T20 ಕ್ರಿಕೆಟ್ ನಲ್ಲಿ 600 ವಿಕೆಟ್ ಕಬಳಿಸುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ ಅಪ್ಘಾನಿಸ್ತಾನ್ ಸ್ಪಿನ್ನರ್ ರಶೀದ್ ಖಾನ್ ವಿಶ್ವ ದಾಖಲೆ ಬರೆದಿದ್ದಾರೆ.
Pralhad Joshi: ವಯನಾಡ್ ದುರಂತ ಪರಿಸ್ಥಿತಿ ನಿರ್ವಹಿಸಲು ಕೇಂದ್ರ ಸರ್ಕಾರ ಸಜ್ಜಾಗಿದೆ: ಜೋಶಿ
ಹಾಗೆಯೇ ಟಿ20 ಕ್ರಿಕೆಟ್ನಲ್ಲಿ ಅತೀ ವೇಗವಾಗಿ 600 ವಿಕೆಟ್ ಕಬಳಿಸಿದ ಬೌಲರ್ ಎಂಬ ವಿಶ್ವ ದಾಖಲೆಯನ್ನೂ ಸಹ ತಮ್ಮದಾಗಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ವೆಸ್ಟ್ ಇಂಡೀಸ್ನ ಡ್ವೇನ್ ಬ್ರಾವೊ ಹೆಸರಿನಲ್ಲಿತ್ತು.
ವೆಸ್ಟ್ ಇಂಡೀಸ್, ಐಪಿಎಲ್, ಸಿಪಿಎಲ್, ಬಿಗ್ ಬ್ಯಾಷ್ ಲೀಗ್, ಪಿಎಸ್ಎಲ್ ಸೇರಿದಂತೆ ಹಲವು ಲೀಗ್ಗಳನ್ನು ಆಡಿರುವ ಡ್ವೇನ್ ಬ್ರಾವೊ 545 ಟಿ20 ಪಂದ್ಯಗಳ ಮೂಲಕ 600 ವಿಕೆಟ್ಗಳನ್ನು ಕಬಳಿಸಿದ್ದರು. ಇದೀಗ ಈ ದಾಖಲೆಯನ್ನು ಮುರಿಯುವಲ್ಲಿ ರಶೀದ್ ಖಾನ್ ಯಶಸ್ವಿಯಾಗಿದ್ದಾರೆ
ಐಪಿಎಲ್, ಸಿಪಿಎಲ್, ಬಿಗ್ ಬ್ಯಾಷ್, ಪಿಎಸ್ಎಲ್ ಸೇರಿದಂತೆ ವಿಶ್ವದ ಪ್ರಮುಖ ಲೀಗ್ಗಳಲ್ಲಿ ಕಣಕ್ಕಿಳಿದಿರುವ ಅಫ್ಘಾನಿಸ್ತಾನ್ ಸ್ಪಿನ್ನರ್ ಕೇವಲ 441 ಟಿ20 ಪಂದ್ಯಗಳ ಮೂಲಕ 600 ವಿಕೆಟ್ಗಳ ಸಾಧನೆ ಮಾಡಿದ್ದಾರೆ. ಈ ಮೂಲಕ ಬ್ರಾವೊ ಹೆಸರಿನಲ್ಲಿದ್ದ ವಿಶ್ವ ದಾಖಲೆಯನ್ನು ಅಳಿಸಿ ಹಾಕಿದ್ದಾರೆ.
ಇದೀಗ ಟಿ20 ವಿಕೆಟ್ ಸರದಾರರ ಪಟ್ಟಿಯಲ್ಲಿ 543 ಇನಿಂಗ್ಸ್ಗಳಲ್ಲಿ 630 ವಿಕೆಟ್ ಕಬಳಿಸಿರುವ ಡ್ವೇನ್ ಬ್ರಾವೊ ಅಗ್ರಸ್ಥಾನದಲ್ಲಿದ್ದರೆ, ರಶೀದ್ ಖಾನ್ ದ್ವಿತೀಯ ಸ್ಥಾನದಲ್ಲಿದ್ದಾರೆ.