ರಾಮಾಚಾರಿ ಸೀರಿಯಲ್ ಮೂಲಕ ನಟಿ ಮೌನ ಗುಡ್ಡೆ ಮನೆ ಸಾಕಷ್ಟು ಖ್ಯಾತಿ ಘಳಿಸಿದ್ದಾರೆ. ತನ್ನ ಸೌಂದರ್ಯ ಹಾಗೂ ನಟನೆಯ ಮೂಲಕವೇ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿರೋ ನಟಿ ಇದೀಗ ತಮ್ಮ ಫೋಟೋವನ್ನು ಹಂಚಿಕೊಂಡು ಶಾಕ್ ನೀಡಿದ್ದಾರೆ.
ಇತ್ತೀಚೆಗೆ ಮೌನ ಗುಡ್ಡೆಮನೆ ಇನ್ಸ್ಟಾಗ್ರಾಮ್ನಲ್ಲಿ ಕೆಲವು ಫೋಟೋಗಳನ್ನು ಪೋಸ್ಟ್ ಮಾಡುವ ಮೂಲಕ ನೆಟ್ಟಿಗರಿಗೆ ಶಾಕ್ ಹಾಗೂ ಅಚ್ಚರಿ ಮೂಡಿಸಿದ್ದಾರೆ. ನಟಿ ಶೇರ್ ಮಾಡಿರುವ ಫೋಟೋದಲ್ಲಿ ಸಂಪೂರ್ಣವಾಗಿ ಕೂದಲನ್ನು ಭೋಳಿಸಲಾಗಿದೆ.
ಮೌನ ಗುಡ್ಡೆಮನೆ ಇತ್ತೀಚೆಗೆ ರಾಮಾಚಾರಿ ಸೀರಿಯಲ್ನ ಕೆಲವು ಬಿಟಿಎಸ್ ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡಿದ್ದಾರೆ. ಇದರಲ್ಲಿ ನಟಿ ಕೆಂಪು ಬಣ್ಣದ ಸೀರೆ ಉಟ್ಟು ಎರಡೂ ಕೈಗಳಲ್ಲಿ ಬೆಂಕಿಯ ತಟ್ಟೆ ಹಿಡಿದು, ತಲೆಯ ಮೇಲೂ ಇಟ್ಟಿರುವುದನ್ನು ಕಾಣಬಹುದು.
ಮೌನ ಶೇರ್ ಮಾಡಿರುವ ಫೋಟೋದಲ್ಲಿ ಸಂಪೂರ್ಣವಾಗಿ ಬಾಲ್ಡ್ ಮಾಡಿದ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ, ಫೋಟೋ ನೋಡಿದ ನೆಟ್ಟಿಗರು ಶಾಕ್ ಆಗಿದ್ದಾರೆ. ಇದೇನಿದು ಸೀರಿಯಲ್ಗಾಗಿ ಅಷ್ಟುದ್ದದ ಕೂದಲಿಗೆ ಕತ್ತರಿ ಹಾಕ್ಬಿಟ್ರಾ ಎಂದು ಪ್ರಶ್ನೆ ಮಾಡಿದ್ದಾರೆ.
ನಟಿಯ ಬಾಲ್ಡ್ ಲುಕ್ ನೋಡಿ ಎಲ್ಲರೂ ಶಾಕ್ ಆಗಿದ್ದಾರೆ. ಅಯ್ಯೋ ಸೀರಿಯಲ್ಗಾಗಿ ಕೂದಲೆಲ್ಲ ಕಟ್ ಮಾಡಿದ್ರಾ? ಎಂದು ಕಮೆಂಟ್ ಮಾಡಿದ್ದಾರೆ. ಅಸಲಿಗೆ ಇದು ಹೇರ್ ಸ್ಟೈಲಿಸ್ಟ್ ಕೈಚಳಕ ಅಷ್ಟೆ. ನಟಿಗೆ ವಿಗ್ ಇಟ್ಟಿರುವಂತೆ ಕಂಡು ಬಂದಿದೆ.
ಹೃದಯದಲ್ಲಿ ಕೃಪೆ, ಆತ್ಮದಲ್ಲಿ ಶಕ್ತಿ. ಹೊಸ ವರ್ಷ ಮುಂಗಡ ಶುಭಾಶಯಗಳು! ನಿಮ್ಮ ಜೀವನದಲ್ಲಿ ಹೊಸ ಆರಂಭ, ಹೊಸ ಆಶಯಗಳು ಮತ್ತು ಹೊಸ ಯಶಸ್ಸುಗಳು ಪ್ರತಿ ಹಂತದಲ್ಲೂ ಬೆಳಗುಹೊರಿಸಲಿ. ಈ ಹೊಸ ವರ್ಷವು ನಿಮಗೆ ಆರೋಗ್ಯ, ಸಂತೋಷ ಮತ್ತು ಸಮೃದ್ಧಿಯನ್ನು ತರಲಿ. ಹೊಸ ವರ್ಷ ನಿಮಗೆ ಸಂತೋಷಕರವಾಗಲಿ! ಎಂದು ನಟಿ ಫೋಟೋಗೆ ಕ್ಯಾಪ್ಶನ್ ನೀಡಿದ್ದಾರೆ.