ತೆಲುಗಿನ ಖ್ಯಾತ ನಟ ಪ್ರಭಾಸ್ ಮೊಣಕಾಲು ನೋವಿನಿಂದ ಬಳಲುತ್ತಿದ್ದರು. ಶಸ್ತ್ರ ಚಿಕಿತ್ಸೆಗಾಗಿ ಅವರು ಇಟಲಿಗೆ (Italy) ಹಾರಿದ್ದರು. ಇದೀಗ ಯಶಸ್ವಿ ಶಸ್ತ್ರ ಚಿಕಿತ್ಸೆ (Surgery) ನೆರವೇರಿದ್ದು, ಚಿಕಿತ್ಸೆ ನಂತರ ಹೈದರಾಬಾದ್ (Hyderabad) ಗೆ ವಾಪಸ್ಸು ಆಗಿದ್ದಾರೆ. ಆತಂಕದಲ್ಲಿದ್ದ ಅವರ ಅಭಿಮಾನಿಗಳು ನೆಚ್ಚಿನ ನಟ ಕಂಡು ಸಂಭ್ರಮಿಸಿದ್ದಾರೆ.
ಸಲಾರ್ (Salaar) ಸಿನಿಮಾದ ರಿಲೀಸ್ ಗೆ ದೊಡ್ಡಮಟ್ಟದಲ್ಲೇ ಪ್ಲ್ಯಾನ್ ಮಾಡಲಾಗುತ್ತಿದೆ. ಕನ್ನಡ, ತಮಿಳು, ತೆಲುಗು, ಹಿಂದಿ, ಮಲಯಾಳಂ ಹೀಗೆ ನಾನಾ ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆ ಆಗುತ್ತಿದ್ದು, ಮಲಯಾಳಂ ಭಾಷೆಯ ಸಲಾರ್ ಸಿನಿಮಾಗೆ ಪೃಥ್ವಿರಾಜ್ (Prithviraj Sukumaran) ಸಾಥ್ ನೀಡುತ್ತಿದ್ದಾರೆ. ಸಿನಿಮಾದ ಪೋಸ್ಟರ್ ವೊಂದನ್ನು ಅವರು ರಿಲೀಸ್ ಮಾಡಿದ್ದಾರೆ.
![Demo](https://ainlivenews.com/wp-content/uploads/2023/12/spoorthi-1.jpg)
ಭಾರತೀಯ ಸಿನಿಮಾ ರಂಗ ಡಿಸೆಂಬರ್ ನಲ್ಲಿ ಮೆಗಾ ಕಾಳಗಕ್ಕೆ ಸಾಕ್ಷಿಯಾಗಲಿದೆ. ಚಿತ್ರೋದ್ಯಮದ ಮೂವರು ಭಾರೀ ಬಜೆಟ್ ಚಿತ್ರಗಳು ಬಿಡುಗಡೆ ಆಗುತ್ತಿವೆ. ತೆಲುಗಿನ ಪ್ರಭಾಸ್, ಬಾಲಿವುಡ್ ಶಾರುಖ್ ಖಾನ್ ಮತ್ತು ಮಲಯಾಳಂ ಸಿನಿಮಾ ರಂಗದ ದಿಗ್ಗಜ ಮೋಹನ್ ಲಾಲ್ (Mohanlal) ನಟನೆಯ ಚಿತ್ರಗಳು ಒಂದೇ ದಿನದಲ್ಲಿ ರಿಲೀಸ್ ಆಗುವ ಮೂಲಕ ಭರ್ಜರಿ ಪೈಪೋಟಿ ನೀಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಮೋಹನ್ ಲಾಲ್ ನಟನೆಯ ನೆರು ಸಿನಿಮಾ ಡಿಸೆಂಬರ್ 21ಕ್ಕೆ ಬಿಡುಗಡೆ ಆಗುತ್ತಿದೆ.
![](https://ainlivenews.com/wp-content/uploads/2024/01/Ad-Banner-copy-scaled.jpg)