ಅಗ್ನಿಸಾಕ್ಷಿ ಖ್ಯಾತಿಯ ವೈಷ್ಣವಿ ಪ್ರೇಕ್ಷಕರಿಗೆ ಸನ್ನಿಧಿಯಂತಲೇ ಫೇಮಸ್ ಆಗಿದ್ದಾರೆ. ಸದ್ಯ ಸೀತಾ ರಾಮ ಧಾರವಾಹಿಯಲ್ಲಿ ಬ್ಯುಸಿಯಾಗಿರುವ ವೈಷ್ಣವಿ ಗೌಡ ಇದೀಗ ವಿಡಿಯೋವೊಂದನ್ನು ಶೇರ್ ಮಾಡಿದ್ದಾರೆ.
ಅಗ್ನಿಸಾಕ್ಷಿ ಸೀರಿಯಲ್ ಮುಗಿದ ಬಳಿಕ ತನ್ನದೇ ಯೂಟ್ಯೂಬ್ ಚಾನೆಲ್ ನಲ್ಲಿ ಬ್ಯುಸಿ ಆಗಿದ್ದ ನಟಿ ವೈಷ್ಣವಿ ಗೌಡ ಇದೀಗ ಮತ್ತೆ ಕಿರುತೆರೆಗೆ ರೀ ಎಂಟ್ರಿ ಕೊಟ್ಟಿದ್ದಾರೆ. ಜೀ ಕನ್ನಡದ ಸೀತಾ ರಾಮ ಸೀರಿಯಲ್ ಮೂಲಕ ಮತ್ತೆ ಟಿವಿ ಪರದೆ ಮೇಲೆ ಮಿಂಚುತ್ತಿದ್ದಾರೆ.
ಅಗ್ನಿಸಾಕ್ಷಿ ಧಾರಾವಾಹಿಯ ಸನ್ನಿಧಿ ಎಂದೇ ಖ್ಯಾತಿಯನ್ನ ಗಳಿಸಿದವರು ವೈಷ್ಣವಿ ಗೌಡ. ವೈಷ್ಣವಿ ಗೌಡ ಭರ್ಜರಿ ಕಾಮಿಡಿ ಎಂಬ ಕಾರ್ಯಕ್ರಮದ ನಿರೂಪಕಿಯೂ ಹೌದು. ಬಿಗ್ ಬಾಸ್ ನ ಮಾಜಿ ಸ್ಫರ್ಧಿಯೂ ಹೌದು. ವಿವಾದಾತ್ಮಕ ಜಾಹೀರಾತಾದ ಜಂಗ್ಲಿ ರಮ್ಮಿಯ ಪ್ರಚಾರವನ್ನು ಮಾಡಿದ್ದಾರೆ. ತಾವು ಪ್ರಚಾರ ಮಾಡಿರುವ ವಿಡಿಯೋ ತುಣುಕನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಇದೀಗ ವಿವಾದ ಸೃಷ್ಟಿಸಿದೆ.
ರಮ್ಮಿ ಸರ್ಕಲ್ನಲ್ಲಿ ದೊಡ್ಡ ದೊಡ್ಡ ರಮ್ಮಿ ಟೂರ್ನಾಮೆಂಟ್ಗಳು ನಡೆಯುತ್ತಾವೆ, ವರ್ಲ್ಡ್ ರಮ್ಮಿ ಟೂರ್ನಾಮೆಂಟ್ ಇರಬಹುದು ಎಂದು ರಮ್ಮಿ ಹೊಗಳಿದ್ದಾರೆ.
ಆನ್ಲೈನ್ ರಮ್ಮಿ ಗೇಮ್ನಿಂದ ದಿನನಿತ್ಯ ನೂರಾರು ಯುವಕರು ಬೀದಿಗೆ ಬರುತ್ತಿದ್ದಾರೆ. ಇದರಿಂದ ಪ್ರತಿನಿತ್ಯ ನೂರಾರು ಯುವಕರು ರಮ್ಮಿ ಗೇಮ್ ಜೂಜಿನ ಗೀಳಿಗೆ ಬಿದ್ದು ಬೀದಿಗೆ ಬರುತ್ತಿದ್ದಾರೆ. ಹೀಗಾಗಿ ಇದನ್ನು ಪೋಸ್ಟ್ ಮಾಡಿದ ಬಳಿಕ ನೆಟ್ಟಿಗರು ಕ್ಲಾಸ್ ತೆಗೆದುಕೊಳ್ಳುತ್ತಾರೆ ಎಂಬ ಕಾರಣಕ್ಕೆ ನಟಿ ಕಮೆಂಟ್ ಸೆಕ್ಷನ್ ಬ್ಲಾಕ್ ಮಾಡಿದ್ದಾರೆ.
ವೈಷ್ಣವಿ ಗೌಡ ಅವರಿಗೆ ಒಂದೂವರೆ ಮಿಲಿಯನ್ ಜನ ಫಾಲೋವರ್ಸ್ ಇದ್ದಾರೆ. ಇಷ್ಟೊಂದು ಫಾಲೋವರ್ಸ್ ಹೊಂದಿರುವ ನಟಿ ರಮ್ಮಿ ಆಡಿ ಎಂದು ತಮ್ಮ ಅಭಿಮಾನಿಗಳಿಗೆ ಮತ್ತು ಜನರಿಗೆ ಪ್ರೋತ್ಸಾಹಿಸುವುದು ಸರಿಯಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.