ಜೈಲಿಂದ ರಿಲೀಸ್ ಆದ ಬಳಿಕ ಜ್ಯೂಸ್ ಕುಡಿದು ಸೋನು ಕೂಲ್ ಕೂಲ್ ಆಗಿದ್ದಾರೆ. ಸೋನು ಶ್ರೀನಿವಾಸ್ ಗೌಡ ಅವರು, 11 ದಿನಗಳ ಕಾಲ ಜೈಲು ವಾಸದ ನಂತರ ಏ.6ರಂದು ರಿಲೀಸ್ ಆಗಿದ್ದಾರೆ.
ಜೈಲಿನಿಂದ ಮುಕ್ತಿ ಸಿಗುತ್ತಿದ್ದಂತೆ ಸೋನು ಶ್ರೀನಿವಾಸ್ ಗೌಡ ಅವರು ಕಾರಿನಲ್ಲಿ ಕುಳಿತು ಕೂಲ್ ಆಗಿ ಜ್ಯೂಸ್ ಕುಡಿದು ಕ್ಯಾಮೆರಾ ಕಣ್ಣಿಗೆ ಮುಗುಳು ನಗೆ ಬೀರಿದ್ದಾರೆ
ವರುಣದೇವ ಯಾಕಿಷ್ಟು ಕೋಪ! – ಬಿಸಿಲಿನ ತಾಪಕ್ಕೆ ಮೂಕ ಪ್ರಾಣಿಗಳ ಗೋಳಾಟ ದೇವರಿಗೆ ಪ್ರೀತಿ!
ಪರಪ್ಪನ ಅಗ್ರಹಾರದಿಂದ ರಿಲೀಸ್ ಆದ್ಮೇಲೆ ಈ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡೋಕೆ ಸೋನು ನಿರಾಕರಿಸಿದ್ದರು. ಆದರೆ ಅವರ ಲಾಯರ್ ಸೂಚನೆಯ ಮೇರೆಗೆ ಸೋನು ಯಾವುದೇ ರಿಯಾಕ್ಷನ್ ನೀಡಿರಲಿಲ್ಲ. ಆದರೆ ಈ ಪ್ರಕರಣದ ಇನ್ನೂ ತನಿಖೆ ನಡೆಯುತ್ತಿದೆ.
ಅಕ್ರಮವಾಗಿ ಮಗು ದತ್ತು ಪಡೆದ ಪ್ರಕರಣದಲ್ಲಿ ಸೋನು ಮೊದಲ ಪ್ರತಿಕ್ರಿಯೆ ಮುಂದಿನ ನಡೆ ಏನು ಎಂಬುದರ ಬಗ್ಗೆ ಫ್ಯಾನ್ಸ್ಗೆ ಕುತೂಹಲ ಮೂಡಿಸಿದೆ. ಸದಾ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಇರುವ ನಟಿ ಈಗ ಸಿಕ್ಕಾಪಟ್ಟೆ ಸೈಲೆಂಟ್ ಆಗಿದ್ದರು. ವಿವಾದದಿಂದ ಸೋನು ಮೌನಕ್ಕೆ ಶರಣಾಗಿದ್ದರು. ಇದೀಗ ಮತ್ತೆ ಲವಲವಿಕೆಯಿಂದ ಕ್ಯಾಮೆರಾಗೆ ಪೋಸ್ ಕೊಟ್ಟು ಜ್ಯೂಸ್ ಕುಡುಯುತ್ತಿರುವ ಫೋಟೋ ಶೇರ್ ಮಾಡಿದ್ದಾರೆ