ಕನ್ನಡದ ಹೆಸರಾಂತ ನಟ ದರ್ಶನ್ (Darshan) ಅವರನ್ನು ಟಾರ್ಗೆಟ್ (Target) ಮಾಡಲಾಗ್ತಿದೆಯಾ? ಇಂಥದ್ದೊಂದು ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ಶುರುವಾಗಿದೆ. ಕಾಟೇರ (Katera) ಸಿನಿಮಾದ ಸಕ್ಸಸ್ ಅನ್ನು ಸಹಿಸಿಕೊಳ್ಳೊಕೆ ಆಗದೇ ಅವರಿಗೆ ತೊಂದರೆ ನೀಡಲಾಗುತ್ತಿದೆ ಎಂದು ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ (RockLine Venkatesh) ಮಾಧ್ಯಮಗಳ ಮುಂದೆ ಹೇಳಿಕೆ ನೀಡುತ್ತಿದ್ದಂತೆಯೇ ದರ್ಶನ್ ಅಭಿಮಾನಿಗಳು ಟಾರ್ಗೆಟ್ ಮಾಡ್ತಿರೋದು ಯಾರು ಎನ್ನುವ ಚರ್ಚೆ ಶುರು ಮಾಡಿದ್ದಾರೆ.
ನಟ ದರ್ಶನ್ ನಟನೆಯ ಕಾಟೇರ ಸಿನಿಮಾದ ಸಕ್ಸಸ್ ಪಾರ್ಟಿ ಒಂಥರಾ ಇಡೀ ಸಿನಿಮಾ ಟೀಂಗೆ ತೊಂದರೆ ತಂದೊಡ್ಡಿತ್ತು. ಬೆಳಗಿನಜಾವದವರೆಗೂ ಪಾರ್ಟಿ ಮಾಡಿದ್ರು ಅಂತಾ ನಟ ದರ್ಶನ್ ಸೇರಿ 8 ಸ್ಟಾರ್ ಗಳಿಗೆ ನೊಟೀಸ್ ನೀಡಿದ್ದ ಪೊಲೀಸರ ಮುಂದೆ ಎಂಟೂ ಸ್ಟಾರ್ ಗಳು ನಿನ್ನೆ ಠಾಣೆಗೆ ಬಂದು ವಿಚಾರಣೆ ಎದುರಿಸಿದ್ರು.
ಜನವರಿ ಮೂರನೇ ತಾರೀಖಿನ ರಾತ್ರಿ ಜೆಟ್ಲಾಗ್ ಪಬ್ ನಲ್ಲಿ ನಲ್ಲಿ ಕಾಟೇರ ಸಿನಿಮಾ ತಂಡ ಸಕ್ಸಸ್ ಪಾರ್ಟಿ ಮಾಡಿತ್ತು. ಸ್ಟಾರ್ಸ್ ಗಳು ಮುಂಜಾನೆ 3-4ಗಂಟೆವರೆಗೂ ಪಬ್ ನಲ್ಲಿದ್ರು ಅನ್ನೋ ವಿಷ್ಯ ಹೊರಗೆ ಬಂದಿತ್ತು. ಮರುದಿನ ದಾಳಿ ಮಾಡಿದ್ದ ಸುಬ್ರಮಣ್ಯ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪಾರ್ಟಿಯಲ್ಲಿದ್ದ ನಟ ದರ್ಶನ್ ಸೇರಿ ಎಂಟು ಸ್ಟಾರ್ ಗಳಿಗೆ ನೊಟೀಸ್ ನೀಡಿದ್ರು.
ನಟ ದರ್ಶನ್, ಡಾಲಿ ಧನಂಜಯ್, ಚಿಕ್ಕಣ್ಣ, ನೀನಾಸಂ ಸತೀಶ್, ಅಭಿಶೇಕ್ ಅಂಬರೀಶ್, ನಿರ್ದೇಶಕ ತರುಣ್ ಸುದೀರ್, ನಿರ್ಮಾಪಕ ರಾಕ್ಲೈನ್ ವೆಂಕಟೇಶ್, ಸಂಗೀತ ನಿರ್ದೇಶಕ ಹರಿಕೃಷ್ಣ ಎಂಟೂ ಜನ ನಿನ್ನೆ ಸಂಜೆ ನಾಲ್ಕು ಗಂಟೆಗೆ ಸುಬ್ರಮಣ್ಯ ನಗರ ಠಾಣೆಗೆ ಹಾಜರಾಗಿದ್ರು. ಸುಮಾರು ಒಂದುಗಂಟೆಗಳ ಕಾಲ ವಿಚಾರಣೆ ಎದುರಿಸಿ ಹೊರ ಬಂದ್ಮೇಲೆ ಮಾತನಾಡಿದ ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ದರ್ಶನ್ ನ ಟಾರ್ಗೆಟ್ ಮಾಡಲಾಗಿದೆ ಅಂದ್ರು. ಯಾರು ಮಾಡ್ತಿದ್ದಾರೆ ಅಂತಾನು ಗೊತ್ತು. ಸಿನಿಮಾ ಸಕ್ಸೆಸ್ ಸಹಿಸಿಕೊಳ್ಳಲಾಗದೆ ಈ ರೀತಿ ಮಾಡ್ತಿದ್ದಾರೆ. ಊಟಕ್ಕೆ ಬಂದವರಿಗೆ ನೋಟಿಸ್ ಕೊಟ್ಟಿದ್ದು ಇದೇ ಮೊದಲು. ಬರೀ ಊಟಕ್ಕೆ ಹೋಗಿದ್ವೆ ಹೊರತು ತಡರಾತ್ರಿ ಪಾರ್ಟಿ ಮಾಡಿಲ್ಲ ಅಂತಾ ಆರೋಪ ತಳ್ಳಿ ಹಾಕಿದ್ರು.