ಬೆಂಗಳೂರು:- ಬಿಗ್ ಬಾಸ್ ಸ್ಪರ್ಧಿಯಾಗಿದ್ದ ಪ್ರಥಮ್ ತಮ್ಮ ಮಾತುಗಾರಿಕೆಯಿಂದಲೇ ಜನಮನ್ನಣೆ ಪಡೆದಿದ್ದರು. ಯಾವುದೇ ವಿಷಯವಾಗಲಿ ನೇರವಾಗಿ ಮಾತನಾಡುವ ಪ್ರಥಮ್ ಇತ್ತೀಚೆಗೆ ದರ್ಶನ್ ಸೇರಿ ಸಾಕಷ್ಟು ವಿಚಾರದಲ್ಲಿ ಸುದ್ದಿಯಲ್ಲಿದ್ದರು.
ಆದರೆ ಒಳ್ಳೆ ಹುಡುಗ ಪ್ರಥಮ್ ಮೇಲೆ ಕನ್ನಡಿಗರು ಕೆಂಡಕಾರುತ್ತಿದ್ದಾರೆ. ಕಾರಣ ಅವರು ಹೆಣ್ಣು ಮಕ್ಕಳ ಜೊತೆ ಪಬ್ಲಿಕ್ ನಲ್ಲಿ ವರ್ತಿಸುತ್ತಿರುವುದ ಕಂಡು. ಹೌದು, Bigboss ಪ್ರಥಮ್ ಹುಚ್ಚಾಟಕ್ಕೆ ಕನ್ನಡಿಗರು ಕೆಂಡಾಮಂಡಲರಾಗಿದ್ದಾರೆ. ಸೆಲೆಬ್ರೇಟಿ ಹೆಣ್ಣುಮಕ್ಕಳ ಜೊತೆ ಸಾರ್ವಜನಿಕವಾಗಿ ವರ್ತಿಸೋ ರೀತಿಗೆ ಜನ ಸಿಟ್ಟಾಗಿದ್ದಾರೆ. ಕಾಮೆಂಟ್ ಮೂಲಕ ಬಾಯಿಗೆ ಬಂದ ರೀತಿ ಜನ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಹೆಂಗೆಂಗೋ ಆಡಬೇಡ ಗುರೂ ಪ್ರಥಮ್ ಅಂತ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.
ಕ್ಯಾಮೆರಾಗಳ ಮುಂದೆ ನಟಿಯರಿಗೆ ಪ್ರಥಮ್ ಇರ್ರಿಟೇಟ್ ಮಾಡುತ್ತಿದ್ದು, ಇದು ಸರಿಯಲ್ಲ ಅನ್ನುತ್ತಿದ್ದಾರೆ. ಇತ್ತೀಚಿಗೆ Bigboss ಅನುಷಾ ರೈ ಮತ್ತು ಸೋನು ಗೌಡಗೂ ಪ್ರಥಮ್ ಇರ್ರಿಟೇಟ್ ಮಾಡಿದ್ದರು. ಅಷ್ಟೇ ಅಲ್ಲದೇ ಕಾರ್ಯಕ್ರಮವೊಂದರಲ್ಲಿ ಪ್ರಿಯಾಂಕಾ ಉಪೇಂದ್ರಗೂ ಹಿಂಸೆ ಮಾಡಿದ್ದರು. ಹೀಗಾಗಿ ಪ್ರಥಮ್ ನಿಮ್ಮ ಹುಚ್ಚಾಟಕ್ಕೆ ಬ್ರೇಕ್ ಹಾಕಿ ಎಂದು ಜನ ಅಂತಿದ್ದಾರೆ. ಕಾಮುಕ ಪ್ರಥಮ್ ಅಂತ ಕಾಮೆಂಟ್ ಮಾಡಿ ಜನ ಕಿಡಿಕಾರಿದ್ದಾ