ವಾಷಿಂಗ್ಟನ್: ಅದಾನಿ ಗ್ರೂಪ್ ವಿರುದ್ಧ ಲಂಚದ ತನಿಖೆಯನ್ನು ಪ್ರಾರಂಭಿಸಲು ಬಳಸಲಾಗುತ್ತಿದ್ದ ಹಳೆಯ ಕಾನೂನನ್ನು ಜಾರಿಗೊಳಿಸುವುದನ್ನು ತಡೆ ನೀಡುವ ಆದೇಶಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿ ಹಾಕಿದ್ದಾರೆ.
1977 ರ ವಿದೇಶಿ ಭ್ರಷ್ಟಾಚಾರ ಪರಿಪಾಲನಾ ಕಾಯ್ದೆ (ಎಫ್ಸಿಪಿಎ) ಜಾರಿಗೊಳಿಸುವುದನ್ನು ವಿರಾಮಗೊಳಿಸುವ ಆದೇಶಕ್ಕೆ ಟ್ರಂಪ್ ಸಹಿ ಹಾಕಿದ್ದು, ಈ ಕಾನೂನು ಇದು ಅಮೆರಿಕದ ಕಂಪನಿಗಳು ಮತ್ತು ವಿದೇಶಿ ಸಂಸ್ಥೆಗಳು ವ್ಯವಹಾರವನ್ನು ಪಡೆಯಲು ಅಥವಾ ಉಳಿಸಿಕೊಳ್ಳಲು ವಿದೇಶಿ ಸರ್ಕಾರಗಳ ಅಧಿಕಾರಿಗಳಿಗೆ ಲಂಚ ನೀಡುವುದನ್ನು ನಿಷೇಧಿಸುತ್ತದೆ.
ಅದಾನಿ ಗ್ರೂಪ್ ಮುಖ್ಯಸ್ಥ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ವಿರುದ್ಧದ ದೋಷಾರೋಪಣೆ ಸೇರಿದಂತೆ ಯುಎಸ್ ನ್ಯಾಯ ಇಲಾಖೆಯ ಕೆಲವು ಉನ್ನತ ಪ್ರಕರಣಗಳಲ್ಲಿ ಎಫ್ಸಿಪಿಎ ಜಾರಿಗೊಳಿಸುವಿಕೆಯನ್ನು ವಿರಾಮಗೊಳಿಸುವಂತೆ ಟ್ರಂಪ್ ಯುಎಸ್ ಅಟಾರ್ನಿ ಜನರಲ್ ಪ್ಯಾಮ್ ಬೋಂಡಿಗೆ ನಿರ್ದೇಶನ ನೀಡಿದ್ದಾರೆ.
ಸೌರಶಕ್ತಿ ಒಪ್ಪಂದಗಳಿಗೆ ಬೇಕಾದ ಅನುಕೂಲಕರ ನಿಯಮಗಳಿಗೆ ಬದಲಾಗಿ ಭಾರತೀಯ ಅಧಿಕಾರಿಗಳಿಗೆ 250 ಮಿಲಿಯನ್ ಯುಎಸ್ ಡಾಲರ್ (ಸುಮಾರು ರೂ 2,100 ಕೋಟಿ) ಲಂಚವನ್ನು ಅದಾನಿ ನೀಡಿದ್ದಾರೆ ಎಂಬ ಆರೋಪ ಅದಾನಿ ಗ್ರೂಪ್ ಮೇಲೆ ಕೇಳಿ ಬಂದಿತ್ತು.