ಬೆಂಗಳೂರು:- ಆಪರೇಷನ್ ಕಮಲ ಬಗ್ಗೆ ವಿಪಕ್ಷ ನಾಯಕ ಅಶೋಕ್ ಶಾಕಿಂಗ್ ಹೇಳಿಕೆ ನೀಡಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ನಾವು ಬೇಡ ಅಂದರೂ ಕಾಂಗ್ರೆಸ್ಸಿಗರೇ ಬಹಳಷ್ಟು ಅಸ್ತ್ರ ಕೊಟ್ಟಿದ್ದಾರೆ. ಆಪರೇಷನ್ ಕಮಲದ ಅವಶ್ಯಕತೆ ನಮಗಿಲ್ಲ, ಅವರೇ ಕುಸಿದು ಬಿಳುತ್ತಿದ್ದಾರೆ ಎಂದರು.
ಇನ್ನೂ ಸುವರ್ಣಸೌಧದ ಸಾರ್ವಕರ್ ಫೋಟೋ ತೆಗೆಯುತ್ತೇವೆ ಎಂದಿದ್ದಾರೆ. ಇದು ಸಾರ್ವಕರ್ಗೆ ಮಾಡುತ್ತಿರುವ ಅಪಮಾನ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಕೊಲೆ, ಸುಲಿಗೆ ಜಾಸ್ತಿಯಾಗಿದೆ. ರಾಜ್ಯದಲ್ಲಿ ಟಿಪ್ಪು ಸಂಸ್ಕೃತಿ ಇದೆ ಎಂದು ಕಿಡಿಕಾರಿದರು.