ಬಾಲಿವುಡ್ ಚಿತ್ರರಂಗದ ಸಾಕಷ್ಟು ಸೆಲೆಬ್ರಿಟಿಗಳು ಅಯೋಧ್ಯೆಗೆ ತೆರಳಿ ರಾಮಲಲ್ಲಾನ ದರ್ಶನ ಪಡೆಯುತ್ತಿದ್ದಾರೆ. ಇತ್ತೀಚೆಗೆ ನಟಿ ಪ್ರಿಯಾಂಕಾ ಚೋಪ್ರಾ ಕುಟುಂಬ ಸದಸ್ಯರ ಜೊತೆ ಅಯೋಧ್ಯೆಗೆ ಭೇಟಿ ನೀಡಿದ್ದರು. ಇದೀಗ ಬಾಲಿವುಡ್ ನಟಿ ಊರ್ವಶಿ ರೌಟೇಲಾ ಕೂಡ ಕುಟುಂಬ ಸಮೇತ ಅಯೋಧ್ಯೆಗೆ ಆಗಮಿಸಿದ್ದು, ರಾಮಲಲ್ಲಾನ ದರ್ಶನವನ್ನು ಪಡೆದರು.
ರಾಮಮಂದಿರಕ್ಕೆ ಆಗಮಿಸಿದ ಊರ್ವಶಿ ರೌಟೇಲಾ ಸುಮಾರು 30 ನಿಮಿಷಗಳ ಕಾಲ ದೇವಸ್ಥಾನದಲ್ಲಿರು. ದೇವರ ಆಶೀರ್ವಾದ ಪಡೆದ ನಟಿ ಊರ್ವಶಿ ಹಾಗೂ ಅವರ ಕುಟುಂಬದವರಿಗೆ ಅರ್ಚಕ ಪ್ರದೀಪ್ ದಾಸ್ ಪ್ರಸಾದ ನೀಡಿದರು. ಮಹರ್ಷಿ ವಾಲ್ಮೀಕಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಊರ್ವಶಿ ರೌಟೇಲಾ ನೇರವಾಗಿ ರಾಮಮಂದಿರಕ್ಕೆ ತಲುಪಿ ರಾಮಲಲ್ಲಾನ ದರ್ಶನ ಪಡೆದರು.
ಅಯೋಧ್ಯೆ ರಾಮಮಂದಿರಲ್ಲಿ ರಾಮನ ಪ್ರಾಣ ಪ್ರತಿಷ್ಠಾಪನಾ ಸಮಾರಂಭದಲ್ಲಿ ಪ್ರಪಂಚದಾದ್ಯಂತದಿಂದ ಅನೇಕ ಪ್ರತಿಷ್ಠಿತ ವ್ಯಕ್ತಿಗಳು ಭಾಗವಹಿಸಿದ್ದರು. ಅಂದು ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗದೇ ಇರುವವರು ನಂತರದ ದಿನಗಳಲ್ಲಿ ದೇವಾಲಯಕ್ಕೆ ಭೇಟಿ ನೀಡುತ್ತಿದ್ದಾರೆ.