ಬಾಲಿವುಡ್ ನ ಖ್ಯಾತ ನಟ ಸುಶಾಂತ್ ಸಿಂಗ್ ರಜಪೂರ್ ಆತ್ಮಹತ್ಯೆ ಮಾಡಿಕೊಂಡಿದ್ದ ಮನೆಯನ್ನೇ ನಟಿ ನಟಿ ಅದಾ ಶರ್ಮಾ ಖರೀದಿಸಿದ್ದಾರೆ. ಈ ಮೂಲಕ ನೀವು ನನ್ನ ಹೃದಯದಲ್ಲಿ ಎಂದೆಂದಿಗೂ ಇದ್ದೀರಿ ಎನ್ನುವ ಸಂದೇಶವನ್ನು ನಟಿ ನೀಡಿದ್ದಾರೆ.
ಮುಂಬೈನ ಮೋಂಟ್ ಬ್ಲ್ಯಾಂಕ್ ಅಪಾರ್ಟ್ ಮೆಂಟ್ ನಲ್ಲಿ ವಾಸವಿದ್ದ ಸುಶಾಂತ್ ಸಿಂಗ್ 2020 ಜೂನ್ 14ರಂದು ಅದೇ ಅಪಾರ್ಟ್ ಮೆಂಟ್ ನ ರೂಮ್ ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಆ ಬಳಿಕ ಆ ಫ್ಲ್ಯಾಟ್ ಖಾಲಿಯೇ ಉಳಿದಿತ್ತು. ಸುಶಾಂತ್ ಸಿಂಗ್ ಆತ್ಮ ಅಲ್ಲಿದೆ ಎಂದೂ ಸುದ್ದಿ ಹಬ್ಬಿಸಲಾಗಿತ್ತು.
ಮುಂಬೈನ ಆ ಫ್ಲ್ಯಾಟ್ ನಾಲ್ಕು ಕೋಣೆಗಳನ್ನು ಹೊಂದಿದ್ದು, ಒಟ್ಟು 2500 ಸ್ಕ್ವೇರ್ ಫೀಟ್ ವಿಸ್ತೀರ್ಣ ಹೊಂದಿದೆ. ಸಮುದ್ರಕ್ಕೆ ಮುಖ ಮಾಡಿದ ಮನೆಯಲ್ಲಿ ಹಲವಾರು ವರ್ಷಗಳಿಂದ ಸುಶಾಂತ್ ಸಿಂಗ್ ವಾಸವಿದ್ದರು. ಸಾವಿನ ನಂತರ ಯಾರೂ ಈ ಮನೆಯಲ್ಲಿ ಉಳಿದುಕೊಳ್ಳಲು ಇಷ್ಟ ಪಟ್ಟಿರಲಿಲ್ಲ. ಇದೀಗ ನಟಿ ಅದಾ ಶರ್ಮಾ ಆ ಮನೆಯನ್ನು ಖರೀದಿಸಿದ್ದಾರೆ.