ಇತ್ತೀಚಿನ ದಿನಗಳಲ್ಲಿ ಮನುಷ್ಯ ಸೇವಿಸುವ ಪ್ರತಿಯೊಂದು ಆಹಾರದಲ್ಲೂ ರಾಸಾಯನಿಕ ಇದ್ದೇ ಇರುತ್ತದೆ. ಆಹಾರ ಪದಾರ್ಥ ತಯಾರು ಮಾಡುವ ಕಂಪನಿಗಳು ಅವುಗಳ ರುಚಿ ಹೆಚ್ಚಿಸಲು ಅಪಾಯಕಾರಿ ಪದಾರ್ಥಗಳನ್ನು ಬಳಸುತ್ತಿರುವುದೇ ಇದಕ್ಕೆ ಮುಖ್ಯ ಕಾರಣ ಎನ್ನಲಾಗುತ್ತಿದೆ.
ಐದನು ಗಮನದಲ್ಲಿಟ್ಟುಕೊಂಡು ಆಹಾರ ಸಂರಕ್ಷಣಾ ಇಲಾಖೆ ಕಲರ್ ಕ್ಯಾಂಡಿ, ಗೋಬಿ ಬ್ಯಾನ್ ಮಾಡಿತ್ತು.. ಈಗ ಇನ್ನೊಂದು ಪದಾರ್ಥದ ಬ್ಯಾನ್ ವಿಚಾರ ಕೇಳಿ ಬರುತ್ತಿದೆ. ಕಾಟನ್ ಕ್ಯಾಂಡಿ, ಗೋಬಿಯ ಬಳಿಕ ಇದೀಗ ಟೀ ಪುಡಿಗಳು ಕೂಡ ಡೇಂಜರ್ ಎನ್ನಲಾಗುತ್ತಿದೆ.
![Demo](https://ainlivenews.com/wp-content/uploads/2023/12/spoorthi-1.jpg)
ಕಾಟನ್ ಕ್ಯಾಂಡಿ, ಗೋಬಿ ಬಳಿಕ ಬ್ರಾಂಡ್ ಟೀ ಪುಡಿಗಳಿಂದಲೂ ಅಪಾಯ ಕಾದಿದೆ ಎಂಬ ಸುದ್ದಿ ಕೇಳಿಬರುತ್ತಿದೆ… ಹುಷಾರ್, ರಸ್ತೆಯಲ್ಲಿ ಕಡಿಮೆ ಬೆಲೆಯಲ್ಲಿ ಸಿಗುತ್ತೆ ಅಂತ ಟೀ ಕುಡಿದ್ರೆ ನಿಮ್ಮ ಪ್ರಾಣಕ್ಕೆ ಕಂಟಕವಾಗಬಹುದು. ಪ್ರತಿಷ್ಠಿತ ಟೀ ಪುಡಿಗಳ ಕಂಪನಿಗಳಿಂದಲೇ ಈ ಅಪಾಯ ಎದುರಾಗಿದೆ.
ಒಂದಲ್ಲ..ಎರಡಲ್ಲ… 10ಕ್ಕೂ ಹೆಚ್ಚು ಕಂಪನಿಗಳ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಖುದ್ದು ಆಹಾರ ಸಂರಕ್ಷಣಾಧಿಕಾರಿ ಶ್ರೀನಿವಾಸ್ ಅವರೇ ಪ್ರತಿಕ್ರಿಯೆ ನೀಡಿದ್ದಾರೆ. ಕೇವಲ ಟೀ ಪುಡಿಯಷ್ಟೇ ಅಲ್ಲ ಸಾಂಬಾರ್ ಪುಡಿಗಳಿಂದಲೂ ಬಾರೀ ಅಪಾಯ ಕಾದಿದೆ ಎಂಬ ಅಂಶವನ್ನೂ ಸಹ ಅವರು ಬಹಿರಂಗಪಡಿಸಿದ್ದಾರೆ.
ಯಾವುದೇ ಒಂದು ಬ್ರಾಂಡ್ ರಿಜಿಸ್ಟರ್ ಆಗುವಾಗ ತಾನು ತಯಾರಿಸುವ ಆಹಾರ ಪದಾರ್ಥಗಳಲ್ಲಿ ಯಾವ ಸಾಮಾಗ್ರಿಗಳನ್ನು ಎಷ್ಟು ಪ್ರಮಾಣದಲ್ಲಿ ಬಳಸಲಾಗುತ್ತದೆ ಎಂಬ ಅಂಶವನ್ನು ಉಲ್ಲೇಖಿಸಿರುತ್ತದೆ. ಈ ಕಂಪನಿಗೆ ಒಪ್ಪಿಗೆ ಸೂಚಿಸುವ ಮೊದಲು ಅಧಿಕಾರಿಗಳು ಈ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಿ ನಂತರ ಒಪ್ಪಿಗೆ ಸೂಚಿಸಿರುತ್ತಾರೆ. ಆದಾಗ್ಯೂ, ತನ್ನ ಬ್ರಾಂಡ್ ಮೂಲವನ್ನು ಉಳಿಸಿಕೊಳ್ಳುವುದು ಎಲ್ಲ ಮಾಲೀಕರ ಕೆಲಸ. ಇದರಲ್ಲಿ ಸ್ವಲ್ಪ ಹೆಚ್ವು ಕಡಿಮೆಯಾದ್ರೂ ಅದು ಕಳಪೆಯಾಗುತ್ತದೆ. ಅದೇನೇ ಇರಲಿ ಅಂತಹ ಅಪಾಯಕಾರಿ ಆಹಾರ ಪದಾರ್ಥಗಳ ಬಳಕೆ ಜನರ ಆರೋಗ್ಯದ ಮೇಲೆ ಹಲವು ರೀತಿಯಲ್ಲಿ ಅಡ್ಡಪರಿಣಾಮ ಬೀರಬಹುದು.
![](https://ainlivenews.com/wp-content/uploads/2024/01/Ad-Banner-copy-scaled.jpg)