ಬೆಂಗಳೂರು : ಕಾಂಗ್ರೆಸ್ʼನವರು ಜಾಹೀರಾತು ನೀಡುತ್ತಿರುವುದರಿಂದ ಮಾಧ್ಯಮಗಳ ಸಹಕಾರ ಸಿಗುತ್ತಿದೆ ಎಂದು ತಿಳಿದುಕೊಂಡಿದ್ದಾರೆ ಹಾಗಾಗಿ ಭ್ರಷ್ಟಾಚಾರದಲ್ಲಿ ನಾವೇ ನಂಬರ್ 1 ಅಂತ ಜಾಹೀರಾತು ಕೊಡಿ ಎಂದು ಕಾಂಗ್ರೆಸ್ ನಾಯಕರಿಗೆ ಸಿ.ಟಿ. ರವಿ ಕುಟುಕಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಜಾಹೀರಾತು ನೀಡುತ್ತಿರುವುದರಿಂದ ಮಾಧ್ಯಮಗಳ ಸಹಕಾರ ಸಿಗುತ್ತಿದೆ. ಐದನೇ ಗ್ಯಾರಂಟಿ ಯುವನಿಧಿ ಕೊಡುತ್ತಿದ್ದೀರಿ ಅಷ್ಟೇ ಎಂದು ಹೇಳಿದ್ದಾರೆ.
ಯುವನಿಧಿ ಎಲ್ಲಾ ನಿರುದ್ಯೋಗಿಗಳಿಗಲ್ಲ. ನುಡಿದಂತೆ ನಡೆದಿದ್ದೇವೆ ಅನ್ನೋದು ಈಡೇರಿಲ್ಲ. ಸ್ಟಾಂಪ್ ಡ್ಯೂಟಿ, ಅಬಕಾರಿ ತೆರಿಗೆ, ಪೆಟ್ರೋಲ್, ಡೀಸೆಲ್ ಮೇಲೆ ಏರಿಕೆಯಾಗಿದೆ. ಇನ್ನು ವಿದ್ಯುತ್ ಬಿಲ್ ಏರಿಕೆ ಮಾಡಿದ್ದು 7ನೇ ಗ್ಯಾರಂಟಿ ಎಂದು ಚಾಟಿ ಬೀಸಿದ್ದಾರೆ.
ನೀವು ಜಾತಿ ಜಾತಿಗಳ ನಡುವೆ ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದೀರಿ. ಇದು 9ನೇ ಗ್ಯಾರಂಟಿಯಾಗಿದೆ. ಮಾಲೂರು ಶಾಸಕ ಹರಾಜು ಹಾಕಿ 30 ಲಕ್ಷಕ್ಕೆ ಹುದ್ದೆ ಮಾರಿದ್ದಾರೆ, ಇದು 10ನೇ ಗ್ಯಾರಂಟಿ. ವರ್ಗಾವಣೆ ಭಾಗ್ಯ 11ನೇ ಗ್ಯಾರಂಟಿ ಎಂದು ಸಿ.ಟಿ. ರವಿ ಲೇವಡಿ ಮಾಡಿದ್ದಾರೆ.