ಸ್ಯಾಂಡಲ್ವುಡ್ ನಟಿ ಅದಿತಿ ಪ್ರಭುದೇವ ಯುಗಾದಿ ಹಬ್ಬದಂದು ಗುಡ್ ನ್ಯೂಸ್ ನೀಡಿದ್ದಾರೆ. ನಟಿ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಏ.4ರಂದು ನಟಿ ಅದಿತಿ ಪ್ರಭುದೇವ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಯುಗಾದಿ ಹಬ್ಬದಂದು ಮಗಳ ಆಗಮನದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದಾರೆ. ಅದಿತಿ ಸಂತಸದ ಸುದ್ದಿ ಹೇಳುತ್ತಿದ್ದಂತೆ ಪತಿ ಯಶಸ್ ಕೂಡ ರಿಪ್ಲೈ ಮಾಡಿದ್ದಾರೆ. ನನ್ನ ಜೀವದ ಗೆಳತಿ ಅದಿತಿ, ನಿನ್ನ ಹಾಗೆಯೇ ನಮ್ಮ ಮಗಳು ಎಂದು ಕಾಮೆಂಟ್ ಮಾಡಿದ್ದಾರೆ.
ಅದಿತಿ ಪ್ರಭುದೇವ ಅವರು ಚಿತ್ರರಂಗಕ್ಕೆ ಕಾಲಿಟ್ಟು ಕೆಲವು ವರ್ಷಗಳು ಕಳೆದಿವೆ. 2017ರಲ್ಲಿ ಬಂದ ‘ಧೈರ್ಯ’ ಅವರು ನಟಿಸಿದ ಮೊದಲ ಸಿನಿಮಾ. ಆ ಬಳಿಕ ಸಾಲು ಸಾಲು ಸಿನಿಮಾಗಳಲ್ಲಿ ಅವರು ನಟಿಸಿದರು. ಸ್ಟಾರ್ ನಟಿಯಾಗಿ ಮಿಂಚುವಾಗಲೇ ಯಶಸ್ ಜೊತೆ ಹಸೆಮಣೆ ಏರಿದ ನಟಿ ಇದೀಗ ಮುದ್ದಾದ ಮಗುವಿನ ತಾಯಿಯಾಗಿದ್ದಾರೆ.