14 ತಿಂಗಳ ಬಳಿಕ ಕೊನೆಗೂ ಇಸ್ರೇಲ್ ಮತ್ತು ಲೆಬನಾನ್ನ ಹಿಜ್ಬುಲ್ಲಾ ಉಗ್ರಗಾಮಿ ಸಂಘಟನೆ ನಡುವಿನ ಕದನ ವಿರಾಮವು ಘೋಷಣೆಯಾಗಿದೆ. ಇಂದು ಮುಂಜಾನೆಯಿಂದಲೇ ಕದನ ವಿರಾಮ
ಇಂದು ಮುಂಜಾನೆಯಿಂದಲೇ ಆರಂಭವಾಗಿದೆ. ಕದನ ವಿರಾಮವು ಇಸ್ರೇಲ್ ಮತ್ತು ಹಮಾಸ್ ನಡುವೆ ಗಾಜಾದಲ್ಲಿ 14 ತಿಂಗಳುಗಳಿಂದ ನಡೆಯುತ್ತಿರುವ ಯುದ್ಧವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಾಗಿದೆ.
ಹಿಜ್ಬುಲ್ಲಾ ಕದನ ವಿರಾಮ ಒಪ್ಪಂದವನ್ನು ಮುರಿದರೆ ದಾಳಿ ನಡೆಸುವುದಾಗಿ ಇಸ್ರೇಲ್ ಹೇಳಿದೆ. ಆರಂಭದಲ್ಲಿ ಎರಡು ತಿಂಗಳ ಕದನ ವಿರಾಮ ಘೋಷಿಸಲಾಗುತ್ತದೆ. ದಕ್ಷಿಣ ಲೆಬನಾನ್ನಲ್ಲಿ ಹಿಜ್ಬುಲ್ಲಾ ತನ್ನ ಸಶಸ್ತ್ರ ಪಡೆಗಳನ್ನು ಕೊನೆಗೊಳಿಸಬೇಕು, ಇಸ್ರೇಲಿ ಪಡೆಗಳು ತಮ್ಮ ಗಡಿಯ ಕಡೆಗೆ ಹಿಂತಿರುಗಬೇಕು. ಯುನೈಟೆಡ್ ಸ್ಟೇಟ್ಸ್ ನೇತೃತ್ವದ ಅಂತರರಾಷ್ಟ್ರೀಯ ಸಮಿತಿಯು ಅನುಸರಣೆಯನ್ನು ಮೇಲ್ವಿಚಾರಣೆ ಮಾಡುತ್ತದೆ.
ಕದನ ವಿರಾಮವು ಇಂದು ನಸುಕಿನ ಜಾವ 4 ಗಂಟೆಗೆ ಆರಂಭವಾಗಿದೆ. ಇತ್ತೀಚಿನ ವಾರಗಳಲ್ಲಿ ಸಂಪೂರ್ಣ ಯುದ್ಧವಾಗಿ ಮಾರ್ಪಟ್ಟ ಸಂಘರ್ಷದ ಪ್ರಾರಂಭದಿಂದಲೂ ಇಸ್ರೇಲ್ ಬೈರುತ್ನಲ್ಲಿ ತನ್ನ ಅತ್ಯಂತ ತೀವ್ರವಾದ ವೈಮಾನಿಕ ದಾಳಿಯನ್ನು ನಿನ್ನೆ ನಡೆಸಿದ್ದು ಅದರಲ್ಲಿ ಕನಿಷ್ಠ 42 ಜನರು ಮೃತಪಟ್ಟಿದ್ದಾರೆ.
ಕದನ ವಿರಾಮವು ಗಾಜಾದಲ್ಲಿನ ವಿನಾಶಕಾರಿ ಯುದ್ಧವನ್ನು ಪರಿಹರಿಸುವುದಿಲ್ಲ, ಅಲ್ಲಿ ಹಮಾಸ್ ಇನ್ನೂ ಡಜನ್ ಗಟ್ಟಲೆ ಒತ್ತೆಯಾಳುಗಳನ್ನು ಹಿಡಿದಿಟ್ಟುಕೊಂಡಿದೆ.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮಂಡಿಸಿದ ನಂತರ ಇಸ್ರೇಲ್ನ ಭದ್ರತಾ ಕ್ಯಾಬಿನೆಟ್ ಯುಎಸ್-ಫ್ರಾನ್ಸ್ ಮಧ್ಯಸ್ಥಿಕೆಯ ಕದನ ವಿರಾಮ ಒಪ್ಪಂದವನ್ನು ಅನುಮೋದಿಸಿತು ಎಂದು ಅವರ ಕಚೇರಿ ತಿಳಿಸಿದೆ. ಯುಎಸ್ ಅಧ್ಯಕ್ಷ ಜೋ ಬೈಡನ್ ವಾಷಿಂಗ್ಟನ್ನಲ್ಲಿ ಮಾತನಾಡುತ್ತಾ, ಒಪ್ಪಂದವನ್ನು ಶುಭ ಸುದ್ಧಿ ಎಂದಿದ್ದಾರೆ.