ದೊಡ್ಡಬಳ್ಳಾಪುರ: ಹೊಸಮನೆ ಗೃಹಪ್ರವೇಶದ ವೇಳೆಯೇ ಅವಘಡವೊಂದು ನಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದ ದರ್ಗಾಜೋಗಹಳ್ಳಿಯಲ್ಲಿ ಘಟನೆ ನಡೆದಿದೆ. ಗೃಹ ಪ್ರವೇಶದ ಬಳಿಕ ಸಿಲಿಂಡರ್ ಲೀಕ್ ಆಗಿದ್ದು, ಆರು ಜನಕ್ಕೆ ಗಂಭೀರ ಗಾಯಗಳಾಗಿವೆ.
ಬಾಂಬ್ ಬೆದರಿಕೆ ಸಂದೇಶ ; ಧಾರವಾಡದಲ್ಲಿರುವ ಸಿಬಿಐ ಕೋರ್ಟ್ ನಲ್ಲಿ ತಪಾಸಣೆ
ರವಿಕುಮಾರ್ ಕುಟುಂಬ ಸಮೇತ ಮನೆಯ ಗೃಹಪ್ರವೇಶ ಮಾಡಿದ್ದರು. ಗೃಹಪ್ರವೇಶ ಮುಗಿಸಿಕೊಂಡು ಕುಟುಂಬಸ್ಥರು ರಾತ್ರಿ ಮಲಗಿದ್ದ ವೇಳೆ ಸಿಲಿಂಡರ್ ನಲ್ಲಿ ಅನಿಲ ಸೋರಿಕೆಯಾಗಿ ಬೆಂಕಿ ಕಾಣಿಸಿಕೊಂಡಿದೆ. ಮನೆಯ ತುಂಬಾ ಬೆಂಕಿ ಆವರಿಸಿಕೊಂಡಿದ್ದು, ರವಿಕುಮಾರ್ (41) ಸೇರಿದಂತೆ ವರ್ಷಿತಾ (21), ಅನುಸೂಯ(37) ಭಾಗ್ಯಮ್ಮ(55) ,ಚಿರಂತ್(11) ಮಿಥುನ್(14) ಒಟ್ಟು ಆರು ಜನಕ್ಕೆ ಗಂಭೀರ ಗಾಯಗಳಾಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ಒಂದು ವೇಳೆ ಸಿಲಿಂಡರ್ ಸ್ಫೋಟಗೊಂಡಿದ್ದರೆ, ಜೀವ ಹಾನಿ ಆಗುವ ಸಾಧ್ಯತೆ ಹೆಚ್ಚಾಗಿತ್ತು. ಇನ್ನು ಗಾಯಾಳನ್ನು ಸ್ಥಳೀಯರು ಬೆಂಗಳೂರಿಗೆ ಖಾಸಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಸ್ಥಳಕ್ಕೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.