದೇ ಉತ್ತರ ನೀಡಿಲ್ಲ. ಧನುಷ್ ಪರ ವಕೀಲರು ಕೂಡ ನಟ ಧನುಷ್ ಅವರೇ ಎಲ್ಲದ್ದಕ್ಕೂ ಉತ್ತರ ಕೊಡ್ತಾರೆ ಎಂದ್ರು. ಇದೀಗ ಒಂದೇ ಕಾರ್ಯಕ್ರಮದಲ್ಲಿ ಧನುಷ್, ನಯನತಾರಾ ಕಾಣಿಸಿಕೊಂಡಿದ್ದಾರೆ.
ವಿವಾದದ ಬಳಿಕ ಮೊದಲ ಬಾರಿಗೆ ನಯನತಾರಾ, ಧನುಷ್ ಒಂದೇ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಇಬ್ಬರು ಅಕ್ಕಪಕ್ಕ ಕುಳಿತ್ತಿರುವ ವಿಡಿಯೋ ಇದೀಗ ಸಖತ್ ವೈರಲ್ ಆಗ್ತಿದೆ.
ಧನುಷ್ ಹಾಗೂ ನಯನತಾರಾ ಇಬ್ರು ಒಂದೇ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನುವ ವಿಡಿಯೋ ಇದೀಗ ವೈರಲ್ ಆಗ್ತಿದೆ. ಈ ವಿಡಿಯೋದಲ್ಲಿ ನಟ ಧನುಷ್ ಪಕ್ಕದ ಸೀಟ್ನಲ್ಲಿ ನಯನತಾರಾ ಕುಳಿತ್ತಿದ್ದಾರೆ. ಇಬ್ಬರು ವಿರುದ್ಧ ದಿಕ್ಕಿಗೆ ಮುಖ ಮಾಡಿ ಕುಳಿತ್ತಿದ್ದಾರೆ. ಧನುಷ್ ನೋಡಿಯೂ ನೋಡದಂತೆ ನಯನತಾರಾ ಹೋಗಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ.
ನೆಟ್ಫ್ಲಿಕ್ಸ್ ಸಾಕ್ಷ್ಯಚಿತ್ರ ‘ನಯನತಾರಾ: ಬಿಯಾಂಡ್ ದಿ ಫೇರಿಟೇಲ್’ ನಲ್ಲಿ ‘ನಾನುಮ್ ರೌಡಿ ದಾ ’ ಸಿನಿಮಾದ ಒಂದು ಹಾಡನ್ನು ಬಳಸಲಾಗಿತ್ತು. ಧನುಷ್ ಈ ಚಿತ್ರದ ನಿರ್ಮಾಪಕರಾಗಿದ್ದರು. ಸಾಕ್ಷ್ಯಚಿತ್ರದಲ್ಲಿ ಈ ಹಾಡನ್ನು ಬಳಸಲು ಅನುಮತಿ ನೀಡಲು ನಟ ಧನುಷ್ 10 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದರು ಎಂದು ನಯನತಾರಾ ಆರೋಪಿಸಿದ್ದಾರೆ. ಅಷ್ಟೇ ಅಲ್ಲ, ಈ ಚಿತ್ರವನ್ನು ಬಿಟಿಎಸ್ ಸಾಕ್ಷ್ಯಚಿತ್ರದಲ್ಲಿ ಬಳಸಿದ್ದಕ್ಕಾಗಿ ಲೀಗಲ್ ನೋಟಿಸ್ ಕೂಡ ಕಳುಹಿಸಿದ್ರು ಎಂದು ನಯನತಾರಾ ಪತ್ರದಲ್ಲಿ ಉಲ್ಲೇಖಿಸಿದ್ರು.
ಧನುಷ್ ಅನುಮತಿ ನೀಡದಿದ್ದಾಗ 2015ರಲ್ಲಿ ತೆರೆಕಂಡ ‘ನಾನುಮ್ ರೌಡಿ ದಾ’ ಚಿತ್ರದ ಹಾಡನ್ನು ನೆಟ್ಫ್ಲಿಕ್ಸ್ ಸಾಕ್ಷ್ಯಚಿತ್ರ ‘ನಯನತಾರಾ: ಬಿಯಾಂಡ್ ದಿ ಫೇರಿಟೇಲ್’ ನಲ್ಲಿ ಡಿಲೀಟ್ ಮಾಡಲಾಗಿದೆ ಎಂದು ಪತ್ರದಲ್ಲಿ ಬರೆದಿದ್ರು. ಸುದೀರ್ಘ ಪತ್ರ ಬರೆಯುವ ಮೂಲಕ ನಟಿ ನಯನತಾರಾ ಧನುಷ್ ಮೇಲಿನ ಕೋಪವನ್ನು ಹೊರ ಹಾಕಿದ್ರು.