ಬಾಲಿವುಡ್ ಬ್ಯೂಟಿ ಅನನ್ಯಾ ಪಾಂಡೆ ಹಾಗೂ ನಟ ಆದಿತ್ಯ ರಾಯ್ ಕಪೂರ್ ಡೇಟಿಂಗ್ ಮಾಡುತ್ತಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಹೋದಲ್ಲಿ ಬಂದಲೆಲ್ಲಾ ಕೈ ಕೈ ಹಿಡಿದು ಸುತ್ತಾಡ್ತಿದ್ದ ಜೋಡಿ ಇದೀಗ ಬ್ರೇಕ್ ಅಪ್ ಮಾಡಿಕೊಂಡಿದೆ. ಈ ಬೆನ್ನಲ್ಲೇ ಆದಿತ್ಯ ನಟಿ ಸಾರಾ ಅಲಿ ಖಾನ್ ಜೊತೆ ಡೇಟಿಂಗ್ ಮಾಡ್ತಿದ್ದಾರೆ ಎಂಬ ಸುದ್ದಿ ಕೇಳಿ ಬರ್ತಿದೆ.
ಆದಿತ್ಯ ರಾಯ್ ಕಪೂರ್ ಅವರು ಸಾರಾ ಅಲಿ ಖಾನ್ (Sara Ali Khan) ಅವರೊಂದಿಗೆ ಪಾರ್ಟಿಯೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಈ ಪಾರ್ಟಿಯ ಹಲವು ಫೋಟೊಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ವೈರಲ್ ಆದ ಫೋಟೋದಲ್ಲಿ ಆದಿತ್ಯ ಮತ್ತು ಸಾರಾ ಅವರು ನಿರ್ಮಾಪಕ ಅನುರಾಗ್ ಬಸು ಅವರೊಂದಿಗೆ ಸಮಯವನ್ನು ಕಳೆಯುತ್ತಿರುವುದು ಕಾಣಬಹುದು. ‘ಮೆಟ್ರೋ ಇನ್ ಡಿನೋ’ ಸಿನಿಮಾ ಸೆಟ್ನಲ್ಲಿ ಆಯೋಜಿಸಲಾದ ನಿರ್ದೇಶಕರ ಹುಟ್ಟುಹಬ್ಬದ ಸಂದರ್ಭದ ಫೋಟೋಗಳಿವು ಎನ್ನಲಾಗುತ್ತಿದೆ. ಆದಿತ್ಯ ಮತ್ತು ಸಾರಾ ಚಿತ್ರಗಳಲ್ಲಿ ಪರಸ್ಪರ ಹತ್ತಿರವಾಗಿ ನಿಂತಿದ್ದಾರೆ.
2022ರಲ್ಲಿ ಅನನ್ಯಾ ಮತ್ತು ಆದಿತ್ಯ ಪ್ರೀತಿಯಲ್ಲಿದ್ದಾರೆ ಎಂಬ ಸುದ್ದಿ ಕೇಳಿ ಬಂದಿತ್ತು. ಕೃತಿ ಸನೂನ್ ಅವರ ದೀಪಾವಳಿ ಪಾರ್ಟಿಯಲ್ಲಿ ಜೋಡಿ ಕಾಣಿಸಿಕೊಂಡಾಗ ವದಂತಿ ಸುದ್ದಿಗಳು ಮತ್ತಷ್ಟು ಹೆಚ್ಚಾಯ್ತು. ಅಂಬಾನಿ ಮನೆ ಮಗನ ವಿವಾಹ ಪೂರ್ವ ಕಾರ್ಯಕ್ರಮದಲ್ಲಿಯೂ ಇಬ್ಬರೂ ಜೊತೆಯಾಗಿ ಕಾಣಿಸಿಕೊಂಡಿದ್ದರು. ಇದೀಗ ಇಬ್ಬರ ಮಧ್ಯೆ ಬ್ರೇಕ್ ಅಪ್ ಆಗಿದ್ದು ಮತ್ತೋರ್ವ ನಟಿಯ ಜೊತೆ ಆದಿತ್ಯಾ ಡೇಟಿಂಗ್ ಶುರುಮಾಡಿದ್ದಾರೆ.