ಬೆಂಗಳೂರು:- ಗುಂಡಿ ಮುಚ್ಚಲು ಟಾಸ್ಕ್ ಫೋರ್ಸ್ ರಚಿಸಿ ಬಿಬಿಎಂಪಿ ಆದೇಶ ಮಾಡಿದೆ. ಅಲ್ಲದೆ ಈಗಿರುವ ರಸ್ತೆ ಗುಂಡಿಗಳನ್ನು ಸಿಎಂ ಸಿದ್ದರಾಮಯ್ಯ ಸೂಚಿಸಿರುವಂತೆ ಮೇ 31ರ ಒಳಗಾಗಿ ಮುಚ್ಚಲು ಗಡುವು ನೀಡಲಾಗಿದೆ. ಆದರೆ ದಾಸರಹಳ್ಳಿ ಹಾಗೂ ಆರ್ ಆರ್ ನಗರ ವಲಯಕ್ಕೆ ಜೂನ್ 4ರ ವರೆಗೆ ಗಡುವು ನೀಡಲಾಗಿದೆ.
ತಿರುಮಲ ಭಕ್ತಾದಿಗಳೇ ನೀವು ನೋಡಲೇಬೇಕಾದ ಸುದ್ದಿ.. ಈ ತಪ್ಪು ಮಾಡಿದ್ರೆ ಟಿಕೆಟ್ ಇದ್ರೂ ಸಿಗಲ್ಲ ದರ್ಶನ!
ಮೊನ್ನೆ ಮೊನ್ನೆಯಷ್ಟೇ ಮಳೆ ಸಿದ್ದತೆ ಪರಿಶೀಲನೆಗೆ ಸಿಟಿ ರೌಂಡ್ಸ್ ಮಾಡಿದ್ದ ಸಿಎಂ ಸಿದ್ದರಾಮಯ್ಯರಿಗೆ ಬೆಂಗಳೂರಿನ ರಸ್ತೆಗಳ ಅಸಲಿ ದರ್ಶನವಾಗಿದೆ. ಬಿಎಂಟಿಸಿ ಬಸ್ನಲ್ಲಿ ಪ್ರದಕ್ಷಿಣೆ ಮಾಡಿದ್ದ ಸಿಎಂ ರಸ್ತೆ ಗುಂಡಿಗಳಿಂದ ಬಸ್ನಲ್ಲಿ ನಲುಗಿ ಹೋಗಿದ್ದರು. ಈ ಬೆನ್ನಲ್ಲೇ ಬೆಂಗಳೂರಿನ ರಸ್ತೆ ಗುಂಡಿ ಮುಚ್ಚಲು ಸಿಎಂ ಸೂಚಿಸಿದ್ದರು. ಇದೀಗ ಎಚ್ಚೆತ್ತ ಬಿಬಿಎಂಪಿ ರಸ್ತೆ ಗುಂಡಿ ಮುಚ್ಚಲು ವಲಯವಾರು ಟಾಸ್ಕ್ ಫೋರ್ಸ್ ಸಮಿತಿ ರಚಿಸಿ ಆದೇಶಿಸಿದೆ.
ಗುಂಡಿ’ ಟಾಸ್ಕ್ ಫೋರ್ಸ್ !!
* ಬೆಂಗಳೂರು ರಸ್ತೆಗುಂಡಿ ಮುಚ್ಚಲು ಟಾಸ್ಕ್ ಫೋರ್ಸ್
* ಎಂಟು ವಲಯಕ್ಕೆ ಎಂಟು ಟಾಸ್ಕ್ ಫೋರ್ಸ್ ರಚನೆ
* ಪ್ರತಿ ವಲಯಕ್ಕೆ ವಲಯಾಯುಕ್ತರು ಟಾಸ್ಕ್ ಫೋರ್ಸ್ ಹೆಡ್
* ಟಾಸ್ಕ್ ಫೋರ್ಸ್ನಲ್ಲಿ ಒಟ್ಟು ಏಳು ಮಂದಿ ಅಧಿಕಾರಿಗಳು
* ರಸ್ತೆಗುಂಡಿ ನಿರ್ವಹಣೆ ಹಾಗೂ ಮುಚ್ಚುವ ಸಂಪೂರ್ಣ ಜವಾಬ್ದಾರಿ ಟಾಸ್ಕ್ ಫೋರ್ಸ್ನದ್ದು
ಬಿಬಿಎಂಪಿ ವ್ಯಾಪ್ತಿಯಲ್ಲಿ ಸುಮಾರು 12,878 KM ಉದ್ದದ ರಸ್ತೆ ಜಾಲವಿದೆ. ಈ ಪೈಕಿ 1344 KM ಉದ್ದದ ಆರ್ಟಿರಿಯಲ್ ಹಾಗೂ ಸಬ್ ಆರ್ಟಿರಿಯಲ್ ರಸ್ತೆಗಳಿವೆ. ಇದರಲ್ಲಿ 5,500ಕ್ಕೂ ಅಧಿಕ ಗುಂಡಿಗಳು ವಾರ್ಡ್ ರಸ್ತೆಗಳಲ್ಲಿ ಗುಂಡಿ ಬಿದ್ದಿವೆ. ಆರ್ಟಿರಿಯಲ್ ರಸ್ತೆಯಲ್ಲಿ 557 ಗುಂಡಿಗಳು ಬಿದ್ದಿದ್ದೆ ಎಂದು ಇತ್ತೀಚೆಗೆ ಮಾಹಿತಿ ಬಿಡುಗಡೆ ಮಾಡಿತ್ತು. ಇದೀಗ ರಸ್ತೆಗುಂಡಿ ಮುಚ್ಚಲು ಟಾಸ್ಕ್ ಫೋರ್ಸ್ ರಚಿಸಲಾಗಿದೆ.